ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದ.ಕ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣಗೊಳಿಸಲು ಸದನದಲ್ಲಿ ಶಾಸಕ ಹರೀಶ್ ಪೂಂಜ ಒತ್ತಾಯ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರುನಾಮಕರಣ ಮಾಡುವಂತೆ ಶಾಸಕ ಹರೀಶ್ ಪೂಂಜಾ ವಿಧಾನಸಭೆಯಲ್ಲಿ ಒತ್ತಾಯಿಸಿದರು.

ವಿಧಾನಸಭೆಯಲ್ಲಿಅವರು, “ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರುನಾಮಕರಣ ಮಾಡಬೇಕು ಎಂದು ಗಮನ ಸೆಳೆದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಿಜೆಪಿ ಜನಪ್ರತಿನಿಧಿಗಳು ಮಂಗಳೂರು ಎಂದು ಬದಲಾವಣೆಗೆ ಆಗ್ರಹ ಮಾಡುತ್ತಿದ್ದಾರೆ. ಮಂಗಳೂರು ಅನ್ನೋದು ಒಂದು ಬ್ರಾಂಡ್ ಆಗಿರುವ ಹೆಸರು. ನಾವು ಎಲ್ಲೆಲ್ಲಾ ವ್ಯಾಪಾರ ಮಾಡುತ್ತೇವೆ, ಎಲ್ಲೆಲ್ಲಾ ಇದ್ದೇವೆ, ನಾವು ಮಂಗಳೂರಿನವರು ಎಂದು ಗುರುತಿಸಿಕೊಂಡವರು. 1931ರಿಂದ ಎಸ್.ಯು.ಪಣಿಯಾಡಿ ಅವರ ಕಾಲದಿಂದಲೂ ಮರುನಾಮಕರಣ ಹೋರಾಟ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಸ್ಥಳಗಳನ್ನು ಮಂಗಳೂರು ಹೆಸರಲ್ಲಿ ಕರೆಯಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆಯೂ ಮಂಗಳೂರು ಸಮಾಚಾರ, ಮಂಗಳೂರು ಎಂಬ ಹೆಸರು ಜಗಜ್ಜಾಹಿರವಾಗಿರುವಂಥ ಹೆಸರಾಗಿದೆ” ಎಂದು ವಿವರಿಸಿದರು.

Related posts

ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ , ಉಪಾಧ್ಯಕ್ಷರಾಗಿ ಶ್ರೀಮತಿ ಸುರೇಖಾ ಆಯ್ಕೆ

Suddi Udaya

ಕೊಕ್ಕಡದಲ್ಲಿ ವಿಧಾನಪರಿಷತ್ ಉಪಚುನಾವಣೆ ನಿಮಿತ್ತ ಪೂರ್ವಭಾವಿ ಸಭೆ

Suddi Udaya

ಹೊಸಂಗಡಿ: ಕಲ್ಯಾಣಿ ನಿಧನ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ, ಉಜಿರೆ ಎಸ್.ಡಿ.ಎಂ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಸ್ಥಾನ: ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಕೆ‌.ಮೋಹನ್ ಕುಮಾರ್ ಅವರಿಂದ ಅಭಿನಂದನೆ

Suddi Udaya

ಕಾಶಿಪಟ್ಣ ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya

ಕಳೆದುಕೊಂಡಿದ್ದ ಚಿನ್ನವನ್ನು ಮರಳಿ ದಂಪತಿಗಳಿಗೆ ಹಸ್ತಾಂತರಿಸಿದ ಲಾಡ್ಜ್ ಮಾಲೀಕ

Suddi Udaya
error: Content is protected !!