23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತೋಟತ್ತಾಡಿ: ಹಾಡು ಹಗಲೇ ಮನೆಯ ಬಾಗಿಲ ಬೀಗವನ್ನು ಮುರಿದು ಗಾದ್ರೇಜ್‌ನ ಲಾಕರ್ ನಲ್ಲಿಟ್ಟಿದ್ದ ರೂ. 1.30 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಬೆಳ್ತಂಗಡಿ: ಹಾಡು ಹಗಲೇ ಮನೆಯೊಂದರ ಬಾಗಿಲ ಬೀಗವನ್ನು ಮುರಿದು ಮನೆಯೊಳಗಡೆ ನುಗ್ಗಿದ್ದ ಕಳ್ಳರು ಗಾದ್ರೇಜ್‌ನ ಲಾಕರ್ ನಲ್ಲಿ ಇದ್ದ ರೂ. 1.30 ಲಕ್ಷದ ಚಿನ್ನಾಭರಣ ಕಳವುಗೈದ ಘಟನೆ ಆ.12ರಂದು ತೋಟತ್ತಾಡಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ತೋಟತ್ತಾಡಿ ಗ್ರಾಮದ ವೆನ್ನಾಯಿಲ್‌ ಮನೆ ನಿವಾಸಿ ಕುಂಞಿ ಕೃಷ್ಣನ್‌ ಎಂಬವರ ಪುತ್ರ ನಿಧೀಶ್‌ ವಿ.ಕೆ ಎಂಬವರ ದೂರಿನಂತೆ ತೋಟತ್ತಾಡಿ ಗ್ರಾಮದ ವೆನ್ನಾಯಿಲ್‌ ಮನೆ ಎಂಬಲ್ಲಿ ತಂದೆ ಕುಂಞಿ ಕೃಷ್ಣನ್‌ ಒಬ್ಬರೇ ಇದ್ದು ಆ.12 ರಂದು ಬೆಳಿಗ್ಗೆ 9 ಗಂಟೆಗೆ ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗಿದ್ದರು.ಮಧ್ಯಾಹ್ನ 1ಗಂಟೆಯ ಸುಮಾರಿಗೆ ಊಟಕ್ಕೆಂದು ಮನೆಗೆ ಬಂದಾಗ ಮನೆಯ ಬಾಗಿಲ ಬೀಗವನ್ನು ಮುರಿದು ಮನೆಯೊಳಗಡೆ ಇದ್ದ ಗಾದ್ರೇಜ್‌ ನಲ್ಲಿಟ್ಟಿದ್ದ ಬಟ್ಟೆಗಳು ಚೆಲ್ಲಾಪಿಲ್ಲಯಾಗಿದ್ದು, ಲಾಕರ್‌ ನ ಬಾಕ್ಸ್‌ ನಲ್ಲಿದ್ದ ಚಿನ್ನದ ಸರ ಕಳವಾಗಿರುವುದು ಬೆಳಕಿಗೆ ಬಂದಿತ್ತು.


ಕೂಡಲೇ ಅವರು ಮಂಗಳೂರಿನಲ್ಲಿದ್ದ ಪುತ್ರ ನಿಧೀಶ್‌ ಗೆ ತಿಳಿಸಿದರು. ನಿಧೀಶ್ ಮಂಗಳೂರಿನಿಂದ ಹೊರಟು ಮನೆಗೆ ಬಂದು ನೋಡಿದಾಗ ಮನೆಯ ಬಾಗಲಿನ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಮನೆಯೊಳಗೆ ಪ್ರವೇಶಿಸಿ ಗಾದ್ರೇಜ್‌ ನ ಲಾಕರ್‌ ನ ಒಳಗೆ ಇ ಟ್ಟಿದ್ದ ಅಂದಾಜು ರೂ,1,30,000 ಮೌಲ್ಯದ ಸುಮಾರು 2 ಪವನ್‌ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಬಾಕ್ಸ್‌ ನ್ನು ಅಲ್ಲೇ ಬಿಟ್ಟು ಹೋಗಿರುವುದಾಗಿದೆ ಬೆಳಕಿಗೆ ಬಂದಿತ್ತು.
ಈ ಬಗ್ಗೆ ನಿಧೀಶ್‌ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆ ಅ.ಕ್ರ 52/2025 ಕಲಂ: 331(3), 305 ಬಿಎನ್ಎಸ್-2023ಯಂತೆ ಪ್ರಕರಣ ದಾಖಲಾಗಿರುತ್ತದೆ

Related posts

ಗುಂಡೂರಿ ಸ.ಕಿ.ಪ್ರಾ. ಶಾಲೆಯಲ್ಲಿ 79ನೇ ಸ್ವಾತಂತ್ರ ದಿನಾಚರಣೆ

Suddi Udaya

ಮದಕುಡೆ ಕುಟುಂಬಸ್ಥರಿಂದ ಪೆರಿಂಜೆ ಸ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಬಿಜೆಪಿ ದ.ಕ. ಜಿಲ್ಲಾ ಪ್ರಕೋಷ್ಠದ ಸಹಸಂಚಾಲಕರಾಗಿ ರಕ್ಷಿತ್ ಶೆಟ್ಟಿ ಪಣಿಕ್ಕರ ಆಯ್ಕೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶಿವಗಿರಿ ಯಾತ್ರೆ, ಹಲವಾರು ಕ್ಷೇತ್ರ ದರ್ಶನ

Suddi Udaya

ಕರಿಮಣೇಲು ಸಂತ ಜೂಡರ ಶಾಲೆಯಲ್ಲಿ ಶ್ರೀ ಧವಳ ಕಾಲೇಜಿನ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭ

Suddi Udaya

ಧರ್ಮಸ್ಥಳ: ನೇತ್ರಾವತಿ ಅಜಿಕುರಿ ಬಳಿ ರಸ್ತೆಗೆ ಬಿದ್ದ ಮರ

Suddi Udaya
error: Content is protected !!