32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಟ್ರಮೆ ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆ

ಪಟ್ರಮೆ: ಪಟ್ರಮೆ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಆ. 14 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾ.ಪಂ. ಅಧ್ಯಕ್ಷ ಮನೋಜ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಸಭೆಯನ್ನು ಮುನ್ನಡೆಸಿದರು.

ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಈ ವೇಳೆ 11 ವರ್ಷಗಳ ಕಾಲ ಪ್ರಭಾರ ಪಂಚಾಯತ್ ಅಭಿವೃಧ್ಧಿ ಅಧಿಕಾರಿಯಾಗಿದ್ದ ಅಮ್ಮಿ ಬಿ.ಪಿ ರವರು ಇದೀಗ ಕಡಬ ತಾಲೂಕಿನ ಮರ್ದಳ ಗ್ರಾ.ಪಂ ಗೆ ವರ್ಗಾವಣೆಗೊಂಡಿದ್ದು ಆ ಪ್ರಯುಕ್ತ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮೋಹಿನಿ, ಸದಸ್ಯರು, ಸಂಜೀವಿನಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಉಪಸ್ಥಿತರಿದ್ದರು. ಸ್ವಚ್ಛತೆಯ ಬಗ್ಗೆ ಪ್ರತಿಜ್ಞಾವಿಧಿ ಬೋಧನೆಯು ನಡೆಯಿತು.

ಅನುಪಾಲನಾ ಮತ್ತು ವಾರ್ಡ್ ಸಭೆಯ ವರದಿಯನ್ನು ಸಿಬ್ಬಂದಿ ಲೋಕೇಶ್ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಕಲ್ಮಂಜ : ಶ್ರೀ ಬದಿನಡೆ ಕ್ಷೇತ್ರದಲ್ಲಿ ವೀರ ಯೋಧರ ರಕ್ಷಣೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ

Suddi Udaya

ಉಜಿರೆ: ಶ್ರೀ ಧ. ಮಂ. ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ಪಾರೆಂಕಿ :ಶ್ರೀ ರಾಮನಗರಹಾರಬೆ ಶ್ರೀ ದುಗಲಾಯ ಮತ್ತು ಗುಳಿಗದೈವಗಳ ನೇಮೋತ್ಸವ

Suddi Udaya

ಗೇರುಕಟ್ಟೆ ಕೀರ್ತಿ ಶೇಷ ನರಸಿಂಹ ಮೂರ್ತಿ ಹಾಗೂ ಕೀರ್ತಿ ಶೇಷ ಸುರೇಶ್ ಪೈಯವರಿಗೆ ನುಡಿನಮನ ಹಾಗೂ ಸಂಸ್ಮರಣೆ ಯಕ್ಷಗಾನ ತಾಳಮದ್ದಳೆ 

Suddi Udaya

ಬೆಳ್ತಂಗಡಿಯ ಯುವ ನ್ಯಾಯವಾದಿ ಪ್ರಜ್ವಲ್ ನಿಧನ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯ ಬ್ಯೂಟಿಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿಯ ಸಮಾರೋಪ ಸಮಾರಂಭ

Suddi Udaya
error: Content is protected !!