ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ರಾಜ್ಯದಲ್ಲಿ ಸಿವಿಲ್ ಸರ್ವಿಸ್ ಬೋರ್ಡ್ ರಚನೆಯ ಕುರಿತು ಸದನದಲ್ಲಿ ಪ್ರಶ್ನಿಸಿದ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್

ಬೆಳ್ತಂಗಡಿ: 2024 ಸೆ. 26 ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ರಾಜ್ಯದಲ್ಲಿ ಸಿವಿಲ್ ಸರ್ವಿಸ್ ಬೋರ್ಡ್ ರಚನೆ ಮಾಡುವ ಸಂಬಂಧ ಸಚಿವ ಸಂಪುಟ ಉಪಸಮಿತಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಅವರು ವಿಧಾನಪರಿಷತ್ತಿನಲ್ಲಿ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ದೇಶದಾದ್ಯಂತ ಬಹುತೇಕ ರಾಜ್ಯಗಳಲ್ಲಿ ಸಿವಿಲ್ ಸರ್ವೀಸ್ ಬೋರ್ಡ್ ರಚನೆಯಾಗಿದ್ದು, ಅವು ಉತ್ತಮ ವ್ಯವಸ್ಥೆಯಾಗಿ ಮನ್ನಣೆಗಳಿಸಿರುವ ಹಿನ್ನಲೆಯಲ್ಲಿ ಯಾವ ಕಾಲಮಿತಿಯೊಳಗೆ ರಾಜ್ಯದಲ್ಲಿ ಸಿವಿಲ್ ಸರ್ವಿಸ್ ಬೋರ್ಡ್ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರಲ್ಲಿ ಪ್ರಶ್ನೆ ಕೇಳಿದ್ದರು.

ಸಾಕಷ್ಟು ಪೂರಕ ಮತ್ತು ಪರಿಣಾಮಕಾರಿಯಾಗಿರುವ ಸಿವಿಲ್ ಸರ್ವಿಸ್ ಸಚಿವ ಸಂಪುಟ ಉಪಸಮಿತಿಯು ಸಭೆಗಳನ್ನು ನಡೆಸಿ ಸುದೀರ್ಘವಾಗಿ ಚರ್ಚಿಸಿ ಸಂಪುಟದ ಮು೦ದೆ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅದೇ ರೀತಿ 2018-19 ಸಾಲಿಗೆ ಸಂಬಂಧಿಸಿದಂತೆ ರೂ.1.00 ಲಕ್ಷದ ವರೆಗಿನ ಸಾಲ ಮನ್ನಾ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಸಾಲ ಮನ್ನಾ ಹಣ ಬಿಡುಗಡೆಗೆ ಪ್ರಸ್ತುತ ಬಾಕಿ ಇರುವ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ಹಾಗೂ ಎಷ್ಟು ಮೊತ್ತ ಪಸ್ತುತ ಬಾಕಿ ಇದೆ ಎಂದು ಪ್ರತಾಪಸಿಂಹ ನಾಯಕ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು 2018-19ನೇ ಸಾಲಿನ ರೂ.1.00 ಲಕ್ಷದವರೆಗಿನ ಸಾಲ ಮನ್ನಾ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2470 ರೈತರಿಗೆ ರೂ.19.13 ಕೋಟಿ ಸಾಲಮನ್ನಾ ಮೊತ್ತ ಬಿಡುಗಡೆಗೆ ಬಾಕಿ ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ 728 ರೈತರು ಒಳಗೊಂಡಂತೆ ಅರ್ಹತೆ ಗುರುತಿಸಲು ಬಾಕಿ ಇದ್ದ 13,334 ರೈತರ ಮಾಹಿತಿಯನ್ನು ತಂತ್ರಾಂಶದಲ್ಲಿ ಸರಿಪಡಿಸಲು ಅವಕಾಶ ಕಲ್ಪಿಸುವಂತೆ ಮತ್ತು ಮನ್ನಾ ತಂತ್ರಾಂಶದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಅರ್ಹ ರೈತರ ಪಟ್ಟಿ ನೀಡಲು ನಿಬಂಧಕರಿಂದ ದಿನಾಂಕ:24-02-2022, 28-05-2024 ಮತ್ತು ಸರ್ಕಾರದ ದಿನಾಂಕ: 13-04-2022 ರ ಪತ್ರಗಳ ಮೂಲಕ ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ರವರಿಗೆ ಕೋರಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ 1742 ರೈತರು ಒಳಗೊಂಡಂತೆ ಹಸಿರು ಪಟ್ಟಿಯಲ್ಲಿರುವ 31,003 ರೈತರು ಮತ್ತು ಹಸಿರು ಪಟ್ಟಿಗೆ ತರಲು ಅರ್ಹತೆ ಗುರುತಿಸಲು ಬಾಕಿ ಇರುವ 13.334 ರೈತರು 44,337 0 ಕೋಟಿಗಳ ಅನುದಾನ 50.232.00 ಬಿಡುಗಡೆ ಮಾಡಲು ಕೋರಿ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲು ತಿಳಿಸಿದ್ದು ಅದರನ್ವಯ ಸಮರ್ಥನೆಯನ್ನು ನೀಡಿ ರೂ. 232.00 ಕೊಟಿಗಳ ಅನುದಾನ ಒದಗಿಸಲು ಆರ್ಥಿಕ ಇಲಾಖೆಗೆ ಪುನಃ ಪ್ರಸ್ತಾವನೆ ಸಲ್ಲಿಸಲು ಕ್ರಮವಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಮುಖ್ಯಮಂತ್ರಿಗಳು 2024-25ನೇ ಸಾಲಿಗೆ ಸಂಬಂಧಿಸಿದಂತೆ ರೂ.5788.74 ಲಕ್ಷಗಳು ಹಾಗೂ 2025-26 ನೇ ಸಾಲಿಗೆ ಸಂಬಂಧಿಸಿದಂತೆ 6242.59 ಲಕ್ಷಗಳ ಪ್ರೀಮಿಯಂ ಮೊತ್ತವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪಾವತಿಸಿರುತ್ತವೆ ಎಂದೂ ತಿಳಿಸಿದ್ದಾರೆ.

Related posts

ಅಟ್ಲಾಜೆ ದ.ಕ.ಜಿ.ಪ.ಕಿ.ಪ್ರಾ ಶಾಲೆಯಲ್ಲಿ ಅ೦ತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಕೊಕ್ಕಡದಲ್ಲಿ ಗಗನ್ ಪ್ರಾವಿಷನ್ ಸ್ಟೋರ್ಸ್ ಮತ್ತು ಗಗನ್ ಸ್ಟುಡಿಯೋ ಶುಭಾರಂಭ

Suddi Udaya

ಸುಲ್ಕೇರಿಮೊಗ್ರು, ಬಿಲ್ಲವ ಸಂಘದ ಸದಸ್ಯರಿಂದ ಶಿವಗಿರಿ ತೀರ್ಥಯಾತ್ರೆ

Suddi Udaya

ಗೇರುಕಟ್ಟೆ : ಕೊರಂಜ ಭಾರಿ ಮಳೆಗೆ ಚರಂಡಿ ನೀರು ಮನೆಯೊಳಗೆ

Suddi Udaya

ಬೆಳ್ತಂಗಡಿ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿಯ ಅಧ್ಯಕ್ಷರಾಗಿ ಶ್ರೀಧರ ಶೆಟ್ಟಿ ಪೊಸಲಾಯಿ ಆಯ್ಕೆ

Suddi Udaya

ಉಜಿರೆ :ಸಿದ್ದವನ ಗುರುಕುಲದ ಬಳಿ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ

Suddi Udaya
error: Content is protected !!