26.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುಲ್ಕೇರಿಮೊಗ್ರು, ಬಿಲ್ಲವ ಸಂಘದ ಸದಸ್ಯರಿಂದ ಶಿವಗಿರಿ ತೀರ್ಥಯಾತ್ರೆ

ಅಳದಂಗಡಿ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಸುಲ್ಕೇರಿಮೊಗ್ರು, ಹಾಗೂ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಸುಲ್ಕೇರಿಮೊಗ್ರು, ಇದರ ವತಿಯಿಂದ ಶಿವಗಿರಿ ಕ್ಷೇತ್ರ ದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು,


ಮಂಗಳೂರು ರೈಲ್ವೆ ನಿಲ್ದಾಣದಿಂದ ಹೊರಟು ವರ್ಕಳ ಶಿವಗಿರಿ ಆಶ್ರಮ ತಲುಪಿ ಅಲ್ಲಿಂದ ಶಾರದಾ ಪೀಠ ದರ್ಶನ, ಯಜ್ಞ ಮಂಟಪ, ವಿಶ್ರಾಂತಿ ಸ್ಥಳ ವೀಕ್ಷಿಸಿ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿಗಳ ಮೂಲ ಸಮಾಧಿ ದರ್ಶನ ಮಾಡಿ ಮಠದಲ್ಲಿ ಗುರು ಪೂಜೆ ಮುಗಿಸಿ ಚೆಂಬಲತಿಯಲ್ಲಿ ನಾರಾಯಣ ಗುರುಗಳ ಜನ್ಮ ಸ್ಥಳ ಸಂದರ್ಶಿಸಿ. ಮದ್ಯಾಹ್ನ ಕುಂನ್ನುಂಪಾರ ಬಾಲ ಸುಬ್ರಮಣ್ಯ ದೇವರ ದರ್ಶನ, ಗುರು ಪೂಜೆ, ಅರವಿಪುರ ದೇವರ ದರ್ಶನ ನಂತರ ತಮಿಳುನಾಡಿನ ಕನ್ಯಾಕುಮಾರಿಗೆ ಹೋಗಿ ಅಲ್ಲಿ ಕನ್ಯಾಕುಮಾರಿ ದೇವಿಯ ದರ್ಶನ ಪಡೆದು ಮರುದಿನ ಮರುತ ಮಲೆಯ ನಾರಾಯಣ ಗುರುಗಳು 6 ವರ್ಷ ತಪ್ಪಸ್ಸನ್ನಾಚರಿಸಿದ ಗುಹೆ ವೀಕ್ಷಣೆ ನಂತರ ಇಂದ್ರನು ಪಾಪವನ್ನು ತೊಳೆದ ಕೆರೆ ಹಾಗೂ ಸುಚೀಂದ್ರ ದೇವರ ದರ್ಶನ , ತಿರುವನಂತಪುರದ ಅನಂತ ಪದ್ಮನಾಭ ದೇವರ ದರ್ಶನ ಪಡೆದರು. ಈ ಯಾತ್ರೆಯ ಮಾಹಿತಿ ಹಾಗೂ ಮಾರ್ಗದರ್ಶನವನ್ನು ಶ್ರೀ ಸತ್ಯಾನಂದ ತೀರ್ಥ ಸ್ವಾಮಿಜಿ ಶಿವಗಿರಿಯವರು ನೀಡಿದರು. ಎರಡು ದಿನಗಳ ಈ ಯಾತ್ರೆಯಲ್ಲಿ 41 ಜನ ಸದಸ್ಯರು ಭಾಗವಹಿಸಿದರು.

Related posts

ಜು.27: ದ.ಕ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ಜಿಲ್ಲಾಧಿಕಾರಿ ಆದೇಶ

Suddi Udaya

ಕೆಐಒಸಿಎಲ್ ಸಂಸ್ಥೆಯನ್ನು ಎನ್.ಎಮ್.ಡಿ.ಸಿ ಸಂಸ್ಥೆಯೊಂದಿಗೆ ವೀಲೀನ ಪ್ರಕ್ರಿಯೆ: ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಿಎಮ್ಎಸ್

Suddi Udaya

ಲಯನ್ಸ್ ಕ್ಲಬ್ ವತಿಯಿಂದ ಸುಲ್ಕೇರಿ ಕೋಲ್ಯಾಯದಲ್ಲಿ ನದಿಯ ಅಣೆಕಟ್ಟಿಗೆ ಸಿಲುಕಿಕೊಂಡಿದ್ದ ಮರದ ದಿಮ್ಮಿ, ಕಸಕಡ್ಡಿಗಳ ತೆರವು ಕಾರ್ಯ

Suddi Udaya

ಉದ್ಯಮಿ ಒಕ್ಕಲಿಗ ಸಂಸ್ಥೆ ಮಂಗಳೂರಿನಲ್ಲಿ ಶುಭಾರಂಭ

Suddi Udaya

ಮಲವಂತಿಗೆ: ದಿಡುಪೆಯಲ್ಲಿ ಕೃಷಿ ತೋಟಗಳಿಗೆ ಕಾಡಾನೆಗಳ ದಾಳಿ : ಅಪಾರ ಕೃಷಿ ಹಾನಿ

Suddi Udaya

ಸೇವಾಭಾರತಿಯಿಂದ ಶಾಲಾ ಮಕ್ಕಳಿಗೆ ಕಿಟ್ ವಿತರಣೆ

Suddi Udaya
error: Content is protected !!