25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪರೀಕ ‘ ಸೌಖ್ಯವನ’ ದಲ್ಲಿ ಸ್ವಾತಂತ್ರ್ಯ ದಿನಾಚರಣೆ:

ಪರೀಕ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ದೇಶದ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯವೈದ್ಯಾಧಿಕಾರಿ ಡಾ| ಗೋಪಾಲ ಪೂಜಾರಿ ಧ್ವಜಾರೋಹಣವನ್ನು ನೆರವೇರಿಸಿ ಶುಭ ಸಂದೇಶದಲ್ಲಿ ಪ್ರಸ್ತುತ ಭಾರತವು ಆನೇಕ ವಿಚಾರಗಳಲ್ಲಿ ಮುಂದುವರಿದ ರಾಷ್ಟ್ರವಾಗಿ ಮುಂದುವರಿದಿದ್ದು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಅನೇಕ ಮಂದಿ ತಮ್ಮ ಬಲಿದಾನವನ್ನು ಮಾಡಿದ್ದು ಆ ಮಹಾತ್ಮರ ನೆನಪನ್ನು ನಾವು ಈ ಸಂದರ್ಭದಲ್ಲಿ ಮಾಡುವುದು ಸೂಕ್ತ ಎಂದು ತಿಳಿಸಿದರು.ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆಯವರು ದೂರದೃಷ್ಠಿಯಿಂದ ಸ್ಥಾಪನೆ ಮಾಡಿದ ಪ್ರಕೃತಿ ಚಿಕಿತ್ಸಾ ಕೇಂದ್ರಗಳು ದೇಶ ವಿದೇಶದಲ್ಲಿ ಪ್ರಖ್ಯಾತಿಯನ್ನು ಪಡೆದು ಔಷಧಿ ರಹಿತ ಚಿಕಿತ್ಸಾ ಪದ್ದತಿಯಾದ ಇದಕ್ಕೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಕೂಡ ತನ್ನ ಒಲವು ಹಾಗೂ ಬದ್ದತೆಯನ್ನು ವ್ಯಕ್ತ ಪಡಿಸಿದ್ದರು ಎಂದು ತಿಳಿಸಿದರು.


ಸಾಧಕರಾಗಿ ಅತಿಥಿ ಸ್ಥಾನದಿಂದ ಉಪಸ್ಥಿತರಿದ್ದ ದಿನೇಶ್ ಮೈಸೂರು ರವರು ಶುಭ ಹಾರೈಸಿ ಸೌಖ್ಯವನದ ಬಗ್ಗೆ ತನ್ನ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.ಡಾ ಶೋಭಿತ್ ಶೆಟ್ಟಿ ಹಾಗೂ ಡಾ ಪೂಜಾ ಜಿ ರವರು ತಮ್ಮ ಅನಿಸಿಕೆಗಳ ಮಾತುಗಳನ್ನಾಡಿದರು.
ಸೌಖ್ಯವನದ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವನ್ನಿತ್ತರು.

Related posts

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಚಿಕಿತ್ಸಾ ನೆರವು

Suddi Udaya

ಮುಂಡಾಜೆ : ಸುಷ್ಮಾ ಪಟವರ್ಧನ್ ನಿಧನ

Suddi Udaya

ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಕ್ಷೇತ್ರದಲ್ಲಿ ದಾರಂದ ಪ್ರತಿಷ್ಠೆ: ಡಿಸೆಂಬರ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಅಳದಂಗಡಿ ಒಕ್ಕೂಟದ ಪದಾಧಿಕಾರಿಗಳ ಸಭೆ

Suddi Udaya

ಕಾಂಗ್ರೆಸ್ ಕಾರ್ಯಕರ್ತ ಯೋಗೀಶ್ ಗೌಡ ನೂಜಿಲ ಬಿಜೆಪಿಗೆ ಸೇರ್ಪಡೆ

Suddi Udaya

ಶ್ರೀ ಕೃಷ್ಣ ಆಸ್ಪತ್ರೆ,ಕಕ್ಕಿಂಜೆ ಸಹಸಂಸ್ಥೆ ಹೊಯ್ಸಳ ಹೆಲ್ತ್ ಕೇರ್, ಮೂಡಿಗೆರೆ ಹಾಗೂ ರೋಟರಿ ಕ್ಲಬ್, ಮೂಡಿಗೆರೆ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!