ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆ: ಆಕರ್ಷಕ ಪಥಸಂಚಲನ

ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಮಟ್ಟದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ತಾಲೂಕು ಆಡಳಿತ ಸೌಧ ಆವರಣದಲ್ಲಿ ನಡೆಯಿತು.

ತಹಶೀಲ್ದಾರ್ ಪೃಥ್ವಿ ಸಾನಿಕಂ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ಬಳಿಕ ಧ್ವಜ ಗೀತೆ ವೇಳೆ ಮಳೆ ಸುರಿದರೂ ಅತಿಥಿಗಳು, ಆರಕ್ಷಕ ಹಾಗೂ ಗೃಹ ರಕ್ಷಕ ದಳ, ಎನ್ ಸಿಸಿ, ಸ್ಕೌಟ್ ಎಂಡ್ ಗೈಡ್ಸ್, ಬುಲ್ ಬುಲ್, ಬ್ಯಾಂಡ್ ಸೆಟ್ ಹಾಗೂ ವಿದ್ಯಾರ್ಥಿಗಳು ನಿಂತಲ್ಲೇ ನಿಂತು ಮಳೆಗೂ ಒದ್ದೆಯಾದರೂ ಲೆಕ್ಕಿಸದೆ ರಾಷ್ಟ್ರ ಪ್ರೇಮ ಮೆರೆದು ಧ್ವಜಕ್ಕೆ ಗೌರವ ಸೂಚಿಸಿದ್ದು ಗಮನ ಸೆಳೆಯಿತು. ಮಳೆಗೂ ವಿದ್ಯಾರ್ಥಿಗಳು ಘೋಷಣೆ ಕೂಗಿದರೂ.

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕುಶಾಲಪ್ಪ ಎಸ್. ಪ್ರಧಾನ ಭಾಷಣ ಮಾಡಿದರು. ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಆರಕ್ಷಕ ಹಾಗೂ ಗೃಹ ರಕ್ಷಕ ದಳ, ಎನ್ ಸಿಸಿ, ಸ್ಕೌಟ್ಸ್ ಆ್ಯಡ್ ಗೈಡ್ಸ್, ಬುಲ್ ಬುಲ್, ಬ್ಯಾಂಡ್ ಸೆಟ್ ಮೂಲಕ ಆಕರ್ಷಕ ಪಥ ಸಂಚಲನ ನಡೆಯಿತು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್ ಎನ್. ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ರಾಜೇಶ್ ನಿರೂಪಿಸಿದರು.

Related posts

ಬೆಳ್ತಂಗಡಿ ಉಪನೋಂದಣಾಧಿಕಾರಿಯಾಗಿ ಅಮ್ಲಿನ್ ಡಿಸೋಜಾ ಅಧಿಕಾರ ಸ್ವೀಕಾರ

Suddi Udaya

ಲಾಯಿಲ ಬಲಮುರಿ ವಿಘ್ನೇಶ್ವರನ ಸನ್ನಿಧಿಯಲ್ಲಿ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ 108 ಕಾಯಿ ಗಣಹೋಮ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ಕಾರ್ಯಕ್ರಮ:

Suddi Udaya

ಬೆಳ್ತಂಗಡಿ ಸಂವಿಧಾನ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಮೀಸಲಾತಿ ಕುರಿತಾದ ವಿಶೇಷ ಸಭೆ

Suddi Udaya

ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಟ್ಲಾಜೆ ಇದರ ವತಿಯಿಂದ ಗಣರಾಜ್ಯೋತ್ಸವ ಆಚರಣೆ ಹಾಗೂ ವಾರ್ಷಿಕ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರಿಗೆ ಕಾಳುಮೆಣಸಿನ ಸುಧಾರಿತ ತಾಂತ್ರಿಕತೆಗಳ ತರಬೇತಿ ಕಾರ್ಯಕ್ರಮ

Suddi Udaya
error: Content is protected !!