September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ನಗರ ಸಮಿತಿ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ: ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ನಗರ ಸಮಿತಿ ವತಿಯಿಂದ “ಮಹಿಳಾ ಭದ್ರತೆಯೇ ಸ್ವಾತಂತ್ರ್ಯದ ಅಳತೆಗೋಲು” ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಂಜಯ ನಗರ ಜಂಕ್ಷನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ವನ್ನು ಅಧ್ಯಕ್ಷರಾದ ರುಬಿಯಾ ಬಾನು ನೆರವೇರಿಸಿದರು

ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷರಾದ ಶಮಾ ಉಜಿರೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಪನ್ಯಾಸಕರಾದ ಶಶಿಕಲಾ ಸುರೇಶ್ ಸ್ವಾತಂತ್ರದ ಸಂದೇಶ ಭಾಷಣವನ್ನು ನೀಡಿದರು. ಅಡ್ವಕೇಟ್ ಅಸ್ಮಾ ರಿಝ್ವಾನ್, ಸಫ್ರಾ ಅನೀಶ್, ತಸ್ಲಿಮಾ ನವಾಝ್, ಉಪಸ್ಥಿತರಿದ್ದರು.

ಉಪನ್ಯಾಸಕರಾದ ಶಶಿಕಲಾ ಅವರನ್ನು ಸನ್ಮಾನಿಸಿ, ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಿಳೆಯರಿಗೆ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಸೀಮಾ ಸ್ವಾಗತಿಸಿ, ಸುಝಾನ ವಂದಿಸಿದರು. ರಫಾ ಶಬೀರ್ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ನಿಂದ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ : 10 ತಿಂಗಳು ಕಳೆದರೂ ಕಾರ್ಮಿಕರಿಗೆ ಸಿಗದ ಕೂಲಿ, ಬಾಡಿಗೆ

Suddi Udaya

ಶೇಡಿಯಿಂದ ಕುಕ್ಕಾಜೆ ಯವರೆಗೆ ರಸ್ತೆ ಬದಿಯ ಗಿಡ ಗಂಟಿಗಳ ತೆರವು ಕಾರ್ಯ

Suddi Udaya

ಹಿರಿಯ ನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಪೀಢರ್ ಅಳವಡಿಸಿ, ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ಆಗ್ರಹ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ: ಪಿಲ್ಯದ ಧನುಶ್ರೀ ಎಸ್. ಕುಲಾಲ್ ಪ್ರಥಮ: ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ಪ್ರಶಸ್ತಿ ಪ್ರದಾನ

Suddi Udaya

ಸುಲ್ಕೇರಿಮೊಗ್ರು: ಭಾರಿ ಮಳೆಗೆ ಮನೆಯ ಕಂಪೌಂಡ್ ಕುಸಿತ

Suddi Udaya
error: Content is protected !!