25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಿಯೋನ್ ಆಶ್ರಮದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಗಂಡಿಬಾಗಿಲು : ಸಿಯೋನ್ ಆಶ್ರಮ ಟ್ರಸ್ಟ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಿಯೋನ್ ಆಶ್ರಮದ ಟ್ರಸ್ಟೀ ಸದಸ್ಯೆ ಶ್ರೀಮತಿ ಮೇರಿ ಯು.ಪಿ.ಯವರು ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮರಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀ ಡಾ. ಯು. ಸಿ. ಪೌಲೋಸ್ ರವರು ಸ್ವಾತಂತ್ರ್ಯೋತ್ಸವ ಆಚರಣೆಯ ಮಹತ್ವದ ಬಗ್ಗೆ ವಿವರಿಸಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ – ಬಲಿದಾನವನ್ನು ಸ್ಮರಿಸಬೇಕು. ಅಹಿಂಸೆಯ ತತ್ವವನ್ನು ಮುನ್ನಡೆಸಿದ ಮಹಾತ್ಮಾ ಗಾಂಧೀಜಿಯವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡು ದೇಶಪ್ರೇಮ ಮೆರೆಯಬೇಕು. ಎಲ್ಲಾ ಧರ್ಮಿಯರ ಆಚಾರ-ವಿಚಾರಗಳಿಗೆ ಸಮಾನ ಗೌರವವಿದೆ. ದೇಶ ನನ್ನದೆನ್ನುವ ಭಾವನೆ ಜಾಗೃತವಾಗಬೇಕು. ಪರಸ್ಪರ ಪ್ರೀತಿ, ನಂಬಿಕೆಯಿಂದ ಒಗ್ಗಟ್ಟಿನಿಂದ ಬಾಳಬೇಕು ಎಂದರು. ಸಂಸ್ಥೆಯ ವೈದ್ಯಾಧಿಕಾರಿಯವರಾದ ಡಾ.ಶಿವಾನಂದ ಸ್ವಾಮಿಯವರು, ಬ್ರಿಟೀಷರಿಂದ ನಮಗೆ ಸ್ವಾತಂತ್ರ್ಯ ದೊರೆತ ಪರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ಘಟನಾವಳಿಗಳನ್ನು ತಿಳಿಸುತ್ತಾ, ಇನ್ನು ಮುಂದೆ ನಾವು ಯಾವ ರೀತಿ ಐಕ್ಯತೆಯಿಂದ ಬಾಳಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿದರು. ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ, ಭಾರತದ ಅಭಿವೃದ್ಧಿಗಾಗಿ ಕರ್ತವ್ಯ ನಿರ್ವಹಿಸೋಣ ಎಂದರು.

ಸಂಸ್ಥೆಯ ಹಿತೈಷಿಗಳಾದ ಜೋಸೆಫ್ ಪಿ.ಪಿ.ಯವರು, ಸಂಸ್ಥೆಯ ಲೆಕ್ಕಾಧಿಕಾರಿ ಶ್ರೀಮತಿ ಸೌಮ್ಯ ಯು.ಪಿ.ಯವರು, ಸಿಯೋನ್ ಆಶ್ರಮದ ಎಲ್ಲಾ ಟ್ರಸ್ಟೀ ಸದಸ್ಯರುಗಳು, ಆಡಳಿತ ಮಂಡಳಿಯವರು, ಟ್ರಸ್ಟೀ ಕುಟುಂಬಸ್ಥರು, ಸಿಬ್ಬಂದಿವರ್ಗದವರು ಹಾಗೂ ಆಶ್ರಮನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು. ಶ್ರೀಮತಿ ದಿನವತಿಯವರು ಕಾರ್ಯಕ್ರಮ ನಿರೂಪಿಸಿದರು. ಆಶ್ರಮನಿವಾಸಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

Related posts

ವಾಣಿ ಕಾಲೇಜಿನ ಪರಂಪರಾ ವೇದಿಕೆಯಿಂದ ಉಪನ್ಯಾಸ ಕಾರ್ಯಕ್ರಮ

Suddi Udaya

ಬಸ್ಸ್ ರಿವರ್ಸ್ ತೆಗೆಯುವ ವೇಳೆ ಮಹಿಳೆಯೋರ್ವರು ಬಸ್ಸಿನಡಿಗೆ ಸಿಲುಕಿ ದಾರುಣ ಸಾವು

Suddi Udaya

ಎಲ್. ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಜಯಂತಿ ‌ಆಚರಣೆ

Suddi Udaya

ನಿಕಟ ಪೂರ್ವ ರಾಜಾಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಶ್ರೀ ರಾಮಸ್ವಾಮಿ(ವಿಸಿಎನ್ಆರ್ ಗ್ರೂಪ್) ಮಹಾತ್ಮ ಗಾಂಧಿ ಸದ್ಭಾವನಾ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya

ಉಜಿರೆ: ಗ್ರಾ.ಪಂ ಮಾಜಿ ಸದಸ್ಯ ಮುಹಮ್ಮದ್‌ ಕುಂಞಿ ನಿಧನ

Suddi Udaya

ಬೆದ್ರಬೆಟ್ಟು ಮರಿಯಾಂಬಿಕ ಆಂ.ಮಾ. ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ವನ ಮಹೋತ್ಸವದ ಆಚರಣೆ

Suddi Udaya
error: Content is protected !!