23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಕಳೆಂಜ : ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ವತಿಯಿಂದ ಭಾರತದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕ್ರಿಶ್ಚಿಯನ್ ಬ್ರದರ್ಸ್ ಕಚೇರಿ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಲಾಯಿತು.

ಮಾಜಿ ಸೈನಿಕ ತೋಮಸ್ ಪಿ.ಜೆ. ಅವರು ಧ್ವಜಾರೋಹಣ ನೆರವೇರಿಸಿ ದೇಶಭಕ್ತಿಯ ಮಹತ್ವವನ್ನು ನೆನಪಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಅಗಸ್ಟೀನ್ ಟಿ.ಎ. ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯದರ್ಶಿ ಶಿಜೋ ಸ್ವಾಗತಿಸಿದರು. ಗೌರವಾಧ್ಯಕ್ಷರು ಸೆಬಾಸ್ಟಿಯನ್ ಪಿ.ಟಿ., ಗೌರವ ಸಲಹೆಗಾರರು ಜೋಸೆಫ್ ಕೆ.ಡಿ., ಉಪಾಧ್ಯಕ್ಷರು ಮ್ಯಾಥ್ಯೂ ವಿ.ಟಿ., ಕೋಶಾಧಿಕಾರಿ ರಂಜಿತ್ ಪಿ.ಎಸ್. ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಧ್ವಜಾರೋಹಣದ ನಂತರ ರಾಷ್ಟ್ರಗೀತೆಯನ್ನು ಹಾಡಿ ಸ್ವಾತಂತ್ರ್ಯದ ಶ್ರದ್ಧಾಸ್ಪದ ಕ್ಷಣವನ್ನು ಸ್ಮರಿಸಲಾಯಿತು. ಸೈನಿಕರ ತ್ಯಾಗವನ್ನು ನೆನೆದು, ಯುವಪೀಳಿಗೆ ರಾಷ್ಟ್ರಾಭಿಮಾನ ಮತ್ತು ಸೇವಾ ಮನೋಭಾವವನ್ನು ಉಳಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಲಾಯಿತು.

Related posts

ಎಸ್‌ಡಿಎಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ: 25 ವರ್ಷಗಳ ಹಿಂದೆ ಕಲಿತ ಹಿರಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಮಾವೇಶ

Suddi Udaya

ಮಡಂತ್ಯಾರು ರಚನಾ ಸಿಲ್ಕ್ ನಲ್ಲಿ ಶೇ. 10-50 ಆಷಾಢ ಡಿಸ್ಕೌಂಟ್ ಸೇಲ್

Suddi Udaya

ಕುಂಟಿನಿಯ ಕಾಂಗ್ರೆಸ್ ಬೂತ್ ಸಮಿತಿಯ ಮನವಿಗೆ ಸ್ಪಂದನೆ: ಹಳೆಪೇಟೆಯಿಂದ ಕುತ್ರೋಟ್ಟು ರಸ್ತೆ ದುರಸ್ತಿ ಆರಂಭ

Suddi Udaya

ನಾಳ ಶರನ್ನವರಾತ್ರಿ ಪೂಜೆ ಮತ್ತು ಭಜನೋತ್ಸವ

Suddi Udaya

ನ್ಯಾಯತರ್ಪು ಒಕ್ಕೂಟದ ಸಂಘದ ತ್ರೈಮಾಸಿಕ ಸಭೆ

Suddi Udaya

2024ರಲ್ಲಿ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ ; ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಶಾಸಕ ಹರೀಶ್ ಪೂಂಜರವರಿಂದ ಕಾರ್ಯಕ್ರಮದ ಯಶಸ್ವಿಗೆ ಉಪಯುಕ್ತ ಮಾಹಿತಿ; ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಸಮಾಲೋಚನೆ ಸಭೆಯಲ್ಲಿ ಭಾಗಿ

Suddi Udaya
error: Content is protected !!