September 6, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿಪ್ರಮುಖ ಸುದ್ದಿ

ಧರ್ಮಸ್ಥಳದ ಅಸ್ತಿತ್ವಕ್ಕೆ ಕೊಡಲಿಯೇಟು ನೀಡಲು ಮುಂದಾದವರ ಬಗ್ಗೆ ಮಾತನಾಡಿದ ಬಿ.ಎಲ್ ಸಂತೋಷ್ ವಿರುದ್ದ ನಗರ ನಕ್ಸಲರಿಂದ ಅವಹೇಳನ ಮಾತು ಸಮಾಜದ ತೇಜೋವಧೆ ಮಾಡುವ ಶಕ್ತಿಗಳನ್ನು ರಾಜ್ಯ ಸರ್ಕಾರ ಮಟ್ಟ ಹಾಕಬೇಕು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ ಆಗ್ರಹ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯ ಅಸ್ತಿತ್ವಕ್ಕೆ ಕೊಡಲಿಯೇಟು ನೀಡಲು ಮುಂದಾದವರ ಬಗ್ಗೆ ಮಾತನಾಡಿರುವ ಹಿರಿಯರಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದಬಿ ಎಲ್ ಸಂತೋಷ್ ರವರನ್ನು ನಿಂದಿಸುವ ಕೆಲಸವನ್ನು ನಗರ ನಕ್ಸಲರು ಮಾಡಿದ್ದಾರೆ. ಇಂತಹ ಹಿಂದೂ ನಾಯಕರ ಹಾಗೂ ಸಮಾಜದ ತೇಜೋವಧೆ ಮಾಡುವ ಶಕ್ತಿಗಳನ್ನು ರಾಜ್ಯ ಸರ್ಕಾರ ಮಟ್ಟ ಹಾಕಬೇಕು ಎಂದು ಶಾಸಕ ಹರೀಶ್ ಪೂಂಜ ಆಗ್ರಹಿಸಿದರು.

ಅವರು ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಒಂದು ಸಮಾಜವನ್ನು ಒಂದೇ ಮನೆ ಅಂತ ಕಾಣುವ ಸಂಘಟನೆ ಆಗಿದ್ದು ಇದರ ಪ್ರತಿಯೊಬ್ಬ ಸೇವಕ ರಾಷ್ಟ್ರೀಯತೆ, ಬಾಷೆ, ಧರ್ಮ ,ಸಂಸ್ಕತಿ ಉಳಿವಿಗಾಗಿ ಸರ್ವಸ್ವವನ್ನು ತ್ಯಾಗಮಾಡಿದವರು.ಅದರಲ್ಲಿ ಹಿರಿಯರಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕೂಡ, ಇವರ ವಿರುದ್ದ ನಗರ ನಕ್ಸಲ್ ರು ಅಶ್ಲೀಲ, ಅನಾಗರಿಕ ಹಾಗೂ ಅಕ್ಷಮ್ಯವಾಗಿ ಅವಮಾನಿಸುವ ಹೇಳಿಕೆ ನೀಡಿರುವುದನ್ನು ಒಬ್ಬ ಸ್ವಯಂ ಸೇವಕನಾಗಿ ,ಬಿಜೆಪಿ ಪಕ್ಷದ ಶಾಸಕನಾಗಿ ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸುತ್ತೇನೆ ಎಂದು ಹೇಳಿದರು.

ಸಂತೋಷ್ ಅವರಿಗೆ ಮಾಡಿದ ಅವಮಾನ ಇಡೀ ಸ್ವಯಂ ಸೇವಕ ತಂಡಕ್ಕೆ ಮಾಡಿದ ಅವಮಾನ, ಹಿಂದೂಗಳ ನಡುವೆ ಕಂದಕ ಸೃಷ್ಟಿಸಿ, ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರಗಳ ಮೇಲೆ ಕಪೋಲ ಕಲ್ಪಿತ ಷಡ್ಯಂತ್ರ ರೂಪಿಸುವ, ಹಿಂದೂ ಭಾವನೆಗಳಿಗೆ ಘಾಸಿಯುಂಟು ಮಾಡುವ, ಹಿಂದೂ ಸಮಾಜವನ್ನು ಒಡೆಯುವ ನಗರ ನಕ್ಸಲರ ಪಿತೂರಿಯೇ ಈ ನಿಂದನೆ ಆಗಿದೆ.ಹಿಂದೂ ದಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಇಂತವರು ಜಿಹಾದಿಗಳು,ಮತಾಂದ ಶಕ್ತಿಗಳ ಮನಸ್ಥಿಯುಳ್ಳವರಾಗಿದ್ದು , ಹಿಂದುಗಳನ್ನು ತೇಜೊವಧೆ ಮಾಡುವವರನ್ನು ಸರಕಾರ ಸುಮೊಟೊ ಕೇಸ್ ಹಾಕದೆ ಬಿಟ್ಡಿರುವುದೇ ಈ ರೀತಿ ಹೇಳಿಕೆ ಕೊಡುವಷ್ಟು ಬೆಳೆದಿದ್ದಾರೆ. ಇಂತಹ ನೀಚ ಮನಸ್ಥಿತಿ ಉಳ್ಳವರು , ಕಮ್ಯೂನಿಸ್ಟ್ ವಿಚಾರಧಾರೆಗೆ ಒಳಗಾಗಿ ಈ ನೆಲದ ಮೂಲ ಸತ್ವವನ್ನು ಮುಗಿಸಲು ನಗರ ನಕ್ಸಲರು ವಿಭಿನ್ನ ಪ್ರಯತ್ನದ ಜೊತೆಗೆ ಸಮಾಜದ ದಾರಿ ತಪ್ಪಿಸುವ ಹೋರಾಟಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.

ಸೌಜನ್ಯ ಪ್ರಕರಣ ಮರು ತನಿಕೆಯಾಗಲಿ: ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಎಂದು ಬಿಜೆಪಿ ಹಿಂದೆಯೇ ಹೋರಾಟ ಮಾಡಿದೆ. ಕರಾವಳಿ ಶಾಸಕರು ಈ ಬಗ್ಗೆ ಮುಖ್ಯ ಮಂತ್ರಿಗಳನ್ನು ಬೇಟಿಯಾಗಿ ಮನವಿ ನೀಡಿದ್ದೇವೆ. ಅದಿವೇಶನದಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಪೋಲಿಸ್ ಇಲಾಖೆಯ ವೈಫಲ್ಯ ದಿಂದ ಈ ಸ್ಥಿತಿಯಾಗಿದೆ. ಈ ಪ್ರಕರಣದ ಮರು ತನಿಖೆಯಾಗಲಿ ಎಸ್ ಐಟಿ ಅಥವಾ ಯಾವುದೇ ಇತರ ತನಿಖಾ ತಂಡ ಮರು ತನಿಖೆಗೆ ಮಾಡಿ ನೈಜ ಆರೋಪಿಗಳು ಪತ್ತೆಯಾಗಿ, ಜೈಲು ಶಿಕ್ಷೆ ಅಗಲಿ ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅದ್ಯಕ್ಷ ಶ್ರೀನಿವಾಸ್ , ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೊಟ್ಯಾನ್ ಉಪಸ್ಥಿತರಿದ್ದರು.

Related posts

ಕನ್ಯಾಡಿ ಗ್ರಾಮದ ಪಾಲೆದಡಿ ನಿವಾಸಿ ಜಯಾನಂದ ಪೂಜಾರಿ ನಿಧನ

Suddi Udaya

ಕರುನಾಡು Got ಟ್ಯಾಲೆಂಟ್ ರಿಯಾಲಿಟಿ ಶೋ ಗೆ ಆಯ್ಕೆಯಾದ ಉಜಿರೆಯ ಹಿಪ್-ಬಾಯ್ಸ್ ನೃತ್ಯ ತಂಡ

Suddi Udaya

ಬೈಂದೂರಿನಲ್ಲಿ ಶ್ರೀ ಬ್ರಹ್ಮಾನಂದಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ: ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಭೇಟಿ

Suddi Udaya

ಭಾರೀ ಮಳೆ ಹಿನ್ನೆಲೆ: ನಾಳೆ(ಆ. 3)ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ತುರ್ತು ಸಭೆ

Suddi Udaya

ವೆಯಿಟ್ ಲಿಫ್ಟಿಂಗ್ ನಲ್ಲಿ ಗರ್ಡಾಡಿಯ ರಕ್ಷಿತ್ ಪೈ ಪ್ರಥಮ ಸ್ಥಾನ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಾರ್ಯ ಗ್ರಾ.ಪಂ ಎದುರು ಬಿಜೆಪಿ ಪ್ರತಿಭಟನೆ

Suddi Udaya
error: Content is protected !!