September 6, 2026
Uncategorized

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಅಂಗನವಾಡಿ ಹಾಗೂ ಶಾಲೆಯ 207 ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ

7 ಮಂದಿಗೆ ವ್ಯೆದ್ಯಕೀಯ ನೆರವು ಹಾಗೂ 4 ವಿಶೇಷ ಚೇತನರಿಗೆ ಧನ ಸಹಾಯ
ವಿತರ
ಣೆ

ಬೆಳ್ತಂಗಡಿ: ನಡ ಗ್ರಾಮದ ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ದೇವಸ್ಥಾನದ ಅನಂತರತ್ನ ಸಭಾಭವನದಲ್ಲಿ ನಡ ಗ್ರಾಮದ 8 ಅಂಗನವಾಡಿ ಕೇಂದ್ರಗಳ 136 ಹಾಗೂ ಸ್ಥಳೀಯ ಶಾಲೆಯ 71 ಒಟ್ಟು 207 ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಅರ್ಹ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು 7 ಜನರಿಗೆ ವ್ಯದ್ಯಕೀಯ ಸಹಾಯಧನ ಹಾಗೂ 4 ವಿಶೇಷ ಚೇತನರಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ದಿನಾಂಕ ಆ.16 ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೆಸರರಾದ ಡಾ. ಸತೀಶ್ಚಂದ್ರ ಸುರ್ಯ ಗುತ್ತು ಸಮವಸ್ತ್ರ ಹಾಗೂ ಪ್ರೋತ್ಸಾಹಧನ ವಿತರಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಸಂದೀಪಾ ಸತೀಶ್ಚಂದ್ರ ,ಶ್ರೀಮತಿ ಧಾರಿಣಿ ಎಸ್. ಜೈನ್ ಶ್ರೀ ಸಂಗ್ರಾಮ್ ಸುರ್ಯಗುತ್ತು, ದೇವಸ್ಥಾನದ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ. ಬಿ. ರಾಜಶೇಖರ ಅಜ್ರಿ, ಬಿ.ಮುನಿರಾಜ ಅಜ್ರಿ, ಶ್ರೀ ಅಜಿತ್ ಆರಿಗ, ಶ್ರೀ ಸಂಪತ್ ಕುಮಾರ್ ,ನಡ ಗ್ರಾ. ಪಂ. ಸದಸ್ಯರಾದ ಶ್ರೀಮತಿ ಸುಮಿತ್ರಾ, ಶಾಲಾ ಮುಖ್ಯ್ಯೋ ಪಾಧ್ಯಾಯರು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Related posts

ಶಾಸಕ ಹರೀಶ್ ಪೂಂಜರ ಹುಟ್ಟುಹಬ್ಬ: ಕನ್ನಾಜೆಯ ಸುರಕ್ಷಾ ಆಚಾರ್ಯ ರಿಂದ ನೂಲಿನಲ್ಲಿ ತಯಾರಿಸಿದ ಹರೀಶ್ ಪೂಂಜರ ಚಿತ್ರ ಉಡುಗೊರೆ

Suddi Udaya

ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾದ ಎಸ್‌ಡಿಪಿಐ ಮುಖಂಡರ ನಿಯೋಗ

Suddi Udaya

ಮುಂಡಾಜೆ: ವಿದ್ಯುತ್ ಶಾಕ್ ಗಬ್ಬದ ಹಸು ಸಾವು

Suddi Udaya

ಬೆಳ್ತಂಗಡಿ: ಶ್ರೀ ಗುರುರಾಘವೇಂದ್ರ ಸ್ವಾಮಿ ಬೃಂದಾವನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೈಬರ್ ಶೀಲ್ಡ್ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 341 ಕೋಟಿ ವ್ಯವಹಾರ, ರೂ. 1.53 ಕೋಟಿ ಲಾಭ, ಸದಸ್ಯರಿಗೆ ಶೇ. 13 ಡಿವಿಡೆಂಟ್

Suddi Udaya
error: Content is protected !!