ಅಳದಂಗಡಿ: ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘ ಅಳದಂಗಡಿ ವಲಯ ಇದರ ಮಹಾಸಭೆಯು ಸುಂದರಾಚಾರ್ಯ ಕುದ್ಯಾಡಿ ಅವರ ಅಧ್ಯಕ್ಷತೆಯಲ್ಲಿ ಆ.17ರಂದು ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗುರು ಸೇವಾ ಪರಿಷತ್ತಿನ ಅಧ್ಯಕ್ಷ ಪ್ರಕಾಶ್ ಪುರೋಹಿತ್ ವೇಣೂರು ದೀಪ ಬೆಳಗಿಸಿ ಸಂಘಟನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಹಣ ಸಂಗ್ರಹಣೆ, ಗ್ರಾಮ ಸಮಿತಿ ಜೋಡಣೆ, ಸಂಘಟನಾತ್ಮಕವಾದ ಕಾರ್ಯ ಚಟುವಟಿಕೆಗಳನ್ನು ಮಾಡಬೇಕು ಎಂದು ತಿಳಿಸಿದರು.
ಸರ್ವಾನುಮತದಿಂದ ವಲಯ ಸಂಚಾಲಕರಾಗಿ ಸಂಜೀವ ಆಚಾರ್ಯ ಮಾಡೆoಜಿಮಾರ್ ಆಯ್ಕೆಯಾದರು. ಗ್ರಾ.ಪಂ. ಸದಸ್ಯ ಹರೀಶ್ ಆಚಾರ್ಯ, ರಮೇಶ್ ಆಚಾರ್ಯ ಬಳಂಜ, ಜಯರಾಮ್ ಆಚಾರ್ಯ ಕುದ್ಯಾಡಿ, ಸಂಜೀವ ಆಚಾರ್ಯ ಡೆಂಜೋಳಿ, ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಮಂಜುನಾಥ ಆಚಾರ್ಯ ವರದಿ ವಾಚನ, ಲೆಕ್ಕಚಾರ ಮಂಡಿಸಿದರು. ಶ್ರೀಮತಿ ತಾರಾ ಆಚಾರ್ಯ ಕುದ್ಯಾಡಿ ಸ್ವಾಗತಿಸಿದರು. ಅಶ್ವಥ್ ಆಚಾರ್ಯ ಕೆದ್ದು ಪ್ರಾರ್ಥಿಸಿದರು. ಮಂಜುನಾಥ ಆಚಾರ್ಯ ಅಳದಂಗಡಿ ನಿರೂಪಿಸಿ, ವಂದಿಸಿದರು.











