September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಜಿರೆ ಮುದ್ದಾಡಿಯ ಮಂಗಿನಿಬೆಟ್ಟು ಗದ್ದೆಯಲ್ಲಿ ಆಟಿಡೊಂಜಿ ಕೆಸರ್‌ದ ಗೊಬ್ಬು

ಬಜಿರೆ: ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಬಜಿರೆ ಬತ್ತಾರು, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಜಿರೆ, ಆಟಿಡೊಂಜಿ ಕೆಸರ್‌ದ ಗೊಬ್ಬು ಆಚರಣಾ ಸಮಿತಿ ಬಜಿರೆ, ಪ್ರಗತಿಬಂಧು ಜ್ಞಾನವಿಕಾಸ ಸ್ವ-ಸಹಾಯ ಸಂಘಗಳ ಒಕ್ಕೂಟ ಬಜಿರೆ, ವಿಘ್ನೇಶ್ವರ ಫ್ರೆಂಡ್ಸ್ ಬಜಿರೆ, ಯುವಶಕ್ತಿ ಸ್ಪೋರ್ಟ್ಸ್ ಕ್ಲಬ್ ಬಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ಆಟಿಡೊಂಜಿ ಕೆಸರ್‌ದ ಗೊಬ್ಬು 2025 ಬಜಿರೆ ಮುದ್ದಾಡಿಯ ಮಂಗಿನಿಬೆಟ್ಟು ಗದ್ದೆಯಲ್ಲಿ ಆ.17 ರಂದು ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಶ್ರೀ ಕ್ಷೇತ್ರ ಮುದ್ದಾಡಿಯ ಆಡಳಿತ ಮೊಕ್ತೇಸರ ಸುರೇಶ್ ಕುಮಾರ್ ಆರಿಗ ದೀಪ ಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಿ ಶುಭಹಾರೈಸಿದರು. ಕೆಸರುಗದ್ದೆಯ ಉದ್ಘಾಟನೆಯನ್ನು ದ.ಕ. ಜಿಲ್ಲಾ ಕಂಬಳ ಸಮಿತಿ ಪ್ರಧಾನ ತೀರ್ಪುಗಾರರಾದ ಎಡ್ತೂರು ರಾಜೀವ ಶೆಟ್ಟಿ ನೆರವೇರಿಸಿ ಶುಭನುಡಿಗಳನ್ನಾಡಿದರು.


ಮುಖ್ಯ ಅತಿಥಿಗಳಾಗಿ ವೇಣೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಕಾಶಿನಾಥ್, ವೇಣೂರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಬಜಿರೆ ಹಿಂದೂ ರುದ್ರಭೂಮಿ ಸಮಿತಿಯ ಅಧ್ಯಕ್ಷ ಭಾಸ್ಕರ ಪೈ ವೇಣೂರು, ಗಣೇಶ್ ನಾರಾಯಣ ಪಂಡಿತ್ ಮೂಡುಕೋಡಿ ವೇಣೂರು, ಶ್ರೀಮತಿ ಸುಲೋಚನ ಎಸ್.ಹೆಗ್ಡೆ ಮಂಗಿನಿ, ಬಜಿರೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಪೂಜಾರಿ, ಕಾರ್ಯಕ್ರಮದ ಗೌರವಾಧ್ಯಕ್ಷ ಅರುಣ್ ಕುಮಾರ್ ಐದಲ್ಕೆ, ಅಧ್ಯಕ್ಷ ಜಯಶಂಕರ ಹೆಗ್ಡೆ ಮಂಗಿನಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ವೇಣೂರು ಗ್ರಾ.ಪಂ. ಸದ್ಯಸ್ಯರುಗಳಾದ ಲೋಕಯ್ಯ ಪೂಜಾರಿ, ಸುನೀಲ್ ಪೂಜಾರಿ ಜತನಂಗೇರಿಕೋಡಿ, ಲೀಲಾವತಿ ಆನಂದ ಪೂಜಾರಿ, ಶ್ರೀಮತಿ ಸುಜಾತ ಭಾಗವಹಿಸಿದ್ದರು. ಭರತ್‌ರಾಜ್ ಮುದ್ಯ ಪಾಪುದಡ್ಕ, ಯೋಜನಾಧಿಕಾರಿ ಅಶೋಕ್ ಕುಮಾರ್, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಸತೀಶ್ ಹೆಗ್ಡೆ, ಹೊಸಪಟ್ಣ ಸತ್ಯನಾರಾಯಣ ಸೇವಾ ಸಮಿತಿಯ ಸಂಚಾಲಕ ಗಣೇಶ್ ಪೂಜಾರಿ, ವಿವಿಧ ಕ್ಷೇತ್ರದ ಗಣ್ಯರು, ಮಹನೀಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಆಗಮಿಸಿದ ಎಲ್ಲಾ ಅತಿಥಿ ಗಣ್ಯರನ್ನು ತುಳುನಾಡಿನ ಸಂಪ್ರದಾಯದಂತೆ ವೀಲ್ಯ ಅಡಿಕೆ ನೀಡಿ ಶಾಲು ಹೊದಿಸಿ ಸ್ವಾಗತಿಸಲಾಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತಾಲೂಕಿನ ಶಾಸಕರಾದ ಹರೀಶ್ ಪೂಂಜ ಆಗಮಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ವೇಣೂರು ನಮನ ಕ್ಲಿನಿಕ್‌ನ ಡಾ| ಶಾಂತಿಪ್ರಸಾದ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಎಕ್ಸೆಲ್ ಕಾಲೇಜು ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಿ. ಸುಮಂತ್ ಕುಮಾರ್ ಆಗಮಿಸಿ ಶುಭನುಡಿಗಳನ್ನಾಡಿದರು.
ಈ ಸಂದರ್ಭ ಕಾರ್ಯಕ್ರಮದ ಉಪಾಧ್ಯಕ್ಷ ವಿಶ್ವನಾಥ ಆಚಾರ್ಯ ಹಿದೆಕ್ಯಾರು, ಕಾರ್ಯದರ್ಶಿಗಳಾದ ಗೋಪಾಲ ಆಚಾರ್ಯ ಕೊಡಪಟ್ಯ, ರಕ್ಷಿತ್ ಪುನ್ಕೆದಡಿ, ಕೋಶಾಧಿಕಾರಿ ನಾರಾಯಣ ಆರ್. ಪೂಜಾರಿ, ವಿಘ್ನೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಪ್ರವೀಣ್ ಪೂಜಾರಿ, ಪ್ರಗತಿಬಂಧು ಒಕ್ಕೂಟ ಬಜಿರೆಯ ಗಿರೀಶ್ ಕುಲಾಲ್, ವಿಘ್ನೇಶ್ವರ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಹೆಗ್ಡೆ, ಯುವಶಕ್ತಿ ಸ್ಪೋಟ್ಸ್ ಕ್ಲಬ್‌ನ ಸಂಚಾಲಕ ರಕ್ಷಿತ್ ಬಜಿರೆ, ಬಜಿರೆ ಜನಜಾಗೃತಿ ಗ್ರಾಮಸಮಿತಿಯ ಅಧ್ಯಕ್ಷ ಅಶೋಕ್ ಪೂಜಾರಿ ಕಜಿಪಟ್ಟ, ಸೇವಾ ಪ್ರತಿನಿಧಿ ರೂಪ ಚಂದನ ಮತ್ತಿತರ ಪದಾಧಿಕಾರಿಗಳು ಹಾಗೂ ಊರಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.

Related posts

ವಾಣಿ ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಮುಂಡಾಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎಂಸಿಎಫ್ ನ ಸಿ ಎಸ್ ಆರ್ ಆಕ್ಟಿವಿಟಿ ಯೋಜನೆ ಅಡಿಯಲ್ಲಿ ಪೆರಿಂಜೆ ಸ.ಹಿ.ಪ್ರಾ. ಶಾಲೆಯಲ್ಲಿ ನಿರ್ಮಿಸಲಾದ ನೂತನ ಶೌಚಾಲಯದ ಉದ್ಘಾಟನೆ

Suddi Udaya

ಗುರುವಾಯನಕೆರೆ-ಉಜಿರೆ ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಶೇ.40 ರಷ್ಟು ಡಿಸ್ಕೌಂಟ್ ಸೇಲ್

Suddi Udaya

ಇಂದಬೆಟ್ಟು ಗ್ರಾ.ಪಂ. ನಲ್ಲಿ ಮಹಿಳಾ ಹಾಗೂ ಮಕ್ಕಳ ಗ್ರಾಮ ಸಭೆ

Suddi Udaya

ಡಿ.2: ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya
error: Content is protected !!