September 6, 2026
ಕ್ರೀಡಾ ಸುದ್ದಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇದರ ಆಂತರಿಕ ಗುಣಮಟ್ಟ ಬರವಸ ಕೋಷ, ವಿದ್ಯಾರ್ಥಿ ಪ್ರತಿಭಾ ವೇದಿಕೆ, ರೋವರ್ಸ್ ರೆಂಜರ್ಸ್ ಘಟಕ, ಹಾಗೂ ಯುವ ರೆಡ್ ಕ್ರಾಸ್ ಘಟಕ ಇವುಗಳ ಸಂಯುಕ್ತ ಸಹಯೋಗದಲ್ಲಿ “ನಮ್ಮ ನಡೆ ಗದ್ದೆಯ ಕಡೆ” ಎಂಬ ವಿಶಿಷ್ಟ ಕಾರ್ಯಕ್ರಮ .

ಬೆಳ್ತಂಗಡಿ :ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇದರ ಆಂತರಿಕ ಗುಣಮಟ್ಟ ಬರವಸ ಕೋಷ, ವಿದ್ಯಾರ್ಥಿ ಪ್ರತಿಭಾ ವೇದಿಕೆ, ರೋವರ್ಸ್ ರೆಂಜರ್ಸ್ ಘಟಕ, ಹಾಗೂ ಯುವ ರೆಡ್ ಕ್ರಾಸ್ ಘಟಕ ಇವುಗಳ ಸಂಯುಕ್ತ ಸಹಯೋಗದಲ್ಲಿ “ನಮ್ಮ ನಡೆ ಗದ್ದೆಯ ಕಡೆ” ಎಂಬ ವಿಶಿಷ್ಟ ಕಾರ್ಯಕ್ರಮಆ 19. ರಂದು ದೊಡ್ಡ ಮನೆ ಸತೀಶ್ ಶೆಟ್ಟಿ ಯವರ ಗದ್ದೆ, ಹಳೆಕೋಟೆ, ಬೆಳ್ತಂಗಡಿಯಲ್ಲಿ ನಡೆಯಿತು .


ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಮನರಂಜನಯೊಂದಿಗೆ, ಆಟ, ಊಟ, ಓಟ ಎಲ್ಲವನ್ನು ನಿಭಾಯಿಸಲು ಕಲಿತ ಸಂತೃಪ್ತಿಯ ದಿನವಾಗಿತ್ತು.

ಈ ಕಾರ್ಯಕ್ರಮದಲ್ಲಿ ನಡೆದ ಸ್ಪರ್ಧೆಗಳು ಈ ಕೆಳಗಿನಂತಿವೆ.
ಓಟ, ಮೂಟೆ ಹೊರುವುದು,. ಹಾಳೆಯಲ್ಲಿ ‌ಎಳೆಯುವುದು, . ನಿಧಿ ಶೋಧ, ಹಗ್ಗ ಜಗ್ಗಾಟ
ವಾಲಿಬಾಲ್
ಪ್ರೊ. ಪದ್ಮನಾಭ ಕೆ, ಪ್ರಾಸ್ತಾವಿಕ ನುಡಿಗಳನ್ನು ಆಡಿ ವಿದ್ಯಾರ್ಥಿಗಳಿಗೆ ತುಳು ನಾಡಿನ ಸಂಸ್ಕೃತಿ, ಮಣ್ಣಿನ ಮಹತ್ವ ಮತ್ತು ಕ್ರೀಡಾ ಸ್ಪೂರ್ತಿಯ ಬಗ್ಗೆ ವಿವರಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಪ್ರಾಂಶುಪಾಲರಾದ ಪ್ರೊ. ಸುರೇಶ್ ವಿ. ವಿದ್ಯಾರ್ಥಿಗಳು ಅನುಸರಿಸಬೇಕಾದ ಜಾಗೃತಿಗಳನ್ನು ತಿಳಿಸಿದರು. ಗದ್ದೆಯ ಮಾಲೀಕರಾದ ಶ್ರೀ ಸತೀಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಆಯೋಜಕರಾದ ಯವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಧಿಕಾರಿ, ರೊವರ್ ಸ್ಕೌಟ್ ಲೀಡರ್ ಡಾ. ರವಿ ಎಂ. ಎನ್. ಸ್ಪರ್ಧೆಗಳ ನೀತಿಗಳನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ. ಕುಶಾಲಪ್ಪ ಎಸ್. ಮತ್ತು ರೇಂಜರ್ ಲೀಡರ್ ಡಾ. ರಾಜೇಶ್ವರಿ ಎಚ್ ಎಸ್ ಉಪಸ್ಥಿತರಿದ್ದರು.
ಶ್ರೀ ಸತೀಶ್ ಶೆಟ್ಟಿ ಕುಟುಂಬದವರ ಸಹಕಾರವನ್ನು ಸ್ಮರಿಸಿ ಗೌರವಿಸಲಾಯಿತು. ಕಾಲೇಜಿನ ಎಲ್ಲಾ ಅಧ್ಯಾಪಕ ವೃಂದ, ಬೋಧಕೇತರ ವೃಂದ ಮತ್ತು ಕ್ರೀಡಾ ಸಂಘದ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮದ ಆಟೋಟಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿ ಶುಭವತಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ಕ್ರತಿಕ್ಎಲ್ಲರನ್ನು ಸ್ವಾಗತಿಸಿದರು. ಪ್ರೊಫೆಸರ್ ವಿಜಯಲಕ್ಷ್ಮಿ ಪ್ರಾರ್ಥನೆ ಮಾಡಿದರು.
ಸಂದೇಶ ಸರ್ವರಿಗೂ ವಂದಿಸಿದರು.

Related posts

ಕರಾಟೆ ಪಂದ್ಯಾಟ: ವಾಣಿ ಆಂ.ಮಾ. ಶಾಲಾ ವಿದ್ಯಾರ್ಥಿಗಳಾದ ಸಂಜ್ಞಾ ಮತ್ತು ಶಾನ್ವಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳಾಲು: ಡಿಪಿ ಸ್ಫೋರ್ಟ್ಸ್ ಕ್ಲಬ್‌ ಆಶ್ರಯದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ವಲಯ ಮಟ್ಟದ ಹಾಗೂ ಲೀಗ್‌ ಮಾದರಿಯ ವಾಲಿಬಾಲ್ ಪಂದ್ಯಾಟ

Suddi Udaya

ಕರಾಟೆ ಕ್ರೀಡಾಕೂಟ: ಬೆಳ್ತಂಗಡಿ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

36ನೇ ಮಹಿಳಾ ವಿಭಾಗದ ಜೂನಿಯರ್ ನ್ಯಾಷನಲ್ ನೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟ ಕರ್ನಾಟಕ ತಂಡಕ್ಕೆ ತೃತೀಯ ಸ್ಥಾನ ಎಸ್ ಡಿ ಎಂ ಕಾಲೇಜಿನ 2 ವಿದ್ಯಾರ್ಥಿನಿಯರ ಸಾಧನೆ

Suddi Udaya

ವಲಯ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ: ಬಳಂಜ ಪ್ರೌಢ ಶಾಲೆ ಪ್ರಥಮ

Suddi Udaya

ಬಜಿರೆ-ಹೊಸಪಟ್ಣದಲ್ಲಿ ಹೊನಲು ಬೆಳಕಿನ ಪುರುಷರ 60ಕೆ.ಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟನೆ

Suddi Udaya
error: Content is protected !!