September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆಮಂತ್ರಣ ವೇದಿಕೆ ಜಿಲ್ಲಾ ಅಧ್ಯಕ್ಷರಾಗಿ ವಿಂಧ್ಯಾ ಎಸ್.ರೈ ಮತ್ತು ಉಪಾಧ್ಯಕ್ಷರಾಗಿ ಅನಿತಾ ಶೆಟ್ಟಿ ಆಯ್ಕೆ

ಬೆಳ್ತಂಗಡಿ: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ಮಹಾಸಭೆ ಆ.17 ರಂದು ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಆಮಂತ್ರಣ ಪರಿವಾರದ ಜಿಲ್ಲಾಧ್ಯಕ್ಷೆ ನಿರೀಕ್ಷಿತಾ ಮಂಗಳೂರು ವಹಿಸಿದ್ದರು.
ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಮಾತಾನಾಡಿ ಒಂದು ವರ್ಷದ ಕಾರ‍್ಯಕ್ರಮ ಪ್ರಗತಿ ಮತ್ತು ಎಲ್ಲಾ ಪದಾಧಿಕಾರಿಗಳ ಸರ್ವ ರೀತಿಯ ಸಹಕಾರವನ್ನು ನೆನೆದು ಅಭಿನಂದನೆ ಸಲ್ಲಿಸಿದರು.


ಮಂಗಳೂರು ಜಿಲ್ಲೆ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ನೂತನ ಅಧ್ಯಕ್ಷರಾಗಿ ಅನುಭವಿ ಸಾಹಿತಿಗಳು ಮತ್ತು ಸಂಪನ್ಮೂಲ ವ್ಯಕ್ತಿ ವಿಂಧ್ಯಾ ಎಸ್ ರೈ ಕಡೇಶಿವಾಲಯ ಮತ್ತು ನೂತನ ಉಪಾಧ್ಯಕ್ಷರಾಗಿ ಉಪನ್ಯಾಸಕಿ ಹಾಗೂ ಸಾಹಿತಿ ಅನಿತಾ ಶೆಟ್ಟಿ ಮೂಡಬಿದ್ರೆ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ರಾಜ್ಯ ಪ್ರತಿನಿಧಿಗಳಾದ ಹೆಚ್.ಕೆ. ನಯನಾಡು, ಆಶಾ ಅಡೂರು, ಭಾರತಿ ಪರ್ಕಳ, ಜಿಲ್ಲಾ ನಿರ್ದೇಶಕರಾದ ಚೇತನ್ ಕುಮಾರ್ ಅಮೈ, ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ವಿದ್ಯಾಶ್ರೀ ಅಡೂರು, ಬಂಟ್ವಾಳ ತಾಲೂಕು ಅಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು, ಮೂಡಬಿದ್ರೆ ತಾಲೂಕು ಅಧ್ಯಕ್ಷೆ ಕವಿತಾ ದಿನೇಶ್ ಕಟೀಲ್, ಕಾರ್ಯದರ್ಶಿ ಸುಶ್ಮಿತಾ ಆರ್, ಲೋಲಾಕ್ಷಿ ಶೆಟ್ಟಿ, ಪ್ರಕಾಶ್ ಆಚಾರ್ಯ, ಬಂಟ್ವಾಳ ಘಟಕದ ರೂಪೇಶ್ ಕುಮಾರ್, ರಾಕೇಶ್ ಪೊಳಲಿ, ಪ್ರಸಾದ್ ನಾಯಕ್ ಕಾರ್ಕಳ, ವಿಜಯಚಂದ್ರ ಮುಂಡ್ಲಿ, ಅನ್ನಪೂರ್ಣ ಶ್ಯಾನುಭೋಗ್ ಅಂಬಲಪಾಡಿ, ಅಕ್ಷತಾ ಅಡೂರು, ಸರೀನ್ ತಾಜ್ ಕಾಶಿಪಟ್ಣ, ದೀಕ್ಷಾ ಕಾಶಿಪಟ್ಣ
ಭಾಗವಹಿಸಿದ್ದರು.

Related posts

ಲಾಯಿಲ: ಶ್ರೀ ಗಾಯತ್ರೀ ವಿಶ್ವಕರ್ಮ ಮಹಿಳಾ ಸಂಘದಿಂದ ಶ್ರೀ ಕಾಳಿಕಾಂಬಾ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ನಡ್ತಿಕಲ್ಲು: ಆಧಾರ್ ನೋಂದಣಿ-ತಿದ್ದುಪಡಿ ಶಿಬಿರದ ಉದ್ಘಾಟನೆ

Suddi Udaya

ನಿಡ್ಲೆ: ಕಂರ್ಬಿತ್ಲು ನಿವಾಸಿ ಅಚ್ಚುತ ಹೆಬ್ಬಾರ್ ನಿಧನ

Suddi Udaya

ಮುಗುಳಿ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ ಮತ್ತು ಯುಕೆಜಿ ತರಗತಿಗಳ ಉದ್ಘಾಟನೆ

Suddi Udaya

ಮುಗೇರಡ್ಕ ಅಂಗನವಾಡಿಯಲ್ಲಿ ಎಲ್ ಕೆಜಿ , ಯುಕೆಜಿ ಪ್ರಾರಂಭ

Suddi Udaya

ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

Suddi Udaya
error: Content is protected !!