September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಜಪಾನ್ ದೇಶದ ಸಾಂಸ್ಕೃತಿಕ ವಿನಿಮಯ ಉತ್ಸವದಲ್ಲಿ ಉಜಿರೆ ಎಸ್‌ಡಿಎಂ ನ ವಿದ್ಯಾರ್ಥಿಗಳು

ಉಜಿರೆ: ಜಪಾನ್ ದೇಶದಲ್ಲಿ ಆಯೋಜಿಸಲಾಗಿರುವ “ಕಲ್ಚರಲ್ ಎಕ್ಸ್ಚೇಂಜ್ ಫೆಸ್ಟ್ ” ಕಾರ್ಯಕ್ರಮಕ್ಕೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಸಿಂಚನ ಮೂಡುಕೋಡಿ (ತೃತೀಯ ಪದವಿ), ಸಂಜನಾ (ದ್ವಿತೀಯ ಪದವಿ ) ಹಾಗೂ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಮಾಲಿನಿ ಅಂಚನ್ ಆಯ್ಕೆಯಾಗಿದ್ದು, ಶಿಕ್ಷಣ ಸಂಸ್ಥೆ ಹಾಗೂ ಕರಾವಳಿ ಭಾಗಕ್ಕೆ ಹೆಮ್ಮೆಯ ವಿಷಯವಾಗಿದೆ.

ಜಪಾನ್ ನಲ್ಲಿ ವಿದ್ಯಾರ್ಥಿಗಳಿಂದ ಯಕ್ಷಗಾನ “ರಾವಣ ವದೆ ಕಂಸ ವದೆ” ಪ್ರಸಂಗ ಪ್ರದರ್ಶನ ನೀಡಲಿದ್ದು ಕಾಲೇಜಿನ ಹಾಗೂ ಎಸ್‌ಡಿಎಂ ಕಲಾಕೇಂದ್ರದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯಲಿದ್ದಾರೆ.
ಭಾರತ ಮತ್ತು ಜಪಾನ್ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಉತ್ಸವದಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಪರಂಪರೆ ಹಾಗೂ ಶಿಕ್ಷಣ ಕ್ಷೇತ್ರದ ವೈಶಿಷ್ಟ್ಯಗಳನ್ನು ಪರಿಚಯಿಸುವ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಅನುಭವ ಮತ್ತು ಜ್ಞಾನವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಹಂಚಿಕೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶಚಂದ್ರ ಎಸ್, ಶ್ರೀಮತಿ ಸೋನಿಯಾ ಯಶೋವರ್ಮ, ಪೂರಣ್ ವರ್ಮಾ, ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ, ಶ್ರೀಮತಿ ಮನೋರಮಾ ಭಟ್, ಹಾಗೂ ಯಕ್ಷ ಗುರು ಅರುಣ್ ಕುಮಾರ್ ಧರ್ಮಸ್ಥಳ ಹಾಗೂ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದೊಂದಿಗೆ ಶುಭಾಶಯ ಕೋರಿದ್ದಾರೆ.

Related posts

ಮೇ 27: ಬೆಳ್ತಂಗಡಿ ತಾಲೂಕಿನ ವಿವಿಧೆಡೆ ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಭರತನಾಟ್ಯ ತರಗತಿ ಪ್ರಾರಂಭ

Suddi Udaya

ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಜೂನಿಯರ್ ರೆಡ್ ಕ್ರಾಸ್ ವತಿಯಿಂದ ವಿನೂತನ ಕಾರ್ಯಕ್ರಮ ತುಡಿತ ಭಾಗ 4

Suddi Udaya

ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಹಲವಾರು ಕುಟುಂಬಗಳಿಗೆ ಇನ್ನೂ ವಿದ್ಯುತ್ ಭಾಗ್ಯವಿಲ್ಲ: ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅಳದಂಗಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯ

Suddi Udaya

ಲಾಯಿಲ: ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಕಾರ್ತಿಕ್ ಅಸೋಸಿಯೇಟ್ ನ ಮಾಲಕರಿಂದ ಆಹಾರದ ಕಿಟ್ ವಿತರಣೆ

Suddi Udaya

ಕೋರ್ಟ್ ನಲ್ಲಿ ಬುರುಡೆ ಚಿನ್ನಯ್ಯನ ಮೂರು ದಿನಗಳ ಹೇಳಿಕೆ ಇಂದಿಗೆ ಮುಕ್ತಾಯ

Suddi Udaya
error: Content is protected !!