23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಸ್ಪೆಷಲ್ ಡಿಸ್ಕೌಂಟ್ ಸೇಲ್, ಸಾರಿ ಮೇಳ : ನೇರವಾಗಿ ಫ್ಯಾಕ್ಟರಿಯಿಂದ ಖರೀದಿ, ಗ್ರಾಹಕರಿಗೆ ಶೇ.20 ರಿಯಾಯಿತಿ ದರದಲ್ಲಿ ಮಾರಾಟ

ಉಜಿರೆ: ತಾಲೂಕಿನ ಪ್ರಸಿದ್ಧ ವಸ್ತ್ರೋದ್ಯಮ ಸಂಸ್ಥೆ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್ ನಲ್ಲಿ ವಿಶೇಷ ಸ್ಪೆಷಲ್ ಡಿಸ್ಕೌಂಟ್ ಸೇಲ್ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಮೋಹನ್ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆ.15 ರಿಂದ ಪ್ರಾರಂಭಗೊಂಡಿದೆ.ರೂ. 150 ರಿಂದ 15 ಸಾವಿರ ಬೆಲೆಯ ಬಟ್ಟೆಗಳ ಮೇಲೆ ಶೇ.20 ರಿಯಾಯಿತಿ ಲಭ್ಯವಿದ್ದು ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಅನುಕೂಲವಾಗುವಂತೆ ರಾಜ್ಯದ ಹಲವು ಫ್ಯಾಕ್ಟರಿಗಳಿಂದ ಬಟ್ಟೆಗಳನ್ನು ನೇರವಾಗಿ ಖರೀದಿಸಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ವಿವಿಧ ವಿನ್ಯಾಸದ ಬಟ್ಟೆಗಳನ್ನು ನೀಡಿ ಸಂಸ್ಥೆಯು ಪ್ರಸಿದ್ಧಿಯಾಗಿತ್ತು. ಈ ಭಾರಿ ವಿಶೇಷವಾಗಿ ಸಾರಿ ಮೇಳ ಹಮ್ಮಿಕೊಂಡಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ ಕಾಲೇಜು ಉದ್ಯೋಗಿಗಳಿಗೆ, ಸಂಘ ಸಂಸ್ಥೆಗಳಿಗೆ ಬೇಕಾದ ಸಮವಸ್ತ್ರ, ವಿವಿಧ ವಿನ್ಯಾಸದ ಸಾರಿಗಳು ಹಾಗೂ ಮಹಿಳೆಯರ, ಪುರುಷರ, ಮಕ್ಕಳ ಬಗೆ ಬಗೆಯ ವಸ್ತ್ರಗಳು ಇಲ್ಲಿ ಲಭ್ಯವಿದೆ.

ಗ್ರಾಹಕರಿಗೆ ಸಂತೃಪ್ತಿಗೆ ಮೊದಲ ಆಧ್ಯತೆ: ಮೋಹನ್ ಚೌಧರಿ
2015 ರಲ್ಲಿ ಉಜಿರೆಯಲ್ಲಿ ಶ್ರೀದುರ್ಗಾ ಟೆಕ್ಸ್ ಟೈಲ್ಸ್ ಸಂಸ್ಥೆ ಪ್ರಾರಂಭಿಸಿದಾಗ ಇಲ್ಲಿಯ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಬಟ್ಟೆಯ ಬೆಲೆ, ಗುಣಮಟ್ಟ, ಸರ್ವಿಸ್ ನೋಡಿ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಹಕರ ಆಶೀರ್ವಾದದಿಂದ ನಮ್ಮ ಸಂಸ್ಥೆ ತಾಲೂಕು ಹಾಗೂ ಜಿಲ್ಲೆಯ ವಿವಿಧಡೆ ವಿಸ್ತರಣೆಗೊಂಡಿತ್ತು.ಕೋವಿಡ್ ಸಮಯದಲ್ಲಿ ಉದ್ಯಮದಲ್ಲಿ ಸಮಸ್ಯೆ ಪ್ರಾರಂಭವಾಯಿತು. ಆದ್ದರಿಂದ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡಲು ಸಾಧ್ಯವಾಗಿಲ್ಲ. ಈದೀಗ ಉಜಿರೆಯ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ಮತ್ತು ರಿಯಾಯಿತಿ ದರದಲ್ಲಿ ಬಟ್ಟೆಗಳನ್ನು ನೀಡುವ ಸಲುವಾಗಿ ದೇಶದ 16 ರಾಜ್ಯಗಳಿಂದ ನೇರವಾಗಿ ಫ್ಯಾಕ್ಟರಿ ಮೂಲಕ ಖರೀದಿಸಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದೇವೆ. ಪ್ರತಿ ವರ್ಷದಂತೆ ಈ ಬಾರಿಯೂ ಸಾರಿ ಮೇಳ ಆಯೋಜಿಸಿದ್ದೇವೆ. ರೂ. 150 ರಿಂದ 15 ಸಾವಿರದವರೆಗೆ ಎಲ್ಲಾ ಸೀರೆಗಳ ಮೇಲೆ 20% ರಿಯಾಯಿತಿ ಇದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಮೋಹನ್ ಚೌಧರಿ ತಿಳಿಸಿದ್ದಾರೆ.

Related posts

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಉಜಿರೆ: ಮರ ಬಿದ್ದು ಗಂಭೀರ ಗಾಯಗೊಂಡ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕೆ.ಪಿ.ಸಿಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ

Suddi Udaya

ಕಡಿರುದ್ಯಾವರ : ಪಾದಚಾರಿಗೆ ಬೈಕ್ ಡಿಕ್ಕಿ: ಗಂಭೀರ ಗಾಯ

Suddi Udaya

ನಾರಾವಿ: ಮಾಂಡೋವಿ ಮೋಟಾರ್‍ಸ್ ನಾರಾವಿ ಶಾಖೆಯ ಉದ್ಘಾಟನೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಅಯೋಧ್ಯೆ ಯಾತ್ರೆ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ “ಆಟಿಡೊಂಜಿ ದಿನ” ಸ್ನೇಹಭೋಜನ ಕೂಟ

Suddi Udaya
error: Content is protected !!