ಬೆಳ್ತಂಗಡಿ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಸದಸ್ಯರಾದ ನೆರಿಯ ಲಲಿತಾ ,ಅರಸಿನಮಕ್ಕಿಯ ಕಾಳಿ ಹಾಗೂ ಗೋಪಿಯವರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ಸೋಲಾರ್ ನ್ನು ತಾಲೂಕಿನ ಯೋಜನಾಧಿಕಾರಿ ಯಶೋಧರ ರವರು ವಿತರಿಸಿದರು.


ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾ ವಸಂತ್, ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಅಶ್ವಿನಿ, ವಲಯ ಮೇಲ್ವಿಚಾರಕ ಗಣೇಶ್, ಸೇವಾಪ್ರತಿನಿಧಿ ಸರಿತಾ, ಅರುಣಾ, ರೂಪ ಉಪಸ್ಥಿತರಿದ್ದರು.











