
ಬೆಳ್ತಂಗಡಿ: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನ ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಬೆಳ್ತಂಗಡಿ ಮುಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಳಿಯ ಗೋಲ್ಡ್ & ಡೈಮಂಡ್ ಪ್ರಸ್ತುತ ಪಡಿಸುವ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಆ.23ರಂದು ಬೆಳ್ತಂಗಡಿ ರಕ್ಷಾ ಆರ್ಕೆಡ್ ನ ಆವರಣದಲ್ಲಿ ನಡೆಯಿತು.

ಬೆಳ್ತಂಗಡಿ ಅಮರ್ ಡ್ರಗ್ ಹೌಸ್ ನ ಮಾಲಕಿ ಸುಜಾತಾ ಗಣಪತಿ ಭಟ್ ರವರು ದೀಪ ಪ್ರಜ್ವಲನೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಸುದ್ದಿ ಉದಯ ವಾರಪತ್ರಿಕೆಯ ಉಪ ಸಂಪಾದಕರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ, ತೀರ್ಪುಗಾರರಾದ ಕನ್ನಡ ಪ್ರಾಧ್ಯಾಪಕ ಮಹಾಬಲ, ಉಪನ್ಯಾಸಕಿ ಹೇಮಾವತಿ, ಸುದ್ದಿ ಬಿಡುಗಡೆ ನಿರೂಪಕಿ ಶ್ರೇಯಾ, ಶಾಖಾ ಪ್ರಬಂಧಕ ಲೋಹಿತ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ನೂರಾರು ಕೃಷ್ಣ ವೇಷ ಸ್ಪರ್ಧಿಗಳು, ಪೋಷಕರು, ಮುಳಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಖ್ಯಾತ ನಿರೂಪಕಿ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮವನ್ನು ನಿರೂಪಿಸಿದರು.











