32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ : ರೂ. 164.75 ಕೋಟಿ ವ್ಯವಹಾರ, ರೂ.72.70 ಲಕ್ಷ ನಿವ್ವಳ ಲಾಭ, ಶೇ.16 ಡಿವಿಡೆಂಟ್ ಘೋಷಣೆ

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ 2024-25 ನೇ ಸಾಲಿನ 16 ನೇ ವಾರ್ಷಿಕ ಮಹಾಸಭೆ ಆ. 23 ರಂದು ಲ್ಯಾಲ ಜ್ಯೋತಿ ಹಾಸ್ಪಿಟಲ್ ಬಳಿ ಇರುವ ಸಂಗಮ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಅನಿಲ್ ಎ.ಜೆ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘ ಸತತ 14 ವರ್ಷ ದಿಂದ ಲಾಭ ಗಳಿಸಿದ್ದು. 2024-25 ನೇ ಸಾಲಿನಲ್ಲಿ ರೂ 164. 75 ಕೋಟಿ ವ್ಯವಹಾರ ನಡೆಸಿ ನಿವ್ವಳ ರೂ 72.70ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.16 ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ಎ.ಜೆ ರವರು ತಿಳಿಸಿದರು.


ಸಂಘದ ಉಪಾಧ್ಯಕ್ಷ ಜಾರ್ಜ್ ಎಮ್. ವಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಪಿ.ಎ 2024-25 ಸಾಲಿನ ಲೆಕ್ಕ ಪತ್ರವನ್ನು ಮಂಡಿಸಿದರು.


ನಿರ್ದೇಶಕರುಗಳಾದ ಸೆಭಾಸ್ಟೀನ್ ವಿ.ಟಿ, ಜ್ಯೆಸನ್ ಪಟ್ಟೇರಿಲ್, ಅಂದಾನಿ ಕೆ.ಡಿ, ಬಾಬು ತೋಮಸ್, ಬಿಜು ಪಿ.ಪಿ, ಬಿಜು ಎಮ್.ಜೆ, ಸೆಬಾಸ್ಟೀನ್, ಸೋಪಿ ಜೋಸೆಫ್, ಫಿಲೋಮಿನಾ ವಿ ಉಪಸ್ಥಿತರಿದ್ದರು.


ಬೆಳ್ತಂಗಡಿ ಮತ್ತು ಕಡಬ ತಾಲೂಕಿನಲ್ಲಿರುವ ನಮ್ಮ ಸಂಘದ ಸದಸ್ಯರುಗಳ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತ್ತು. ಕ್ರೀಡೆಯಲ್ಲಿ ಸಾಧನೆ ಮಾಡಿದ ಓರ್ವ ರನ್ನು ಹಾಗೂ ಅದೇ ರೀತಿ ಸಂಘದ ಸದಸ್ಯರುಗಳಾಗಿರುವ 15 ಮಂದಿ ಮಾಜಿ ಸೈನಿಕರನ್ನು ಗುರುತಿಸಿ ಸನ್ಮಾನಿಸಲಾಯಿತು.


ನಿರ್ದೇಶಕ ಸೆಬಾಸ್ಟೀನ್ ಬಂಗಾಡಿ ವಂದಿಸಿ, ಕಾರ್ಯಕ್ರಮಗಳನ್ನು ಯಶ್ವಸಿಯಾಗಿ ನಡೆಸಲು ಸಿಬ್ಬಂದಿ ವರ್ಗದವರು ಸಹಕರಿಸಿದರು. ಶಾಖಾ ವ್ಯವಸ್ಥಾಪಕ ಸುಜಾ ಜೇಮ್ಸ್ & ರೇಷ್ಮಾ ಅಬ್ರಾಹಂ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ನಿಡ್ಲೆ ಗ್ರಾ.ಪಂ. ಮಾಜಿ ಸದಸ್ಯ ಚಂದ್ರಶೇಖರ್ ನಿಧನ

Suddi Udaya

ಬೆಳ್ತಂಗಡಿಯಲ್ಲಿ ಯಾಂತ್ರಿಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ

Suddi Udaya

ಮಾಜಿ ಶಾಸಕ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಮೊಬೈಲ್ ರಿಟೇಲರ್ ಅಸೋಸಿಯೇಷನ್ ನಿಂದ ನಾಳೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಶ್ರದ್ಧಾಂಜಲಿ ಅರ್ಪಣೆ

Suddi Udaya

ಕಳೆಂಜ ಅಮ್ಮಿನಡ್ಕ ಲೋಲಾಕ್ಷರ ಮನೆ ಪಂಚಾಂಗ ಕೆಡವಿದ ಪ್ರಕರಣ : ಆರಂಭಗೊಂಡ ಕಂದಾಯ – ಅರಣ್ಯ ಜಂಟಿ ಸರ್ವೆ

Suddi Udaya

ಕಕ್ಕಿಂಜೆ ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೇನು ದಾಳಿ: ಆಸ್ಪತ್ರೆಗೆ ದಾಖಲು

Suddi Udaya

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ವಿ. ದೇವಸ್ಯ, ಉಪಾಧ್ಯಕ್ಷರಾಗಿ ಸುನಿಲ್ ದೊಂಡೋಲೆ ಅವಿರೋಧ ಆಯ್ಕೆ

Suddi Udaya
error: Content is protected !!