September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬಜಿರೆ ಪಿಎಂಶ್ರೀ ಶಾಲೆಯಲ್ಲಿ ಹದಿಹರೆಯದವರ ಮಾಹಿತಿ ಶಿಬಿರ

ಬಜಿರೆ: ಇಲ್ಲಿಯ ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕುರಿತು ಮಾಹಿತಿ ಕಾರ್ಯಾಗಾರವು ಜರುಗಿತು.

ಕಾರ್ಯಕ್ರಮದಲ್ಲಿ ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್, ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಪಿ., ತಾಯಂದಿರ ಸಮಿತಿ ಅಧ್ಯಕ್ಷೆ ಜಯಶ್ರೀ, ಎಸ್‌ಡಿಎಂಸಿಯ ಸದಸ್ಯರು, ತಾಯಂದಿರ ಸಮಿತಿಯ ಸದಸ್ಯರು ಎಸ್‌ಬಿಸಿಯ ಸದಸ್ಯರು, ಕ್ಷೇತ್ರ, ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್, ಮುಖ್ಯಶಿಕ್ಷಕಿ ಕಮಲಾಜಿ ಎಸ್. ಜೈನ್, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸಂದರ್ಭ ಇಲಾಖೆಯು ಒದಗಿಸುವ ಉಚಿತ ಸಮವಸ್ತ್ರದೊಂದಿಗೆ ಶಾಲೆಯ ಪೋಷಕರ ಒತ್ತಾಸೆಯಂತೆ ಒಂದು ಜೊತೆ ಆಕರ್ಷಕ ಸಮವಸ್ತ್ರದ ವ್ಯವಸ್ಥೆಯನ್ನು ಆರ್ಥಿಕವಾಗಿ ಹಿಂದುಳಿದ 16 ವಿದ್ಯಾರ್ಥಿಗಳಿಗೆ ತಾಯಂದಿರ ಸಮಿತಿಯ ದಾನಿಗಳ ಸಹಕಾರದಿಂದ ಈ ಪ್ರತ್ಯೇಕ ಸಮವಸ್ತ್ರವನ್ನು ಒದಗಿಸಿ ವಿತರಿಸಲಾಯಿತು.


ತಾಯಂದಿರ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಸವಿತಾ ಸ್ವಾಗತಿಸಿ, ಸದಸ್ಯೆ ರಜನಿ ವಂದಿಸಿದರು. ಮೀನಾ ಸಂಘದ ಅಧ್ಯಕ್ಷೆ ಕ್ಷಮಾ ಕಾರ್ಯಕ್ರಮ ನಿರೂಪಿಸಿದರು.

Related posts

ಸಿಯೋನ್ ಆಶ್ರಮದಲ್ಲಿ ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ಮಹಿಳಾ ಮಂಡಲದ ವತಿಯಿಂದ ಸಿಯೋನ್ ಆಶ್ರಮದ ಆಡಳಿತ ಟ್ರಸ್ಟಿ ಶ್ರೀಮತಿ ಮೇರಿ ಯು.ಪಿ. ರವರಿಗೆ ಸನ್ಮಾನ

Suddi Udaya

ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಉದ್ಘಾಟನೆ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ರವರಿಗೆ ಐಐಬಿ ಬೆಸ್ಟ್ ಬುಸಿನೆಸ್ ಲೀಡರ್‌ಶಿಪ್ ಅವಾರ್ಡ್ -2023 ಪ್ರಶಸ್ತಿ

Suddi Udaya

ಪಟ್ರಮೆ : ಕಲೆಂಬಿಕಾಡು ನಿವಾಸಿ ನೋಣಯ್ಯ ಗೌಡ ನಿಧನ

Suddi Udaya

ಚಾರ್ಮಾಡಿ: ತ್ರಿವರ್ಣ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಮಹಿಳಾ ದಿನಾಚರಣೆ

Suddi Udaya
error: Content is protected !!