25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾರಾವಿ ಮತ್ತು ಕುತ್ಲೂರು ಬಿಜೆಪಿ ಶಕ್ತಿಕೇಂದ್ರದ ಅಭ್ಯಾಸವರ್ಗ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ದ.ಕ ಜಿಲ್ಲೆ ಮತ್ತು ಬೆಳ್ತಂಗಡಿ ಮಂಡಲದ ವತಿಯಿಂದ ಆ. 24ರಂದು ನಾರಾವಿ ಕಾಶಿಮಠ ಸಭಾಂಗಣದಲ್ಲಿ ಬಿಜೆಪಿ ನಾರಾವಿ ಮತ್ತು ಕುತ್ಲೂರು ಶಕ್ತಿಕೇಂದ್ರದ ವಿಶೇಷ ಅಭ್ಯಾಸವರ್ಗ ಯಶಸ್ವಿಯಾಗಿ ನಡೆಯಿತು.

ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮಂಡಲದ ಉಪಾಧ್ಯಕ್ಷ ಮೋಹನ್ ಅಂಡಿಂಜೆ, ಹಿರಿಯ ಕಾರ್ಯಕರ್ತರಾದ ರತ್ನಾಕರ ಭಟ್, ಚೆಲುವಯ್ಯ ಪೂಜಾರಿ ಮತ್ತು ಕಾಂತಪ್ಪ ಮೂಲ್ಯರವರು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನಾ ಅವಧಿಯ ಸಂಪನ್ಮೂಲ ವ್ಯಕ್ತಿಗಳಾಗಿ ದ.ಕ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲ್ ಮತ್ತು ವೇಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉಮೇಶ್ ನಡ್ತಿಕಲ್ಲು ಭಾಗವಹಿಸಿದ್ದರು.


ಅಭ್ಯಾಸವರ್ಗದ ಸಮಾರೋಪ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶ್ರಮಿಕ ಶಾಸಕ ಹರೀಶ್ ಪೂಂಜರವರು ಭಾಗವಹಿಸಿ ಕಾರ್ಯಕರ್ತ ಬಂಧುಗಳಿಗೆ ರಾಷ್ಟ್ರೀಯತೆ, ಹಿಂದುತ್ವ ಮತ್ತು ಪಕ್ಷ ಸಂಘಟನೆಯ ಬಗ್ಗೆ ವಿಶೇಷ ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ಉಪಾಧ್ಯಕ್ಷೆ ಶ್ರೀಮತಿ ಸುಮಿತ್ರಾ ಮತ್ತು ಕೃಷಿ ಪತ್ತಿನ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ ಉಪಸ್ಥಿತರಿದ್ದರು.


ಅಭ್ಯಾಸವರ್ಗದಲ್ಲಿ ನಾರಾವಿ ಮತ್ತು ಕುತ್ಲೂರು ಶಕ್ತಿಕೇಂದ್ರ ಪ್ರಮುಖರಾದ ಪ್ರಕಾಶ್ ಆಚಾರ್ಯ, ರತ್ನಾಕರ ಬಡೆಕ್ಕಿಲ, ಮಂಡಲ ಸಾಮಾಜಿಕ ಜಾಲತಾಣ ಸಹ ಸಂಚಾಲಕ ರಂಜಿತ್ ಮರೋಡಿ, ನಾರಾವಿ ಮತ್ತು ಕುತ್ಲೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರುಗಳು, ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳು,ನಾರಾವಿ ಗ್ರಾಮ ಪಂಚಾಯತ್ ಸದಸ್ಯರುಗಳು,ಮಂಡಲ ಮತ್ತು ಮೋರ್ಚಾದ ಪದಾಧಿಕಾರಿಗಳು, ಬೂತ್ ಸಮಿತಿಯ ಪದಾಧಿಕಾರಿಗಳು, ಪ್ರಮುಖರು, ಹಿರಿಯರು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು. ಮುರಾರಿ ರಾವ್ ಹೊಳೆಹೊದ್ದು ಬಿಜೆಪಿ ಗೀತೆ ಹಾಡಿದರು. ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಉದಯ್ ಹೆಗ್ಡೆ ಸ್ವಾಗತಿಸಿದರು. ಬಿಜೆಪಿ ಮಹಾಶಕ್ತಿ ಕೇಂದ್ರ ನಾರಾವಿಯ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Related posts

ನಡ: ಮಂಜೊಟ್ಟಿ ನಿವಾಸಿ ರಿಕ್ಷಾ ಚಾಲಕ ಸುಂದರ ಗೌಡ ನಿಧನ

Suddi Udaya

ಖ್ಯಾತ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿಯವರಿಗೆ ಅಭಿನಂದನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ

Suddi Udaya

ಪದ್ಮುಂಜ ಹಾಲು ಉತ್ಪಾದಕರ ಸ. ಸಂಘದಿಂದ ರಾಸುಗಳ ಭ್ರೂಣ ವರ್ಗಾವಣೆ ಕಾರ್ಯಕ್ರಮ

Suddi Udaya

ಶ್ರೀರಾಮ ಪ್ರತಿಷ್ಠೆಯ ಸಂಭ್ರಮದ ಸಮಯ ಕಾಂಗ್ರೆಸ್ ತುಷ್ಟೀಕರಣದ ನೀತಿಗೆ ಅಂಟಿಕೊಂಡಿರುವುದು ವಿಪರ್ಯಾಸ: ಪ್ರತಾಪ್‌ಸಿಂಹ ನಾಯಕ್

Suddi Udaya

ಶಿಬಾಜೆ ಗ್ರಾ.ಪಂನಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ವಿಶೇಷ ಗ್ರಾಮ ಸಭೆ

Suddi Udaya

ನಾವೂರು ಜಾತ್ರಾ ಮಹೋತ್ಸವ: ಡಾ. ವೀಣಾ ಬನ್ನಂಜೆ ಅವರಿಂದ ಮೂರನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ

Suddi Udaya
error: Content is protected !!