37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ವಲಯ ಅಧ್ಯಕ್ಷರ ಭೇಟಿ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ, ಆ. 23 ರಂದು ನಡೆದ ವಿವಿಧ ಸಾಮಾಜಿಕ ಮತ್ತು ಶಿಕ್ಷಣಾತ್ಮಕ ಕಾರ್ಯಕ್ರಮಗಳಲ್ಲಿ ವಲಯ ಅಧ್ಯಕ್ಷ ಅಭಿಲಾಶ್ ಬಿ ಎ ಮತ್ತು ಅವರ ಆಪ್ತ ಕಾರ್ಯದರ್ಶಿ ರಾಘವೇಂದ್ರ ಕುಲಾಲ್ ಪಾಲ್ಗೊಂಡು ಕಾರ್ಯಕ್ರಮಗಳಿಗೆ ಶುಭಾಶಯ ಕೋರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆತ್ತಡ್ಕ ಶಾಲೆಯಲ್ಲಿ ಘಟಕದ ಅಧ್ಯಕ್ಷ ಡಾ. ಶೋಭಾ ಪಿ ಅವರ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಾದ ಶಿಬರಾಜೆ ಪಾದೆ ಬಸ್ಸು ತಂಗುದಾಣದ ನಾಮಫಲಕ ಅನಾವರಣ, ಶಿಬರಾಜೆ ಪಾದೆ ಅಂಗನವಾಡಿ ಕೇಂದ್ರಕ್ಕೆ ಕುಕ್ಕರ್ ಮತ್ತು ಕುರ್ಚಿಗಳ ಹಸ್ತಾಂತರ, ಶಾಲೆತ್ತಡ್ಕ ಶಾಲೆಗೆ ಹೊಸ ಪೋಡಿಯಂ ಹಸ್ತಾಂತರ, ಒಂದನೇ ತರಗತಿಯ ಮಕ್ಕಳಿಗೆ ಸ್ಥಿರ ಠೇವಣಿ ಪ್ರಮಾಣಪತ್ರ ವಿತರಣೆ, ಪೋಸ್ಟರ್ ಪ್ರಸ್ತುತಿ ಸ್ಪರ್ಧೆಯ ವಿಜೇತರಿಗೆ ಹಾಗೂ ಭಾಗವಹಿಸಿದವರಿಗೆ ಪ್ರಮಾಣಪತ್ರ ಹಾಗೂ ಪದಕ ವಿತರಣೆ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ, ಶ್ರೀಧರ್ ರಾವ್, ಪಿ.ಟಿ. ಸಬಾಸ್ಟಿನ್ ಮತ್ತು ಚಿದಾನಂದ ಎಸ್. ಹೂಗಾರ್ ಇವರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಿತು.

ಈ ಸಂದರ್ಭ ಸ್ಥಳೀಯ ಜೇಸಿಐ ಸದಸ್ಯರು, ಶಾಲಾ ಸಿಬ್ಬಂದಿ, ಪಾಲಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Related posts

ಕನ್ಯಾಡಿ ಶ್ರೀಗಳಿಂದ ರವೀಂದ್ರ ಪೂಜಾರಿ ಆರ್ಲರಿಗೆ ಗೌರವಾರ್ಪಣೆ

Suddi Udaya

ಸೌತಡ್ಕ: ಕಡೀರದಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ ಕೃಷಿ ಹಾನಿ

Suddi Udaya

ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಕಿಲ್ಲೂರಿನಲ್ಲಿ ಪ್ರತಿಷ್ಠಾಪನೆ: ಜ.11-12: ಮಿತ್ತಬಾಗಿಲು-ಮಲವಂತಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗುರು ಭವನ ಉದ್ಘಾಟನೆ

Suddi Udaya

ಬಳಂಜ: ಬೊಳ್ಳಾಜೆ- ಡೆಂಜೋಲಿ ರಸ್ತೆ ಮದ್ಯೆ ವಿದ್ಯುತ್ ತಂತಿ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ ಸಾರ್ವಜನಿಕರು: ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಬಳಂಜ ಗ್ರಾ‌.ಪಂ ಹಾಗೂ ಅರಣ್ಯ ಇಲಾಖೆಗೆ ಮನವಿ

Suddi Udaya

ಮಂಗಳೂರು – ಧರ್ಮಸ್ಥಳ: ರಾಜಹಂಸ ಬಸ್ ಸೇವೆ ಪ್ರಾರಂಭ

Suddi Udaya

ಕಾಶಿಪಟ್ಣ: ಚಂಪಾ ಅಣ್ಣಿ ದೇವಾಡಿಗ ನಿಧನ

Suddi Udaya
error: Content is protected !!