ಉಜಿರೆ: ಸೂರ್ಯೋದಲ್ಲಿ ಎದ್ದು ಪ್ರತಿ ದಿನ 8 ಶುಭ ವಸ್ತುಗಳ ದರುಶನ ಮಾಡಬೇಕು ಎಂದು ಹಿಂದೂ ಧರ್ಮಸಾರುತ್ತದೆ. ಅವುಗಳಲ್ಲಿ ಪ್ರಥಮ ಸ್ಥಾನಲ್ಲಿ ಇರುವುದೇ ಗೋವು. ಗೋವು ರಕ್ಷಣೆ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದ್ದು ಆ.26ರಂದು ಉಜಿರೆಯಲ್ಲಿ “ಗೋವು ಉಳಿದರೆ ನಾವು” ಅಭಿಯಾನ 2026 ನಡೆಯಲಿದೆ.
ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಶರತ್‌ಕೃಷ್ಣ ಪಡುವೆಟ್ನಾಯರು ನಂದಗೋಕುಲ ಗೋ ಶಾಲೆಗೆ ಕಾಣಿಕೆ ಡಬ್ಬಿಯನ್ನು ನೀಡುವ ಮೂಲಕ ಅಭಿಯಾನಕ್ಕೆ ಚಾಲನೆಯನ್ನು ನೀಡಲಿರುವರು ಎಂದು ಸಂಘಟಕರು ತಿಳಿಸಿದ್ದಾರೆ.











