23.5 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಸೌತಡ್ಕ ಗಣಪತಿ ದೇವಸ್ಥಾನದ ಹೆಸರಿನಲ್ಲಿ ಇನ್ಟಾ ಗ್ರಾಮ್ ಪೇಜ್ ದುರುಪಯೋಗ-ನಾಲ್ವರು ವಶಕ್ಕೆ

ಕೊಕ್ಕಡ: ಬಯಲು ಆಲಯ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಹೆಸರಿನಲ್ಲಿ ಇನ್ಟಾ ಗ್ರಾಮ್ ಪೇಜ್ ಅನಧಿಕೃತವಾಗಿ ದೇವಾಲಯದ ಮಾಹಿತಿ ಪ್ರಕಟಿಸಿ ಭಕ್ತಾದಿಗಳಿಂದ ಸೇವಾ ಶುಲ್ಕ ವಸೂಲು
ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್‌ ಅವರು ಮಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಡುವ ದೇವಸ್ಥಾನದ ಮಾಹಿತಿಯನ್ನು ಇನ್‌ಸ್ಟಾ ಗ್ರಾಮ್ ಪೇಜ್‌ ನಲ್ಲಿ ಅನಧಿಕೃತವಾಗಿ ಬಳಸಿಕೊಂಡು ಭಕ್ತಾದಿಗಳನ್ನು ದಾರಿ ತಪ್ಪಿಸಿ ದುರುಪಯೋಗಪಡಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಸಂಬಂಧಿಸಿದ ಇನ್‌ಸ್ಟಾ ಗ್ರಾಮ್ ಪೇಜ್‌ ನಲ್ಲಿ ಭಕ್ತರು ದೇವಸ್ಥಾನದ ಸೇವೆಗಾಗಿ ಆನ್‌ ಲೈನ್‌ ಮೂಲಕ ₹150 ಪಾವತಿ ಸಬೇಕೆಂದು ತಿಳಿಸಿ ಮೋಸ ಮಾಡಲಾಗುತ್ತಿತ್ತು.
ಘಟನೆ ಬೆಳಕಿಗೆ :
ಆಗಸ್ಟ್ 26 ರಂದು ಭಕ್ತರಿಂದ 150‌ ರೂ. ಸಂಗ್ರಹಿಸಿದ ಅಪಾದಿತರು ಸೌತಡ್ಕ ದೇವಸ್ಥಾನಕ್ಕೆ ಬಂದು, ದೇವಸ್ಥಾನದಲ್ಲಿ ಯಾವುದೇ ಸೇವಾ ರಶೀದಿ ಮಾಡದೆ ಅರ್ಚಕರ ಮೂಲಕ ದೇವರಿಗೆ ಅರ್ಚನೆ ಮಾಡಿಸಿ ಅದರ ವಿಡಿಯೋವನ್ನು ತೆಗೆಯುತ್ತಿದ್ದ ವೇಳೆ ಈ ಘಟನೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಗಮನಕ್ಕೆ ಬಂತು.
ತಕ್ಷಣ ಸಮಿತಿಯವರು ವಿಷಯವನ್ನು ಪರಿಶೀಲಿಸಿ ನಾಲ್ವರು ಅಪಾದಿತರನ್ನು ಸ್ಥಳದಲ್ಲೇ ಹಿಡಿದು ಧರ್ಮಸ್ಥಳ ಪೊಲೀಸ್‌ ಠಾಣೆಯ ವಶಕ್ಕೆ ಒಪ್ಪಿಸಿದ್ದಾರೆ.

ಈ ಪ್ರಕರಣದ ಹಿನ್ನೆಲೆಯಲ್ಲಿ, ದೇವಸ್ಥಾನದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಭಕ್ತರನ್ನು ಮೋಸ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ದೇವಸ್ಥಾನ ಸಮಿತಿ ಹಾಗೂ ಆಡಳಿತ ಮಂಡಳಿ ಕಠಿಣ ನಿಲುವು ಕೈಗೊಂಡಿದೆ.

Related posts

ಲೋಕಸಭಾ ಚುನಾವಣೆ: ಭಾರತೀಯ ಜನತಾ ಪಾರ್ಟಿ‌ ಬೆಳ್ತಂಗಡಿ ಮಂಡಲ ಇದರ ನೇತೃತ್ವದಲ್ಲಿ ಬೃಹತ್ ರೋಡ್ ಶೋ:ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮತ ಯಾಚನೆ

Suddi Udaya

ನೆರಿಯ: ರಸ್ತೆ ರಿಪೇರಿ ಮಾಡಿ ಮಾದರಿಯಾದ ಅಧ್ಯಾಪಕ ತಮ್ಮಯ್ಯ

Suddi Udaya

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ, ಶ್ರೀ ನಾಗಂಬಿಕಾ ದೇವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ, ವತಿಯಿಂದ 10ನೇ ವರ್ಷದ ಶ್ರೀ ಗಣೇಶೋತ್ಸವ

Suddi Udaya

ಬೆಳ್ತಂಗಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ಪುಕ್ಕಟೆ ಪ್ರಚಾರಕ್ಕಾಗಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ತನ್ನದೆಂದು ಬಿಂಬಿಸುವ ಬೆಳ್ತಂಗಡಿ ಕಾಂಗ್ರೆಸಿಗರು – ಗಣೇಶ್ ಗೌಡ ನಾವೂರು

Suddi Udaya

ಫೆ.26 ಬಳಂಜದಲ್ಲಿ ಗುರುಪೂಜೆ, ನೂತನ ಅಡುಗೆ ಕೊಠಡಿ ಉದ್ಘಾಟನೆ- ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!