September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೆ.3 ಕಾಯರ್ತಡ್ಕದಲ್ಲಿ ಶ್ರೀ ಕೃಷ್ಣ ಹೆಲ್ತ್ ಸೆಂಟರ್ ಶುಭಾರಂಭ, ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳ್ತಂಗಡಿ: ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ಸೆ.೩ ರಂದು ಬೆಳಿಗ್ಗೆ ೧೦:೩೦ಕ್ಕೆ ಶ್ರೀ ಕೃಷ್ಣ ಹೆಲ್ತ್ ಸೆಂಟರ್ ಶುಭಾರಂಭಗೊಳ್ಳಲಿದೆ.


ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆ ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ.ಪ್ರಸನ್ನ ಮಿತ್ರ ಉದ್ಘಾಟಿಸಲಿದ್ದಾರೆ. ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಮುರಳಿಕೃಷ್ಣ ಇರ್ವತ್ರಾಯ ಅಧ್ಯಕ್ಷತೆ ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಎಂಆರ್‌ಪಿಎಲ್ ಚೀಫ್ ಜನರಲ್ ಮ್ಯಾನೇಜರ್ ಡಾ ರುಡಾಲ್ಫ್ ನೊರೊನ್ಹಾ, ಕಳೆಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜಾ, ಉಪಾಧ್ಯಕ್ಷ ವಿಶ್ವನಾಥ ಹೆಚ್. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಹಾಗೂ ಕಾಯರ್ತಡ್ಕ ಕೊಂಗುAಪುಯ ಕಾಂಪ್ಲೆಕ್ಸ್ ಉದ್ಯಮಿ ಕೆ.ಎಮ್ ಚಾಕೋ ಭಾಗವಹಿಸಲಿದ್ದಾರೆ ಎಂದು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ, ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ಹಾಗೂ ಹೊಯ್ಸಳ ಹೆಲ್ತ್ ಕೇರ್ ಮೂಡಿಗೆರೆ ಆಡಳಿತ ನಿರ್ದೇಶಕರು, ವೈದ್ಯರು ಹಾಗೂ ಸಿಬ್ಬಂದಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉದ್ಘಾಟನಾ ಸಮಾರಂಭ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.ವೈದ್ಯರ ತಪಾಸಣೆ ಮತ್ತು ಸೂಕ್ತ ಸಲಹೆ, ಉಚಿತ ಔಷಧಿ, ರಕ್ತದೊತ್ತಡ, ಹಿಮೋಗ್ಲೋಬಿನ್, ಮಧುಮೇಹ ತಪಾಸಣೆ, ಇಸಿಜಿ ಹಾಗೂ ಜೀವನ ಶೈಲಿ ಮತ್ತು ಪಥ್ಯ ಆಹಾರ ಬಗ್ಗೆ ಸಮಾಲೋಚನೆ ಕುರಿತು ಶಿಬಿರದಲ್ಲಿ ಮಾಹಿತಿ ಪಡೆಯಹುದು.

Related posts

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 10 ದಿನಗಳ ಉಚಿತ ‘ಆಹಾರ ಸಂಸ್ಕರಣಾ ಉದ್ಯಮಿ’ ತರಬೇತಿ: ಅರ್ಜಿ ಆಹ್ವಾನ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ “ಕೊಳಂಬೆ” ಕಿರುಚಿತ್ರ ನಿರ್ಮಾಣ: ವಿಕೆ ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ 2025, ‘ಕೊಳಂಬೆ’ ಬೆಸ್ಟ್ ಕಿರುಚಿತ್ರ ಡಬಲ್ ಪ್ರಶಸ್ತಿ,ಅನೀಶ್ ಅಮೀನ್ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

Suddi Udaya

ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗೆ ತೆಕ್ಕಾರಿನ ಗುರುಕಿರಣ್ ಆಯ್ಕೆ

Suddi Udaya

ಬಂದಾರು: ಮತಪ್ರಚಾರ ಮಹಾ ಅಭಿಯಾನ

Suddi Udaya

ವೇಣೂರು ಶ್ರೀ ಧ.ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್ ಘಟಕ ವತಿಯಿಂದ ಮಂಗಳತೇರು ಶಾಲೆಯಲ್ಲಿ ನಾಯಕತ್ವ ಶಿಬಿರ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಧಿಕಾರ ವಹಿಸಿದ ಬಿಷಪ್ ಜೇಮ್ಸ್ ಪಟ್ಟೇರಿಯಲ್ ರವರನ್ನು ಅಭಿನಂದಿಸಿದ ಶಾಸಕ ಹರೀಶ್ ಪೂಂಜ

Suddi Udaya
error: Content is protected !!