27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಜೆ.ಎಫ್.ಡಿ ಶಂಕರ್ ರಾವ್ ರವರಿಗೆ ಪ್ರೇರಣಾ ಪುರಸ್ಕಾರ-2025

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಪೂರ್ವಾಧ್ಯಕ್ಷ, ವಾಣಿ. ಪಿ.ಯು ಕಾಲೇಜಿನ ವಾಣಿಜ್ಯ ವಿಭಾಗ ಮುಖ್ಯಸ್ಥ, ಜೆಸಿಐ ವಲಯ ತರಬೇತುದಾರ ಜೆ.ಎಫ್.ಡಿ ಶಂಕರ್ ರಾವ್ ಬಿ ಇವರಿಗೆ ಕಾರ್ಕಳದ ಬಾಲಜಿ ಇನ್ ಹೊಟೇಲ್ ಸಭಾಂಗಣದಲ್ಲಿ ನಡೆದ ಈ ವರ್ಷದ ಜೆಸಿಐ ವಲಯದ ತರಬೇತಿ ಸಮ್ಮೇಳನದಲ್ಲಿ ತರಬೇತುದಾರನಾಗಿ ಜೇಸಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಅತೀ ಹೆಚ್ಚು ತರಬೇತಿ ನೀಡಿರುವುದನ್ನು ಪರಿಗಣಿಸಿ ಜೆಸಿಐ ವಲಯ 15 ರಿಂದ ಕೊಡಲ್ಪಡುವ ಪ್ರೇರಣಾ ಪುರಸ್ಕಾರ-2025 ನೀಡಿ ಗೌರವಿಸಲಾಯಿತು.

ಈ ಪುರಸ್ಕಾರವನ್ನು ವಲಯಾಧ್ಯಕ್ಷ ಜೆಸಿ ಅಭಿಲಾಷ್ ಬಿ.ಎ ಇವರು ನೀಡಿ ಗೌರವಿಸಿದರು. ತರಬೇತಿ ವಿಭಾಗದ ನಿರ್ದೇಶಕಿ ಜೆಸಿ ಅಕ್ಷತಾ ಶೆಟ್ಟಿ, ಪ್ರಾಂತ್ಯ ಡಿ ವಲಯ ಉಪಾಧ್ಯಕ್ಷ ರಂಜಿತ್ ಎಚ್‌.ಡಿ, ಜೆಸಿಐ ಬೆಳ್ತಂಗಡಿ ಘಟಕಾಧ್ಯಕ್ಷೆ ಜೆಸಿ ಆಶಾಲತಾ ಪ್ರಶಾಂತ್ ವಲಯದ ಇತರ ಗಣ್ಯರು ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

Related posts

ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳಿಂದ ರಕ್ಷಿತ್ ಶಿವರಾಂ ಭೇಟಿ

Suddi Udaya

ಬೆಳಾಲಿನಲ್ಲಿ ಯಾಂತ್ರಿಕೃತವಾಗಿ ಭತ್ತದ ಬೇಸಾಯ “ಯಂತ್ರಶ್ರೀ” ತರಬೇತಿ

Suddi Udaya

ಬಿಜೆಪಿ ಚುನಾವಣಾ ಪ್ರಚಾರದ ಅಂಗವಾಗಿ ನಾರಾವಿ ಶಕ್ತಿ ಕೇಂದ್ರದಲ್ಲಿ ಪೂರ್ವಭಾವಿ ಸಭೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಸನ್ಮಾನ

Suddi Udaya

ವಾಣಿ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಕೌಸರ್ ಮೌಲ್ಯಮಾಪನದಲ್ಲಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ 7ನೇ ಸ್ಥಾನ

Suddi Udaya

ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಶ್ರೀ ದೇವರಿಗೆ ವಿಶೇಷ ಪೂಜೆ

Suddi Udaya
error: Content is protected !!