September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ತರಬೇತಿ ಸಮ್ಮೇಳನ: ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಪ್ರಶಸ್ತಿ ಹಾಗೂ ಮನ್ನಣೆಗಳು

ಬೆಳ್ತಂಗಡಿ: ಜೆಸಿಐ ವಲಯ 15 ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ತರಬೇತಿ ಸಮ್ಮೇಳನವು ಕಾರ್ಕಳದ ಬಾಲಜಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಜೆಸಿಐ ಬೆಳ್ತಂಗಡಿಯ ಸದಸ್ಯತ್ವ ಬೆಳವಣಿಗೆ ಹೊಸ ಜೆಸಿಐ ಘಟಕದ ಕೊಡುಗೆ ಹಾಗೂ ಜೆಸಿಐ ಭಾರತದ ವಿದ್ಯಾರ್ಥಿ ವೇತನ ನೀಡುವ ಫೌಂಡೇಶನ್ ಗೆ ನೀಡಿದ ದೇಣಿಗೆಗಳನ್ನು ಪರಿಗಣಿಸಿ ಅತ್ಯುತ್ತಮ 10 ಘಟಕದಲ್ಲಿ ಟಾಪ್ 6 ಪ್ರಶಸ್ತಿ ಪಡೆಯಿತು.

ಅದೇ ರೀತಿ ತರಬೇತಿ ವಿಭಾಗದಲ್ಲಿ ತಾಲೂಕಿನ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ಹಾಗೂ ಜೇಸಿ ಸದಸ್ಯರಿಗಾಗಿ ನಡೆಸಿದ ಹಲವಾರು ತರಬೇತಿಗಳನ್ನು ಪರಿಗಣಿಸಿ ಉಡುಪಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಅತ್ಯುತ್ತಮ 10 ಘಟಕಗಳಲ್ಲಿ ಟಾಪ್ 3 ಪ್ರಶಸ್ತಿಗೆ ಜೆಸಿಐ ಬೆಳ್ತಂಗಡಿ ಪಡೆದುಕೊಂಡಿತು ಅದಲ್ಲದೆ ಇತರ ಕಾರ್ಯಕ್ರಮಗಳಿಗೆ ಹಲವಾರು ಮನ್ನಣೆ ಗಳಿಗೆ ಪಾತ್ರವಾಯಿತು.

ಜೆಸಿಐ ಭಾರತದ ವಲಯ 15ರ ವಲಯಾಧ್ಯಕ್ಷ ಅಭಿಲಾಶ್ ಬಿಎ ಇವರು ಪ್ರಶಸ್ತಿ ಪ್ರದಾನ ಮಾಡಿದರು. ವಲಯ ಉಪಾಧ್ಯಕ್ಷ ರಂಜಿತ್ ಹೆಚ್‌ ಡಿ ಹಾಗೂ ವಲಯಾಡಳಿತ ಮಂಡಳಿಯ ಪದಾಧಿಕಾರಿಗಳು, ಪೂರ್ವ ವಲಯಾಧ್ಯಕ್ಷರು, ಜೆಸಿಐ ಬೆಳ್ತಂಗಡಿಯ ಘಟಕಾಧ್ಯಕ್ಷೆ ಆಶಾಲತಾ, ಪ್ರಶಾಂತ್, ಸದಸ್ಯರಾದ ಹೇಮಾವತಿ ಕೆ, ಭವ್ಯಶ್ರೀ ಕೀರ್ತಿರಾಜ್ ರಂಜನ್ ಗುಡಿಗಾರ್, ಶೈಲೇಶ್ ಕೆ, ಪೂರ್ವಾಧ್ಯಕ್ಷರಾದ ಪ್ರಶಾಂತ್ ಲಾೖಲ, ಶಂಕರ್ ರಾವ್ ಬಿ ಉಪಸ್ಥಿತರಿದ್ದರು.

Related posts

ಅ.24 ಸೌತಡ್ಕದಲ್ಲಿ ಶ್ರೀ ಮಹಾಗಣಪತಿ ಆಂಗ್ಲ ಮಾಧ್ಯಮ ಶಾಲೆಗೆ ಶಿಲಾನ್ಯಾಸ: ಡಾ. ಕೆ ಪ್ರಭಾಕರ್ ಭಟ್ ಕಲ್ಲಡ್ಕ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ:ಸಹಕಾರಿ ಭಾರತಿ ಬಿಜೆಪಿ ಬೆಂಬಲಿತ- 11 ಸ್ಥಾನ ಸೌಹಾರ್ದ ಸಹಕಾರಿ ಬಂಧುಗಳ ಒಕ್ಕೂಟಕ್ಕೆ 1- ಸ್ಥಾನ: ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

Suddi Udaya

ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಆರಿಕೋಡಿಯ ಧರ್ಮದರ್ಶಿ ಹರೀಶ್ ದಂಪತಿಗಳಿಂದ ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ನಂದಗೋಕುಲ ಗೋಶಾಲೆಗೆ ಗೊಗ್ರಾಸಕ್ಕಾಗಿ ರೂ.25,000 ದೇಣಿಗೆ ಹಸ್ತಾಂತರ

Suddi Udaya

ಕಾಶ್ಮೀರ ಉಗ್ರಗಾಮಿ ದಾಳಿ: ಶಾಂತಿ ಮತ್ತು ಮಾನವೀಯತೆಗೆ ಎದುರಾದ ಹೊಡೆತ: ಶಾಸಕ ಹರೀಶ್ ಪೂಂಜ

Suddi Udaya

ಪಾಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ನಡ : ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya
error: Content is protected !!