September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಪಟ್ರಮೆ ಗೆಳೆಯರ ಬಳಗದಿಂದ ಗಣೇಶ ಚತುರ್ಥಿ ಪ್ರಯುಕ್ತ ಅನಾರು ಶಾಲೆಯಲ್ಲಿ ಶ್ರಮದಾನ

ಪಟ್ರಮೆ : ಗೆಳೆಯರ ಬಳಗ ಪಟ್ರಮೆ ನೇತೃತ್ವದಲ್ಲಿ ಶಾಲಾ ಎಸ್ ಡಿ ಯಂ ಸಿ ಸಹಕಾರದಲ್ಲಿ ಶ್ರೀ ಗಣೇಶ ಚೌತಿ ಪ್ರಯುಕ್ತ ಸ.ಉ.ಹಿ.ಪ್ರಾಥಮಿಕ ಶಾಲೆ ಅನಾರಿನಲ್ಲಿ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಕೃಷಿಕ ಡೊಂಬಯ್ಯ ಗೌಡರು ತೆಂಗಿನ ಗಿಡ ನೆಡುವ ಮೂಲಕ ಶ್ರಮದಾನ ಉದ್ಘಾಟಿಸಿದರು.

ಶಾಲಾ ಆವರಣದ ಸುತ್ತ ತುಂಬಿದ್ದ ಗಿಡ ಗಂಟಿಗಳನ್ನು ಸ್ವಚ್ಚಗೊಳಿಸಿ 12 ತೆಂಗಿನ ಗಿಡಗಳನ್ನು ನೆಡಲಾಯಿತು.
ಶಿರೀಷ್ ರಾಜ್ ಸಂಕೇಶ 3 ತೆಂಗಿನ ಗಿಡ, ಅಣ್ಣು ಗೌಡ ಹಿರ್ತಡ್ಕ 4, ಚಂದ್ರ ಶೇಖರ ಗೌಡ ಅನಾರು 3, ಶಾಯಿದಾ 1, ಶಾಲೆಯಿಂದ 1 ಹೀಗೆ 12 ತೆಂಗಿನ ಗಿಡಗಳನ್ನು ಉಚಿತವಾಗಿ ಒದಗಿಸಿದರು. ಜಯಂತ ಪಾದೇಜಾಲು, ದಿನೇಶ್ ಮೈಕೆ, ದೊಲ್ಲ ಗೌಡ ಜಾಲು ರವರು ಗಿಡ ಗಂಟಿಗಳನ್ನು ಸ್ವಚ್ಚಗೊಳಿಸಲು ಮಿಷನ್ ಒದಗಿಸಿದ್ದರು.

ಶ್ರಮದಾನದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಚೋಮ ಪಾದೇಜಾಲು, ಎಸ್ ಡಿ ಯಂ ಸಿ ಅಧ್ಯಕ್ಷ ಧನಂಜಯ ಗೌಡ, ಉಪಾಧ್ಯಕ್ಷೆ ರೇವತಿ, ಮಾಜಿ ಅಧ್ಯಕ್ಷರುಗಳಾದ ದೊಲ್ಲ ಗೌಡ, ಶ್ಯಾಮರಾಜ್, ಶಾಲಾ ಶಿಕ್ಷಕರಾದ ಜಯಂತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಮಲ, ಡಿವೈಎಫ್ಐ ಪಟ್ರಮೆ ಅಧ್ಯಕ್ಷ ಭುವನೇಶ್ ನೆಕ್ಕರೆ, ಶಾಲಾ ಬಿಸಿಯೂಟ ನೌಕರರಾದ ರೇಖಾ, ಗೀತಾ ಮೊದಲಾದವರ ಸಹಿತ ಮೂವತ್ತಕ್ಕೂ ಹೆಚ್ಚು ಶ್ರಮದಾನಿಗಳು ಭಾಗವಹಿಸಿದ್ದರು.

ಆರಿಷ್ ಪಟ್ರಮೆ ಪಿಕಪ್ ಒದಗಿಸಿದ್ದರು. ನ್ಯಾಯವಾದಿ ಬಿ.ಎಂ. ಭಟ್ ಎಲ್ಲಾ ಶ್ರಮದಾನಿಗಳಿಗೆ ನೆನಪಿನ ಕಾಣಿಕಯನ್ನು ನೀಡಿದರು.

Related posts

ಶಿಶಿಲ ಶ್ರೀಕ್ಷೇತ್ರ ಚಂದ್ರಪರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದ ಆಡಳಿತ ಮಂಡಳಿಯಿಂದ ಭಕ್ತಿ ಕಾಣಿಕೆ ಸಮರ್ಪಣೆ

Suddi Udaya

ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿಯ ವತಿಯಿಂದ ಉಜಿರೆ ಸಂತ ಜಾರ್ಜ್ ದೇವಾಲಯಕ್ಕೆ ಭೇಟಿ

Suddi Udaya

ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಶಾಸಕ ಹರೀಶ್ ಪೂಂಜ ಸಾರಥ್ಯದಲ್ಲಿ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೋಸೆ ಹಬ್ಬಕ್ಕೆ ಚಾಲನೆ

Suddi Udaya

ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ವಿಜ್ಞಾಪನಾ ಪತ್ರ, ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಎಸ್ ಎ ಫ್ರೆಂಡ್ಸ್ ವತಿಯಿಂದ ಶಬ್ಬೀರ್ ಮಾಲಾಡಿ ಮತ್ತು ಅಕ್ಷಯ್ ಕಲ್ಲೆಗ ಟೈಗರ್ಸ್ ಪುತ್ತೂರು ಇವರ ಸ್ಮಾರನಾರ್ಥಕ ಕಬಡ್ಡಿ ಪಂದ್ಯಾಟ

Suddi Udaya
error: Content is protected !!