September 6, 2026
ಶುಭಾರಂಭಸಂಘ-ಸಂಸ್ಥೆಗಳು

ಮಚ್ಚಿನ ಪ್ಯಾಕ್ಸ್ ನ ನೂತನ ಕಟ್ಟಡ ಅನಂತ ಲೋಕಾರ್ಪಣೆ

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ “ಅನಂತ” ಇದರ ಉದ್ಘಾಟನಾ ಸಮಾರಂಭ ಆ.31ರಂದು ನಡೆಯಿತು. ನೂತನ ಕಟ್ಟಡ ಮತ್ತು ಬ್ಯಾಂಕಿಂಗ್ ವಿಭಾಗ , ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೇರವೇರಿಸಿ ಶುಭಾ ಕೊರಿದರು

.

ಮಚ್ಚಿನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ಸಂಘದ ಮಾರಾಟ ಮಳಿಗೆಯನ್ನು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹಾಗೂ ದಾಸ್ತಾನು ವಿಭಾಗವನ್ನು ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ನೋಟ್ಟು ಮತ್ತು ಉತ್ಪತ್ತಿ ಈಡಿನ ದಾಸ್ತಾನು ವಿಭಾಗವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ , ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ರುಕ್ಕಿಣಿ,
ಪುತ್ತೂರು ಉಪವಿಭಾಗ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ರಘು ಎಸ್.ಎಂ., ಬೆಳ್ತಂಗಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ ಪ್ರತಿಮಾ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಯಕ್ಷಣ್, ಉಪಾಧ್ಯಕ್ಷ ಕೆ. ಶ್ರೀಧರ ಪೂಜಾರಿ, ನಿರ್ದೇಶಕರಾದ ಗಣೇಶ್ ಆರ್ಕಜೆ, ಮೋಹನ ಗೌಡ, ರಾಜೇಶ್ ನಾಯ್ಕ, ಸುಜಾತ ಪಿ. ಸಾಲ್ಯಾನ್ ಚಿತ್ತರಂಜನ್ ಕೆ., ಬೇಬಿ, ಆನಂದ, ತುಂಗಪ್ಪ, ಉಮೇಶ್, ಜಯರಾಮ, ಡಿಸಿಸಿ ಪ್ರತಿನಿಧಿ ವಲಯ ಮೇಲ್ವಿಚಾರಕ ಸಿರಜುದ್ದೀನ್

ಮಚ್ಚಿನ ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಚಂದ್ರಕಾಂತ್ಗ ಉಪಾಧ್ಯಕ್ಷ ಸೋಮಾವತಿ. ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ವಸಂತಿ. ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸಹಕಾರಿ ಸಂಘದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವಿವಿಧ ಪ್ಯಾಕ್ಸ್ ಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.

ಸಿಬ್ಬಂದಿ ಏಕಲತಾ ಎನ್ ಆರ್ ಶೆಟ್ಟಿ ಪ್ರಾರ್ಥಿಸಿದರು. ರಾಜೇಶ್ ಪೆರ್ಮುಡ ನಿರೂಪಿಸಿದರು. ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಪ್ರಸ್ತಾವಿಸಿ ಸ್ವಾಗತಿಸಿದರು.

Related posts

ಆಮಂತ್ರಣ ದಶಮಾನೋತ್ಸವ ; ಅರುವಶ್ರೀ ಪ್ರಶಸ್ತಿ ಪ್ರಕಟ

Suddi Udaya

ಬಂಗೇರ ಬ್ರಿಗೇಡ್ ವೇಣೂರು ವ್ಯಾಪ್ತಿಯ ಸಮಿತಿ ರಚನೆ: ಅಧ್ಯಕ್ಷರಾಗಿ ಬಾಲಕೃಷ್ಣ ಭಟ್, ಪ್ರ. ಕಾರ್ಯದರ್ಶಿಯಾಗಿ ಲಕ್ಷ್ಮಣ ಪೂಜಾರಿ

Suddi Udaya

ತಾಲೂಕು ಜನಜಾಗೃತಿ ವೇದಿಕೆ ಸಭೆ: ನೂತನ ಅಧ್ಯಕ್ಷರಾಗಿ ಗಿರೀಶ್ ಕೆ.ಎಸ್ ವೇಣೂರು ಆಯ್ಕೆ

Suddi Udaya

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದ ಬಹು ಕೋಟಿ ಹಗರಣ ಪ್ರಕರಣ: ಸೊಸೈಟಿ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿ 9 ಮಂದಿಯ ಆಸ್ತಿ ತೀರ್ಪು ಪೂರ್ವ ಜಪ್ತಿ ಮಾಡಿ ಆದೇಶ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಶ್ರೇಷ್ಠ ಸಾಧನೆಗೆಪ್ರತಿಷ್ಠಿತ ಅರಸು ಪ್ರಶಸ್ತಿ -2025 ಪುರಸ್ಕಾರ

Suddi Udaya

ಜೈನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಜೈನ ಜಾತಿ ಮತ್ತು ಧರ್ಮಕ್ಕೆ ಅಪಮಾನ ಆರೋಪ ಮಹೇಶ್ ಶೆಟ್ಟಿ ತಿಮರೋಡಿ ಹಾಗೂರಾಜು ಶೆಟ್ಟಿ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!