ಬೆಳ್ತಂಗಡಿ: ಕರಾಡ ಬ್ರಾಹ್ಮಣ ಸಭಾ ಮೈಸೂರು ಇದರ ವಾರ್ಷಿಕೋತ್ಸವ ಮತ್ತು ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಇದರ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಲ್ಪಟ್ಟ ಕಾರ್ಯಕ್ರಮವು ಮೈಸೂರಿನಲ್ಲಿ ನ.15ರಂದು ನಡೆಯಿತು .
ನಾವೂರಿನ ವೈದ್ಯರಾದ ಡಾ। ಪ್ರದೀಪ್ ಅವರು “ನಿತ್ಯ ಜೀವನದಲ್ಲಿ ಭಗವದ್ಗೀತೆಯ ಪ್ರಸ್ತುತತೆ” ಇದರ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಭಗವದ್ಗೀತೆ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಮತ್ತು ಹಿರಿಯ ನಾಗರಿಕರಲ್ಲಿ ಯಾವ ರೀತಿ ಪ್ರಸ್ತುತವಾಗಿದೆ ಅನ್ನುವ ವಿಷಯವನ್ನು ಮನೋಜ್ಞವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಮೈಸೂರು ಕರಾಡ ಬ್ರಾಹ್ಮಣ ಸಭಾ ಇದರ ಅಧ್ಯಕ್ಷ ಕೃಷ್ಣಮೋಹನ ಭಟ್ ಮತ್ತು ಪದಾಧಿಕಾರಿಗಳು, ಮಾತೃ ಸಂಘದ ಅಧ್ಯಕ್ಷ ರಮಾನಂದ ಎಡಮಲೆ ಮತ್ತು ಪದಾಧಿಕಾರಿಗಳೂ ಉಪಸ್ಥಿತರಿದ್ದರು.
“ಮನೆ ಮನೆಗೆ ಪಾಂಚಜನ್ಯ” ಅಭಿಯಾನಕ್ಕೆ ಶಂಖಗಳ ಕೊಡುಗೆ: ಈ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ನಾವೂರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ “ಮನೆ ಮನೆಗೆ ಪಾಂಚಜನ್ಯ” ಅನ್ನುವ ಮಹತ್ ಕಾರ್ಯಕ್ಕೆ ಶಂಖಗಳನ್ನು ಉದಾರವಾಗಿ ನೀಡಿಲಾಯಿತು. ಈ ಮಹಾ ಕಾರ್ಯದಲ್ಲಿ ಮುಂದಿನ ದಿನಗಳಲ್ಲಿ ಸಮಾಜದ ಅನ್ಯಾನ್ಯ ಸಂಘ ಸಂಸ್ಥೆಗಳು ಶಂಖಗಳನ್ನು ಕೊಡುಗೆಯಾಗಿ ನೀಡಿ ಈ ಅಭಿಯಾನಕ್ಕೆ ಶಕ್ತಿಯನ್ನು ತುಂಬುವಂತಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಲಾಯಿತು.














