November 28, 2026
ಚಿತ್ರ ವರದಿಜಿಲ್ಲಾ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳುಸಮಸ್ಯೆ

ಉಪ್ಪಿನಂಗಡಿ–ಗುರುವಾಯನಕೆರೆ ಹೆದ್ದಾರಿ ಮರು ಡಾಮರೀಕರಣಕ್ಕೆ ಸಚಿವ ಸತೀಶ್ ಜಾರಕಿಹೊಳಿಗೆ ಎಸ್‌ಡಿಪಿಐ ನಿಯೋಗದಿಂದ ಮನವಿ

ಬೆಳ್ತಂಗಡಿ: ಕಳೆದ ನಾಲ್ಕು ವರ್ಷಗಳಿಂದ ತೀವ್ರ ಹದಗೆಟ್ಟಿರುವ ಉಪ್ಪಿನಂಗಡಿ–ಗುರುವಾಯನಕೆರೆ ರಾಜ್ಯ ಹೆದ್ದಾರಿ (SH-118) ಮರು ಡಾಮರೀಕರಣ ಸೇರಿದಂತೆ ತಾಲೂಕಿನ ಪ್ರಮುಖ ರಸ್ತೆಗಳನ್ನು ಆದ್ಯತೆಯ ಮೇರೆಗೆ ದುರಸ್ತಿಗೊಳಿಸುವಂತೆ ಆಗ್ರಹಿಸಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ನಿಯೋಗವು ನ.27ರಂದು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.

ಹೆದ್ದಾರಿಯಲ್ಲಿನ ಗುಂಡಿಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದ ನಿಯೋಗವು, ತಾತ್ಕಾಲಿಕ ತೇಪೆ ಕಾಮಗಾರಿಗೆ ಬದಲಾಗಿ ಸಮಗ್ರ ಮರು ಡಾಮರೀಕರಣ ನಡೆಸುವಂತೆ ಒತ್ತಾಯಿಸಿತು.

ಅಲ್ಲದೆ, ತಾಲೂಕಿನ ಗುರುವಾಯನಕೆರೆ, ಮೂಡುಬಿದಿರೆ, ಕೊಲ್ಲಿ ದೇವಸ್ಥಾನ ಹಾಗೂ ಕಾಜೂರು ದರ್ಗಾಕ್ಕೆ ಸಂಪರ್ಕ ಕಲ್ಪಿಸುವ ಲಾಯಿಲ–ಕಿಲ್ಲೂರು ರಸ್ತೆಯ ದುರಸ್ತಿಗೂ ಆದ್ಯತೆ ನೀಡುವಂತೆ ಮನವಿ ಮಾಡಲಾಯಿತು.

ಮನವಿಗೆ ಸ್ಪಂದಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ರಸ್ತೆ ಮರು ಡಾಮರೀಕರಣ ಕಾಮಗಾರಿಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳುವ ಭರವಸೆ ನೀಡಿದರು.

ನಿಯೋಗದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಸ್, ಕ್ಷೇತ್ರ ಉಪಾಧ್ಯಕ್ಷ ನಿಸಾರ್ ಕುದ್ರಡ್ಕ ಹಾಗೂ ಕಣಿಯೂರು ಬ್ಲಾಕ್ ಅಧ್ಯಕ್ಷರಾದ ಆಸೀಫ್ ಬಂಗೇರಕಟ್ಟೆ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೇದೆ ಸುಬ್ಬ ಪೂಜಾರಿ, ಮಿತ್ತಮಾರು ಬಿರ್ಮಣ್ಣ ಪೂಜಾರಿ, ಕುಂಜೀರ ಯಾನೆ ಸಿದ್ದಪ್ಪ ಪೂಜಾರಿ,ಸಮಾಜದ ಹಿರಿಯರು,ಮಾಜಿ ಶಾಸಕ ಕೆ.ವಸಂತ ಬಂಗೇರರವರು ಸೇರಿ ಸ್ಥಾಪಿಸಿದ ಸಂಘ ಬ್ರಹ್ಮಶ್ರೀ ನಾರಾಯಣ ಗುರುಗಳ ತಥವ ಸಿದ್ದಾಂತಕ್ಕೆ ಅನುಗುಣವಾಗಿ ಸಮಾಜಮುಖಿ ಸೇವಾ ಕಾರ್ಯ

Suddi Udaya

ಕೊಯ್ಯೂರು ಸ.ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ ಹಾಗೂ ಸುಜ್ಞಾನ ಬಯಲು ರಂಗಮಂದಿರ ಉದ್ಘಾಟನೆ

Suddi Udaya

ಉಜಿರೆ: ಕುಂಟಿನಿ ಮದ್ರಸದಲ್ಲಿ ಸ್ಥಾಪಕ ದಿನಾಚರಣೆ

Suddi Udaya

ಕಲ್ಮಂಜ: ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನೂತನ ಸಮಿತಿ ರಚನೆ

Suddi Udaya

ಉಜಿರೆ ಶ್ರೀ ಕಾಲಬೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ-ರೂ. 210.20ಕೋಟಿ ವ್ಯವಹಾರ, ರೂ.73.61 ಲಕ್ಷ ನಿವ್ವಳ ಲಾಭ

Suddi Udaya

ಹದಗೆಟ್ಟಿರುವ ಸುಲ್ಕೇರಿಯ ದೇರಂಡೋಡಿ ಮತ್ತು ದೇವರಗುಡ್ಡೆ ರಸ್ತೆ: ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya
error: Content is protected !!