September 6, 2026
ವರದಿ

ಮಡಂತ್ಯಾರು: ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ

ಮಡಂತ್ಯಾರು: ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಶಾಲಾ ಶಿಕ್ಷಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಬೆಳ್ತಂಗಡಿ, ಗ್ರಾಮ ಪಂಚಾಯತ್ ಮಡಂತ್ಯಾರು, ತಾಲೂಕು ಯುವಜನ ಒಕ್ಕೂಟ (ರಿ) ಬೆಳ್ತಂಗಡಿ ಮತ್ತು ತಾಲೂಕು ವಿವಿಧ ಸಂಘ ಸಂಸ್ಥೆಗಳು ಹಾಗೂ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳು ಮಡಂತ್ಯಾರು ಇವುಗಳ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಬೆಳ್ತಂಗಡಿ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ ಆಗಸ್ಟ್ 31ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ನಡೆಯಿತು.

ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪ ನವೀನ್ ಉದ್ಘಾಟಿಸಿದರು. ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ ಪ್ರಾಂಶುಪಾಲರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜು ಮಡಂತ್ಯಾರು ಅಧ್ಯಕ್ಷ ತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗೋಪಾಲಕೃಷ್ಣ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಮಡಂತ್ಯಾರು, ಭವಾನಿ ಶಂಕರ್ ಕಾರ್ಯನಿವರ್ಧಿಕಾರಿಗಳು ತಾ.ಪಂ. ಬೆಳ್ತಂಗಡಿ, ಪರಮೇಶ್ವರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಡಂತ್ಯಾರು, ವಂದನಿಯ ದೀಪಕ್ ಲಿಯೋಡೆಸ್, ಮುಖ್ಯ ಶಿಕ್ಷಕರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ, ಮಡಂತ್ಯಾರು, ಚಿದಾನಂದ ಇಡ್ಯ, ಕಾರ್ಯದರ್ಶಿಗಳು ತಾಲೂಕು ಯುವಜನ ಒಕ್ಕೂಟ (ರಿ). ಬೆಳ್ತಂಗಡಿ, ಶ್ರೀಮತಿ ರಜನಿ, ಅದೀಕ್ಷಕರು ಯುವ ಸಬಲೀಕರಣ ಕ್ರೀಡಾ ಇಲಾಖೆ, ರಮೇಶ್ H.M , ದೈಹಿಕ ಶಿಕ್ಷಕರು Sdm ಕಾಲೇಜ್ ಉಜಿರೆ, ವಿಶ್ವನಾಥ ಹಾರಾಬೆ, ಗ್ರಾ.ಪಂ. ಸದಸ್ಯರು ಮಡಂತ್ಯಾರು, ರಾಜೀವ ಪೂಜಾರಿ, ಗ್ರಾ.ಪಂ . ಸದಸ್ಯರು ಮಡಂತ್ಯಾರು, ಡಾ. ಪ್ರಕಾಶ್ ಡಿಸೋಜ, ನೋಡಲ್ ಅಧಿಕಾರಿ, ದಸರ ಕ್ರೀಡಾಕೂಟ ಭಾಗವಹಿಸಿದರು.

ಬೆಳ್ತಂಗಡಿ ತಾ.ಪಂ. ಕಾರ್ಯನಿರ್ಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿದರು. ಪ್ರಜ್ವೀತ ಮತ್ತು ತಂಡ ಪ್ರಾರ್ಥಿಸಿದರು. ಉಪನ್ಯಾಸಕ ವಸಂತ ಶೆಟ್ಟಿ ನಿರೂಪಿಸಿದರು. ಶಾಂತಪ್ಪ ಮೇಲ್ವಿಚಾರಕರು, ಯುವ ಸಬಲೀಕರಣ ಕ್ರೀಡಾ ಇಲಾಖೆ ವಂದಿಸಿದರು.

Related posts

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಗೆ ಪ್ರಗತಿ ಪರಿಶೀಲನ ತಂಡ ಭೇಟಿ

Suddi Udaya

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊಪ್ಪರಿಗೆ ತುಂಬಿಸುವ ಕಾರ್ಯಕ್ರಮ

Suddi Udaya

ಬೆಸ್ಟ್ ಎಂ.ಎಲ್.ಎ. ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ನಾವೂರಿನ ಭಕ್ತಾದಿಗಳಿಂದ ಸನ್ಮಾನ

Suddi Udaya

ಯಕ್ಷಯಾನ-2026: ಉಜಿರೆ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರಕ್ಕೆ ಸಮಗ್ರ ದ್ವಿತೀಯ ತಂಡ ಪ್ರಶಸ್ತಿ

Suddi Udaya

ಕಬಡ್ಡಿ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಹಿಂದೂ ಸಂಘಟನೆಗಳಿಂದ ಇಂದು(ಮೇ 2) ದ.ಕ ಜಿಲ್ಲೆ ಬಂದ್ ಗೆ ಕರೆ

Suddi Udaya
error: Content is protected !!