25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿಯಲ್ಲಿ ಬಿ.ಎಂ.ಎಸ್ ಸಮನ್ವಯ ಸಭೆ

ಬೆಳ್ತಂಗಡಿ: ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ತಾಲೂಕು ಘಟಕದ ಕಟ್ಟಡ ನಿರ್ಮಾಣ ಕಾರ್ಮಿಕರ, ರಿಕ್ಷಾ ಚಾಲಕ-ಮಾಲಕರ ಹಾಗೂ ರಬ್ಬರ್ ಕಾರ್ಮಿಕರ ಯೂನಿಯನ್‌ಗಳ ಸಂಯುಕ್ತ ಸಮನ್ವಯ ಸಭೆ ಸೆ. 1ರಂದು ಅಂಬೇಡ್ಕರ್ ಭವನದಲ್ಲಿ ನಡೆಯಿತು.


ಸಭೆಗೆ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು, ಜಿಲ್ಲಾ ಕಾರ್ಯದರ್ಶಿ ಗೋಪಾಲ ಕೃಷ್ಣ, ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ, ಕುಮಾರ್ ನಾಥ್ ಕಲಮಂಜ ಹಾಗೂ ತಾಲೂಕು ಅಧ್ಯಕ್ಷ ಉದಯ ಬಂದಾರು ನೇತೃತ್ವ ವಹಿಸಿದ್ದರು.


ಸಭೆಯ ಆರಂಭ ಶ್ರಮಿಕ ಗೀತೆಯಿಂದಾಗಿ, ಸ್ವಾಗತ ಭಾಷಣವನ್ನು ತಾಲೂಕು ಅಧ್ಯಕ್ಷರು ಸಲ್ಲಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಮನಿಹಳ್ಳ ಸಮನ್ವಯ ಸಭೆಯ ಮಹತ್ವವನ್ನು ವಿವರಿಸಿದರು. ಬಳಿಕ ಮೂರು ಯೂನಿಯನ್‌ಗಳ ವರದಿ ಮಂಡನೆಯಾದ ನಂತರ, ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಮತ್ತು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು, ಕಾರ್ಯದರ್ಶಿ ಗೋಪಾಲಕೃಷ್ಣ ಸಂಘಟನೆಯ ರಾಜ್ಯ-ಜಿಲ್ಲಾ ಮಟ್ಟದ ಚಟುವಟಿಕೆಗಳ ಮಾಹಿತಿ ನೀಡಿದರು.

ಸಭೆಯಲ್ಲಿ ಸಂಘಟನೆಯ ಉದ್ದೇಶ, ರಚನೆ ಹಾಗೂ ಮುಂದಿನ ಪ್ರಮುಖ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು. ಸೆ. 14ರಂದು ಶಿವಮೊಗ್ಗದಲ್ಲಿ ನಡೆಯಲಿರುವ 70ನೇ ವರ್ಷದ ರಾಜ್ಯಮಟ್ಟದ ಕುಟುಂಬ ಸಮೇತ ಕಾರ್ಯಕ್ರಮ, ಸೆಪ್ಟೆಂಬರ್ 17ರಂದು ವಿಶ್ವಕರ್ಮ ದಿನಾಚರಣೆ, ನವೆಂಬರ್ 12ರಂದು ಬೆಂಗಳೂರು ರಾಜ್ಯಮಟ್ಟದ ಹೋರಾಟ ಸೇರಿದಂತೆ ಹಲವು ನಿರ್ಣಾಯಕ ಕಾರ್ಯಕ್ರಮಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು.

Related posts

ದ.ಕ. ಸ.ಹಾ.ಉ. ಒಕ್ಕೂಟದ ನೂತನ ಜಿಲ್ಲಾ ನಿರ್ದೇಶಕರಾಗಿ ಆಯ್ಕೆಯಾದ ಎಚ್. ಪ್ರಭಾಕರ ಹುಲಿಮೇರು ರವರಿಗೆ ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya

ಸುಲ್ಕೇರಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀರಾಮ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ : ಕಸ್ತೂರಿ ರಂಗನ್ ವರದಿ ಭಾಧ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲು ಬೆಳ್ತಂಗಡಿ ಧರ್ಮಪ್ರಾಂತ್ಯದ ಕೆ ಎಸ್ ಎಂ ಸಿ ಎ ವತಿಯಿಂದ ಅಗ್ರಹ

Suddi Udaya

ಮುಂಡಾಜೆ ವಲಯದ ಚಾರ್ಮಾಡಿ-ಬಿ ಕಾರ್ಯಕ್ಷೇತ್ರದಲ್ಲಿ ನೂತನ ಸರಸ್ವತಿ ಸ್ವಸಹಾಯ ಸಂಘ ಉದ್ಘಾಟನೆ

Suddi Udaya

ಶಿಶಿಲ:ಕಂದಾಯ ಇಲಾಖೆಯಿಂದ ಭೂ ಪರಿವರ್ತನೆ ವಿಳಂಬ ಆಗುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya

ನಿಡ್ಲೆ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya
error: Content is protected !!