32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ ಒಕ್ಕೂಟದ ಪದಾಧಿಕಾರಿಗಳ ಸಭೆ

ಅಳದಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಳದಂಗಡಿ ವಲಯದ ವಲಯ ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಭೆಯನ್ನು ಒಕ್ಕೂಟದ ಎಲ್ಲಾ ಅಧ್ಯಕ್ಷರುಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಯಿತು. ತಾಲೂಕಿನ ಯೋಜನಾಧಿಕಾರಿ ಅಶೋಕ್ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ವೇಳೆ ಒಕ್ಕೂಟದ ವಲಯ ಅಧ್ಯಕ್ಷರಾಗಿ ಚಂದಪ್ಪ ಪೂಜಾರಿ ನಾವರ ಇವರನ್ನು ಆಯ್ಕೆ ಮಾಡಲಾಯಿತು. ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಸದಾನಂದ ಪೂಜಾರಿ ಉಂಗಿಲಬೈಲು ಇವರು ಯೋಜನೆಯ ಪ್ರಾರಂಭಿಕ ಹಂತದ ಮಾಹಿತಿ, ಆ ಕಾಲದಲ್ಲಿ ಕ್ಷೇತ್ರದಿಂದ ಪ್ರತಿ ಗ್ರಾಮದ ಕುಟುಂಬಗಳಿಗೆ ನೀಡಿರುವ ಮೂಲಭೂತ ಸೌಲಭ್ಯ ಗಳನ್ನು ಪೂಜ್ಯರ ಈ ಒಂದು ಚಿಂತನೆ ಯಿಂದ ಇವತ್ತು ಉನ್ನತ ಜೀವನ ನಿರ್ವಹಣೆ ಮಾಡುತ್ತಿರುವ ಕುಟುಂಬಗಳ ನಿದರ್ಶನಗಳನ್ನು ವಿವರಿಸಿದರು.

ವೇದಿಕೆಯಲ್ಲಿ 8 ಒಕ್ಕೂಟದ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಹಾಗೂ ನಿಕಟ ಪೂರ್ವ ಅಧ್ಯಕ್ಷರುಗಳು, ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಎಲ್ಲಾ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕಿ ಯಶೋಧ ಎಂ. ಸಾಧನೆಯ ವರದಿ ಮಂಡಿಸಿದರು. ಸೇವಾಪ್ರತಿನಿಧಿ ಹರಿಣಾಕ್ಷಿ ಪಿಲ್ಯ ಸ್ವಾಗತಿಸಿ, ಪುಷ್ಪ ನಾವರ ಧನ್ಯವಾದ ನೀಡಿದರು.

Related posts

ಪೋಲಿಸ್ ಇಲಾಖೆಯಲ್ಲಿ ಎ ಎಸ್ ಐ ಯಾಗಿ ಸೇವಾ ನಿವೃತ್ತಿ ಹೊಂದಿದ ಸ್ಯಾಮುವೆಲ್ ಎಂ.ಐ. ನೆಲ್ಯಾಡಿರವರಿಗೆ ಸನ್ಮಾನ

Suddi Udaya

ಡಿ.14: ಕನ್ಯಾಡಿ-1 ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Suddi Udaya

ಮುಂಡಾಜೆ ಪ್ರೌಢಶಾಲೆಯಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ- ಮದುಮಗಳ ಶೃಂಗಾರ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಉಜಿರೆ : ಕರಿಗಂಧ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ತರಬೇತಿ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತೀಶ್ ಕೆ ಬಂಗೇರ ಕಾಶಿಪಟ್ಣ, ಉಪಾಧ್ಯಕ್ಷರಾಗಿ ಶ್ರೀಪತಿ ಉಪಾಧ್ಯಯ ಆಯ್ಕೆ

Suddi Udaya
error: Content is protected !!