ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆ ಹಾಗೂ ಶ್ರೀ ಬಲರಾಮರ ಜಯಂತಿ ಆಚರಣೆ

ಬೆಳ್ತಂಗಡಿ : ಭಾರತೀಯ ಕಿಸಾನ್ ಸಂಘ ಬೆಳ್ತಂಗಡಿ ತಾಲೂಕು ಇದರ ಮಾಸಿಕ ಸಭೆ ಹಾಗೂ ರೈತರ ಆರಾಧ್ಯ ದೈವ ಶ್ರೀ ಬಲರಾಮರ ಜಯಂತಿಯನ್ನು ಶ್ರೀ ರಾಮಶಾಲೆ ಸುಲ್ಕೇರಿ ಯಲ್ಲಿ ಆ. 31 ರಂದು ಭಾರತೀಯ ಕಿಸಾನ್ ಸಂಘ ಅಧ್ಯಕ್ಷ ಭಾಸ್ಕರ್ ಸಾಲಿಯಾನ್ ಶಿರ್ಲಾಲು ಇವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘ ಇದರ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿಯವರು ಭಾಗವಹಿಸಿ ರೈತರಿಗೆ ಸಂಘಟನೆಯ ಬಗ್ಗೆ ಹಾಗೂ ಬಲರಾಮ ಜಯಂತಿಯ ಬಗ್ಗೆ ಮಾಹಿತಿಯನ್ನು ನೀಡಿದರು.


ಕಾರ್ಯಕ್ರಮದ ಆರಂಭದಲ್ಲಿ ಬಲರಾಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಸಭೆಯಲ್ಲಿ ಭಾರತೀಯ ಕಿಸಾನ್ ಸಂಘ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಂಬುಜಾಕ್ಷ, ಬೆಳ್ತಂಗಡಿ ಮಹಿಳಾ ಪ್ರಮುಖ್ ಶ್ರೀಮತಿ ಶೀಲಾ ,ಜಿಲ್ಲಾ ಸದಸ್ಯರಾದ ಶಿವರಾಂ ಹೆಗ್ಡೆ ,ನಿತ್ಯಾನಂದ ನಾವರ ,ತಾಲೂಕು ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಹಾಗೂ ತಾಲೂಕು ಉಪಾಧ್ಯಕ್ಷ ಜಯ ಸಾಲ್ಯಾನ್ ಬಳಂಜ ಉಪಸ್ಥಿತರಿದ್ದರು.

ಸಭೆಗೆ ಬೆಳ್ತಂಗಡಿ ತಾಲೂಕಿನ ಸುಮಾರು 30 ಗ್ರಾಮಗಳ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಭಾಗವಹಿಸಿ ಹಲವಾರು ರೈತರ ಸಮಸ್ಯೆಯನ್ನ ಚರ್ಚಿಸಿ ಮುಂದಿನ ದಿನಗಳಲ್ಲಿ ಇಡೀ ತಾಲೂಕಿನಲ್ಲಿ ರೈತರ ಸಂಘಟನೆಯನ್ನು ಬಲಪಡಿಸುವುದೆಂದು ತೀರ್ಮಾನಿಸಲಾಯಿತು. ಹಲವಾರು ಇಲಾಖೆಗಳಿಗೆ, ಸರಕಾರಕ್ಕೆ ತಮ್ಮ ರೈತರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ರೈತರ ಸಮಸ್ಯೆಯನ್ನ ಪರಿಹಾರ ಮಾಡಿಸುವ ದೃಷ್ಟಿಯಲ್ಲಿ ಹೋರಾಟವನ್ನು ನಡೆಸುವ ಮೂಲಕ ನಾವು ರೈತರು ಸಂಘಟಿತರಾಗಿ ನಮ್ಮ ಹಕ್ಕುಗಳ ಬಗ್ಗೆ ಹಕ್ಕೋತಾಯವನ್ನು ಮಾಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ರೈತರಿಗಾಗಿ ಒಂದು ದಿನದ ಅಭ್ಯಾಸ ವರ್ಗವನ್ನು ನಡೆಸುವುದಾಗಿ ಈ ಸಭೆಯಲ್ಲಿ ನಿರ್ಣಯಿಸಲಾಯಿತು.
ಜಯಸಾಲಿಯನ್ ಧನ್ಯವಾದವಿತ್ತರು.

Related posts

ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮರ ಕಡಿದು ದಾಸ್ತಾನು: ಅರಣ್ಯ ಸಂಚಾರಿ ದಳದಿಂದ ದಾಳಿ

Suddi Udaya

ಚಿಕ್ಕೋಡಿ ದಿಗಂಬರ ಜೈನ ಮುನಿ ಹತ್ಯೆ : ಬಂಗೇರ ಖಂಡನೆ

Suddi Udaya

ಉಪ್ಪಿನಂಗಡಿ: ಯುವತಿ ನಾಪತ್ತೆ: ಠಾಣೆಗೆ ದೂರು

Suddi Udaya

ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕು. ಸೌಜನ್ಯ ಅತ್ಯಾಚಾರ‌ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ ಆಗ್ರಹ

Suddi Udaya

ಉಪ್ಪಿನಂಗಡಿ ನೇತ್ರಾವತಿ ನದಿ ಕೂಟೇಲು ಎಂಬಲ್ಲಿ ಪ್ರವಾಹದಲ್ಲಿ ತೇಲಿ ಬಂದ ಜಾನುವಾರು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮುಂಡಾಜೆ ಮಂಜುಶ್ರೀ ಭಜನಾ ಮಂಡಳಿಗೆ ಆರ್ಥಿಕ ನೆರವು

Suddi Udaya
error: Content is protected !!