July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುಕ್ಕೇಡಿ ಗ್ರಾಮ ಪಂಚಾಯತಿನಲ್ಲಿ ನಿವೃತ್ತ ಅಂಚೆ ಪಾಲಕರಾದ ವಿಶ್ವನಾಥ ಪೂಜಾರಿ ಹಾಗೂ ವಿಜಯ ರಾಜ್ ಜೈನ್ ರಿಗೆ ನಾಗರೀಕ ಸನ್ಮಾನ

ಕುಕ್ಕೇಡಿ: ಕುಕ್ಕೇಡಿ ಗ್ರಾಮ ಪಂಚಾಯತ್, ಕುಕ್ಕೇಡಿ-ನಿಟ್ಟಡೆ ಗ್ರಾಮಗಳ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಕುಕ್ಕೇಡಿ-ನಿಟ್ಟಡೆ ಗ್ರಾಮದಲ್ಲಿ ಗ್ರಾಮೀಣ ಅಂಚೆಪಾಲಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿರುವ ಗ್ರಾಮೀಣ ಅಂಚೆ ಪಾಲಕರಾದ ವಿಶ್ವನಾಥ ಪೂಜಾರಿ ಮತ್ತು ವಿಜಯರಾಜ್ ಜೈನ್ ಇವರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮ ಹಾಗೂ ಕುಕ್ಕೇಡಿ ಪಂಚಾಯತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ದಿ। ಸಂಜೀವ ಗೌಡರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ಆ. 31ರಂದು ಕುಕ್ಕೇಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ದಾರ ಶಿವಪ್ರಸಾದ್ ಅಜಿಲರು ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕೆ. ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ಅಂಚೆ ಇಲಾಖೆ ಯ ಪುತ್ತೂರು ವಿಭಾಗದ ಹಿರಿಯ ಅಧೀಕ್ಷಕ ನರಸಿಂಹ ಕಾಮತ್ ಭಾಗವಹಿಸಿದ್ದರು. ನಿವೃತ್ತ ಅಂಚೆ ಪಾಲಕರರು ದಂಪತಿ ಸಹಿತ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಸದಸ್ಯರು, ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್., ಜಿ.ಪಂ. ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಮಂಜುಶ್ರೀ ಭಜನಾ ಮಂಡಳಿ ಅಧ್ಯಕ್ಷ ಆನಂದ ಎನ್. ಕೋಟಿ ಚೆನ್ನಯ್ಯ ಸೇವಾ ಸಮಿತಿ, ಅಧ್ಯಕ್ಷ ಸತೀಶ್ ಕೇರಿಯಾರು, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಪಂಚಾಯತ್‌ ಸಿಬ್ಬಂದಿ, ಊರ ನಾಗರೀಕ ರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ಎ. ಸ್ವಾಗತಿಸಿ, ಜಗನ್ನಾಥ ದೇವಾಡಿಗ ನಿರೂಪಿಸಿದರು. ಕಾರ್ಯದರ್ಶಿ ಕುಂಜ ವಂದಿಸಿದರು.

Related posts

ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಮಾಜಿ ಶಾಸಕ ವಸಂತ ಬಂಗೇರರಿಗೆ ನುಡಿ ನಮನ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ಶ್ರಮದಾನ

Suddi Udaya

ಬಂದಾರು: ಮೈರೋಳ್ತಡ್ಕ ಬೂತ್ 218 ರಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನ್ ದಿವಸ್ ಆಚರಣೆ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಡಿ.10: ಬೆಳಾಲು ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ ಕಾರ್ಯಕ್ರಮ

Suddi Udaya

ರಸ್ತೆ ಬದಿಯಲ್ಲಿ ನಿಂತು ವಾಹನಗಳಿಗೆ ಕೈ ತೋರಿಸುವ ಮಕ್ಕಳು: ಪೋಷಕರ ಆತಂಕ

Suddi Udaya

ಎಂ.ಡಿ.ಎಂ.ಎ. ಮಾದಕ ವಸ್ತು ಮಾರಾಟ: ಆರೋಪಿ ಕೊಕ್ಕಡ ನಿವಾಸಿ ಯಹ್ಯಾ ಬಂಧನ

Suddi Udaya
error: Content is protected !!