25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದಲ್ಲಿ ಧರ್ಮ ರಕ್ಷಾ ಜಾಥಾ

ಧರ್ಮಸ್ಥಳ :ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದಲ್ಲಿ ಧರ್ಮ ರಕ್ಷಾ ಜಾಥಾ ನಡೆಯಿತು.

ಶಿವಮೊಗ್ಗದಿಂದ ಆರಂಭವಾದ ಜಾಥ ಧರ್ಮಸ್ಥಳಕ್ಕೆ ಮಂಗಳವಾರ ಸಂಜೆ ತಲುಪಿತು. ಜಾಥದಲ್ಲಿ 200ಕ್ಕೂ ಹೆಚ್ಚು ವಾಹನದಲ್ಲಿ 1500ಕ್ಕೂ ಹೆಚ್ಚು ಧರ್ಮ ಭಕ್ತರು ಆಗಮಿಸಿದರು.

ಈ ವೇಳೆ ಈಶ್ವರಪ್ಪ ಅವರಿಗೆ ದೇವಸ್ಥಾನದ ವತಿಯಿಂದ ಶಾಲು ಹೊದಿಸಿ ಗೌರವ ಸಲ್ಲಿಕೆ ಮಾಡಲಾಯ್ತು. ಇನ್ನು ಜಾಥದ ಜೊತೆಗೆ ತುಂಗಾ-ಗಂಗಾ-ನೇತ್ರಾವತಿಯ ಪವಿತ್ರ ನದಿಯಿಂದ ನೀರನ್ನು ತರಲಾಗಿದ್ದು, ಧರ್ಮಸ್ಥಳದಲ್ಲಿ ಮೂರು ನದಿಯ ನೀರು ಪ್ರೋಕ್ಷಣೆ ಮಾಡಲಾಗಿದೆ. ಜಾಥ ತಲುಪಿದ ಬಳಿಕ ಮಾತನಾಡಿದ ಕೆ.ಎಸ್ ಈಶ್ವರಪ್ಪ , ನಾವು ಧರ್ಮಸ್ಥಳ ಶುದ್ಧಿಕರಣ ಮಾಡಲು ಬಂದಿದ್ದೇವೆ.

ಕಾಶಿಯಿಂದ ಗಂಗಾ ಜಲ, ಶಿವಮೊಗ್ಗದಿಂದ ತುಂಗಾ, ಧರ್ಮಸ್ಥಳದಿಂದ ನೇತ್ರಾವತಿ ನೀರು ತಂದಿದ್ದೇವೆ. ರಸ್ತೆಯಲ್ಲಿ ಪ್ರೋಕ್ಷಣೆ ಮಾಡಿ ಶುದ್ಧ ಮಾಡುತ್ತೇವೆ. ಅಂದೇ ಇವರೆನ್ನೆಲ್ಲಾ ಅರೆಸ್ಟ್ ಮಾಡಿ ಒದ್ದು ಒಳಗೆ ಹಾಕಿದಿದ್ರೆ ಈ ಮಟ್ಟಿಗೆ ಈ ವಿಚಾರ ಬೆಳೆಯುತ್ತಿರಲಿಲ್ಲ. ಈಗ ಅವರ ಬಾಯಲ್ಲೇ ಎಲ್ಲಾ ಸತ್ಯ ಹೊರಬರುತ್ತಿದೆ.ಸರ್ಕಾರ ಇವರನ್ನ ಇಲ್ಲಿವರೆಗೆ ಬಿಟ್ಟದ್ದೇ ತಪ್ಪು.ವಿದೇಶಿ ಹಣ ಬಂದಿದೆ, ರಾಷ್ಟ್ರದ್ರೋಹಿಗಳು ಇದರಲ್ಲಿ ಕೈ ಜೋಡಿಸಿದ್ದಾರೆ. ಎಸ್.ಐ.ಟಿ.ಯಿಂದ ಸಾಕಷ್ಟು ಮಾಹಿತಿ ಹೊರಬಂದಿದೆ, ಅವರಿಗೆ ಧನ್ಯವಾದ ಎಂದರು. 18 ಅಡಿ ಗುಂಡಿ ತೆಗೆದು ಹೆಣ ಹೂಳಲು ಸಾಧ್ಯವೇ.ಪ್ರಕರಣವನ್ನ ಎನ್.ಐ.ಎ‌.ಗೆ ಕೊಡಬೇಕು. ಹಿಂದೂ ಧರ್ಮ ಉಳಿಯಬೇಕು, ಹಿಂದೂ ಧರ್ಮ ಉಳಿಯಲು ಪ್ರಾಣ ಕೊಡಲು ನಾವು ಸಿದ್ಧ ಎಂದರು. ಈ ಪ್ರಕರಣದ ಹಿಂದೆ ಇರುವ ಸಮೀರನಿಗೆ ಎಸ್ ಡಿ ಪಿಐ ಬೆಂಬಲ ಇದೆ. ವಕೀಲರುಗಳಿಗೆ ಹಣ ಎಲ್ಲಿಂದ ಸಿಗುತ್ತಿದೆ. ವಿದೇಶದ ಕಾಣದ ಕೈಗಳು ಕೆಲಸ ಮಾಡುತ್ತಿದೆ ಎಂದರು.

Related posts

ಮಾಲಾಡಿ: ಕೆತ್ತಿಗುಡ್ಡೆ ಹೊಸ ರಸ್ತೆ ಮತ್ತು ಸಂಪರ್ಕ ಸೇತುವೆ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒಂದು ಲಕ್ಷ ಮಂಜೂರು

Suddi Udaya

ನಡ ಸ.ಹಿ.ಪ್ರಾ. ಶಾಲೆಗೆ ರೂ.1.17 ಕೋಟಿ ವೆಚ್ಚದ ನೂತನ ಕಟ್ಟಡ ಉದ್ಘಾಟನೆ

Suddi Udaya

ನಿವೃತ್ತ ಸೇನಾಧಿಕಾರಿ ಕುಮಾರ ಸ್ವಾಮಿ ಮತ್ತು ಕ್ಯಾಂಪ್ಕೊ ಕಂಪೆನಿಯ ಹಿರಿಯ ಮೇನೇಜರ್‌‌, ‌ನಿವೃತ್ತ ಸುಭೇದಾರ್‌ ರಂಗನಾಥ್ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಸುರ್ಯ ಶ್ರೀ ಸದಾಶಿವರುದ್ರ ದೇವಾಲಯಕ್ಕೆ ಭೇಟಿ

Suddi Udaya

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya

ಮೊಗ್ರು: ಗುಡ್ಡ ಜರಿದು ಮನೆಗೆ ಹಾನಿ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಮಟ್ಟದ ಬೆನ್ನಿದ ನಿರೆಲ್ದ ಬಿರ್ದ್ ಇದರ ಛಾಯಾಚಿತ್ರ ಹಾಗೂ ವೀಡಿಯೋ ಸ್ಪರ್ಧೆ: ಬೆಳ್ತಂಗಡಿ ವಲಯ ಪ್ರಥಮ ಸ್ಥಾನ

Suddi Udaya
error: Content is protected !!