26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ ಸ.ಹಿ.ಪ್ರಾ. ಶಾಲೆಗೆ ರೂ.1.17 ಕೋಟಿ ವೆಚ್ಚದ ನೂತನ ಕಟ್ಟಡ ಉದ್ಘಾಟನೆ


ನಡ: ವಿಧಾನ ಪರಿಷತ್ ಸದಸ್ಯರ ನಿಧಿ ರೂ.1.17 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ ಇದರ ನೂತನ ಕಟ್ಟಡದ ಉದ್ಘಾಟನೆ ಜ.6 ರಂದು ನಡೆಯಲಿದೆ” ಎಂದು ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಹೇಳಿದರು.


ಅವರು ಜ.1ರಂದು ಶಾಲೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಕರ್ನಾಟಕ ಸರಕಾರದ ಸಭಾಧ್ಯಕ್ಷ ಯು. ಟಿ. ಖಾದರ್ ಸಮಾರಂಭದ ಉದ್ಘಾಟನೆಯನ್ನು, ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ನೂತನ ಕಟ್ಟಡವನ್ನು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಸಭಾ ಸದಸ್ಯರು ಡಾ.ಡಿ.ವೀರೇಂದ್ರ ಹೆಗ್ಗಡೆ, ವಿಧಾನ ಪರಿಷತ್ ಶಾಸಕರುಗಳಾದ ಕೋಟ ಶ್ರೀನಿವಾಸ್ ಪೂಜಾರಿ, ಕೆ. ಹರೀಶ್ ಕುಮಾರ್,ಬಿ.ಎಂ.ಫಾರೂಕ್, ಎಸ್.ಎಲ್. ಭೋಜೆ ಗೌಡ, ಪ್ರತಾಪಸಿಂಹ ನಾಯಕ್, ಮಂಜುನಾಥ್ ಭಂಡಾರಿ,ನಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ,ಸರಕಾರಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಿನ್ಸಿಪಾಲ್ ಡಾ.ಸಿಪ್ರಿಯನ್ ಮೊಂತೆರೋ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದಯಾನಂದ ರಾಮಚಂದ್ರ ನಾಯ್ಕ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಿನ್ಸಿಪಾಲ್ ರಾಜಲಕ್ಷೀ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಸಮನ್ವಯಾಧಿಕಾರಿ ಮೋಹನ್ ಕುಮಾರ್, ಧನಂಜಯ ಅಜ್ರಿ ನಡ ಗುತ್ತು, ಪಂಚಾಯತಿ ಸದಸ್ಯರು ಇನ್ನಿತರ ಗಣ್ಯರು ಭಾಗವಸಲಿದ್ದಾರೆ ಎಂದು ತಿಳಿಸಿದರು.


ನಡ ಗ್ರಾಮದ ಜನರ ಕೂಡುವಿಕೆಯಿಂದ ನಡ ಗುತ್ತು ದೇವಪ್ಪ ಅಜ್ರಿಯವರ ಮುಂದಾಳತ್ವದಲ್ಲಿ ೧೯೨೫ ನ.೯ರಂದು ಬಸದಿಯ ಛತ್ರದಲ್ಲಿ ಶಾಲೆ ಪ್ರಾರಂಭವಾಯಿತು. ಆಗ ಗ್ರಾಮದಲ್ಲಿ ಒಂದೇ ಶಾಲೆ ಇದ್ದುದರಿಂದ ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. ಪ್ರಸ್ತುತ ಗ್ರಾಮದಲ್ಲಿ 6 ಶಾಲೆಗಳು ಇದ್ದರೂ 92 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಈ ಶಾಲೆಯಲ್ಲಿ ಹಳೆಯ ಕಟ್ಟಡ ಇದ್ದುದರಿಂದ ಸರಕಾರ ಅನುದಾನದಲ್ಲಿ ರೂ.1.17 ಕೋಟಿ ವೆಚ್ಚದ 7 ಕೊಠಡಿ, ಶೌಚಾಲಯ,ಸ್ಮಾರ್ಟ್ ಕ್ಲಾಸ್ ಗಳನ್ನು ಒಳಗೊಂಡ ಎಲ್ಲಾ ನೂತನ ಕಟ್ಟಡ ನಿರ್ಮಾಣವಾಗಿದೆ” ಎಂದರು.


ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಮಾಜಿ ಸದಸ್ಯ ರಾಜಶೇಖರ್ ಅಜ್ರಿ, ನಡ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಎಸ್ ಡಿ ಎಂ ಸಿ ಅಧ್ಯಕ್ಷ ವಸಂತ ಗೌಡ, ಮುಖ್ಯ ಶಿಕ್ಷಕಿ ಪುಷ್ಪಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯ ಗೌಡ, ನ್ಯಾಯವಾದಿ ಶಶಿಕಿರಣ್ ಜೈನ್, ಗ್ರಾ.ಪಂ ಮಾಜಿ ಅಧ್ಯಕ್ಷ ಮುನಿರಾಜ ಅಜ್ರಿ, ಸಯ್ಯದ್ ಅಬೀಬ್ ಸಾಹೇಬ್, ಪ್ರವೀಣ್ ವಿ.ಜೆ. ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಶಿವಪ್ರಸಾದ್ ಕೊಕ್ಕಡ

Suddi Udaya

ಪಶ್ಚಿಮ ಘಟ್ಟದ ಎಲ್ಲ ಅರಣ್ಯ ಒತ್ತುವರಿ ಮತ್ತು ಅನಧಿಕೃತ ಹೋಮ್ ಸ್ಟೇ, ಬಡಾವಣೆ, ರೆಸಾರ್ಟ್ ಗಳನ್ನು ತೆರವುಗೊಳಿಸುವಂತೆ ಅರಣ್ಯ ಸಚಿವರಿಂದ ಖಡಕ್ ಸೂಚನೆ

Suddi Udaya

ಬೆಳ್ತಂಗಡಿ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿಯಲ್ಲಿ ಜುಂಬಾ ಫಿಟ್ನೆಸ್ ತರಬೇತಿ ಉದ್ಘಾಟನೆ

Suddi Udaya

ರೆಖ್ಯ: ಬೋರ್‌ವೆಲ್ ವಿಷಯದಲ್ಲಿ ಮಾತುಕತೆ ,: ಹಲ್ಲೆ ಆರೋಪ ಪೊಲೀಸ್ ಠಾಣೆಗೆ ದೂರು

Suddi Udaya

ಲಾಯಿಲ ಗ್ರಾ.ಪಂ. ನಲ್ಲಿ ಗೃಹಜ್ಯೋತಿ ಮರುಪರಿಶೀಲನಾ ಶಿಬಿರಕ್ಕೆ ಚಾಲನೆ: ರಾಜಕೀಯ‌ ಬೇಡ ಯೋಜನೆಯನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಾಡಿ: ಕೆಡಿಪಿ ಸದಸ್ಯ ಸಂತೋಷ್ ಕುಮಾರ್

Suddi Udaya

ಸರಕಾರದ ಎಮ್.ಎಸ್.ಐ.ಎಲ್ ಮದ್ಯದ ಅಂಗಡಿಗೆ ಜನಜಾಗೃತಿ ವೇದಿಕೆ, ಬಾರ್ಯ ಗ್ರಾ.ಪಂ. ಮತ್ತು ಗ್ರಾಮಸ್ಥರಿಂದ ತೀವ್ರ ವಿರೋಧ

Suddi Udaya
error: Content is protected !!