23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ : ರೂ. 1 ಕೋಟಿ ಲಾಭ, ಶೇ. 12 ಡಿವಿಡೆಂಡ್

ಬೆಳ್ತಂಗಡಿ: ಬಾರ್ಯ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಪ್ರವೀಣ್ ರೈ ಪಿ. ಅಧ್ಯಕ್ಷತೆಯಲ್ಲಿ ಸೆ.2 ರಂದು ಬಾರ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷ ಪ್ರವೀಣ್ ರೈ ಮಾತನಾಡಿ ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘ 2020-25ನೇ ಸಾಲಿನ ಆಡಳಿತ ಮಂಡಳಿ ಅವಧಿಯ ಕೊನೆಯ ಮಹಾಸಭೆ ಇದಾಗಿದೆ. ಪ್ರಥಮ ಎರಡುವರೆ ವರ್ಷದ ಅವಧಿಯಲ್ಲಿ ಪ್ರಸನ್ನ ಗೌಡ ರವರು ಅಧ್ಯಕ್ಷರಾಗಿ, ದ್ವಿತೀಯ ಎರಡುವರೆ ವರ್ಷದ ನನ್ನ ಅಧ್ಯಕ್ಷೀಯ ಅವಧಿಯ ಒಟ್ಟು ಐದು ವರ್ಷದಲ್ಲಿ ಪುತ್ತಿಲ ಮತ್ತು ಬಾರ್ಯ ಗ್ರಾಮ ವ್ಯಾಪ್ತಿಯ ಎಲ್ಲಾ ಕೃಷಿಕರಿಗೆ ಮತ್ತು ಇತರ ಸದಸ್ಯ ಬಂಧುಗಳಿಗೆ ಯಾವುದೇ ತಾರತಮ್ಯ ಮಾಡದೆ ಉತ್ತಮ ಸೇವೆಯನ್ನು ನೀಡಿದ್ದೇವೆ. ಸಂಘದಲ್ಲಿ 2906 ಸದಸ್ಯರಿದ್ದು ಒಟ್ಟು ರೂ.25,71,65,421 ಠೇವಣಾತಿಯನ್ನು ಹೊಂದಿದೆ ಮತ್ತು ರೂ.5,02,77,000 ಪಾಲು ಬಂಡವಾಳವನ್ನು ಹೊಂದಿದೆ. ಮತ್ತು ರೂ.68,00,35,758 ದುಡಿಯುವ ಬಂಡವಾಳವನ್ನು ಹೊಂದಿದೆ. ನಮ್ಮ ಸಂಘವು ರೂ.54,84,87,942 ಸಾಲವನ್ನು ರೈತರಿಗೆ ನೀಡಿದೆ. ಪ್ರಸಕ್ತ ಸಾಲಿನಲ್ಲಿ ರೂ.2,81,71,66,790 ವ್ಯವಹಾರ ನಡೆಸಿ, ವಾರ್ಷಿಕವಾಗಿ 1,02,75,120.88 ಲಾಭ ಗಳಿಸಿದ್ದು ಸದಸ್ಯರಿಗೆ ಶೇ.12 ರಷ್ಟು ಡಿವಿಡೆಂಡ್ ನೀಡುವುದಾಗಿ ಹೇಳಿದರು.

2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಯಿತು.

ಉಪಾಧ್ಯಕ್ಷ ಶಿವರಾಮ ಕೆಳಗಿನಂಗಡಿ, ನಿರ್ದೇಶಕರಾದ ಪ್ರಸನ್ನ ಯನ್, ರಾಜೇಶ್ ರೈ ಹೆನ್ನಡ್ಕ, ಪಾರ್ಶ್ವನಾಥ ಜೈನ್ ಕಲ್ಲಾಜೆ, ಶೇಸಪ್ಪ ಸಾಲಿಯಾನ್, ಅಶ್ರಫ್ ಪೊಸೆಕ್ಕೆಲ, ಲಿಡಿಯಾ ಜೆರೋಮ್ ಬ್ರಾಗ್ಸ್ , ಸವಿತಾ ವೆಂಕಟೇಶ್ ಪೂಜಾರಿ, ಪ್ರಸಾದ್ ಮೂರುಗೋಳಿ, ಮೋಹನ್ ಗೌಡ, ಸುರೇಶ್, ದ.ಕ.ಜಿ.ಕೇ.ಸ.ಬ್ಯಾಂಕಿನ ಪ್ರತಿನಿಧಿ ಸಿರಾಜುದ್ದೀನ್, ವೃತ್ತಿಪರ ನಿರ್ದೇಶಕರಾದ ಚಂದ್ರಶೇಖರ್, ಅರುಣ್ ಬಂಗೇರ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಟಿ‌. ವರದಿ ವಾಚಿಸಿದರು. ನಿರ್ದೇಶಕ ಶೇಸಪ್ಪ ಸಾಲಿಯಾನ್ ಸ್ವಾಗತಿಸಿದರು.

Related posts

ಭಾರೀ ಗಾಳಿ ಮಳೆ: ರೆಖ್ಯದಲ್ಲಿ ಮನೆಯ ಮೇಲ್ಚಾವಣಿ ಮತ್ತು ಗೋಡೆ ಕುಸಿತ

Suddi Udaya

ಲಾಯಿಲ: ರಬ್ಬರ್ ತೋಟಕ್ಕೆ ಬೆಂಕಿ: 75 ರಷ್ಟು ಮರಕ್ಕೆ ಹಾನಿ

Suddi Udaya

ಪದ್ಮುಂಜ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕದ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯ ಮಹಾ ಶಿವರಾತ್ರಿ ಉತ್ಸವ ಆಚರಣೆ

Suddi Udaya

ಮಡಂತ್ಯಾರು ಗ್ರಾ.ಪಂ ಕಲಿಕಾ ಕೇಂದ್ರದಲ್ಲಿ ಮಕ್ಕಳ ಗ್ರಾಮ ಸಭೆ

Suddi Udaya

ಧರ್ಮಸ್ಥಳ ಗ್ರಾ.ಯೋ. ವತಿಯಿಂದ ಬೆಳಾಲು ಭಾಗ್ಯೋದಯ ಸ್ವ-ಸಹಾಯ ಸಂಘದ ಸದಸ್ಯೆ ಗೀತಾರವರಿಗೆ ಯು ಶೇಪ್ ವಾಕರ್, ವಿತರಣೆ

Suddi Udaya
error: Content is protected !!