ಬೆಳ್ತಂಗಡಿ: ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮತಿ ಇಲ್ಲದೆ ಯಾವುದೇ ಸುದ್ದಿ ಮತ್ತು ಪ್ರಸ್ತುತ ಘಟನೆಗಳ ಮಾಹಿತಿ ಮತ್ತು ಸುದ್ದಿಯನ್ನು ಬಿತ್ತರಿಸುವಂತಿಲ್ಲ. ರಾಷ್ಟ್ರದ ಹಿತಾಸಕ್ತಿಯಿಂದ ಸುದ್ದಿ ಪ್ರಸಾರಕ್ಕೆ ಸಚಿವಾಲಯದ ಅನುಮತಿ ಅಗತ್ಯ. ಆದರೆ ಯೂಟ್ಯೂಬ್ ಚಾನೆಲ್ ಗಳು ಸುದ್ದಿಯನ್ನು ಮತ್ತು ಸುಳ್ಳು ಸುದ್ದಿಯನ್ನು ಬಿತ್ತರ ಮಾಡಿದ್ದಾರೆ ಎಂದು ಹಿಂದೂ ಹೋರಾಟಗಾರ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೇಳಿದ್ದಾರೆ .

ಪ್ರೊಟೆಕ್ಟೆಡ್ ವಿಟ್ನೆಸ್ ಸ್ಕೀಮ್ ಅಡಿಯಲ್ಲಿದ್ದ ಚಿನ್ನಯ್ಯನ ಕಾನೂನು ಬಾಹಿರವಾಗಿ ಸಂದರ್ಶನ ಮಾಡಿದ್ದಾರೆ. ಚಿನ್ನಯ್ಯನ್ನ ಸಂದರ್ಶನವನ್ನು ದೂರು ದಾಖಲಾತಿಗೂ ಮುನ್ನ ಅಥವಾ ದೂರು ದಾಖಲಾದ ನಂತರ ಅಥವಾ ಆರೋಪಿಯಾದ ನಂತರ ಈ ಮೂರು ರೀತಿಯಲ್ಲಿಯೂ ಸಂದರ್ಶನ ತೆಗೆದುಕೊಂಡಿದ್ದರು ಅದು ಅಪರಾಧ. ಈ ಯೂಟ್ಯೂಬರ್ ಗಳ ಹಣಕಾಸಿನ ಬಗ್ಗೆ ತನಿಖೆ ಆಗಬೇಕು ಈ ನಿಟ್ಟಿನಲ್ಲಿ ಎಸ್.ಐಟಿಗೆ ದೂರು ನೀಡಲಾಗಿದೆ ದೂರನ್ನು ಎಸ್.ಐ.ಟಿ ಅಧಿಕಾರಿ ಸೈಮನ್ ಅವರು ಸ್ವೀಕರಿಸಿ ಹಿಂಬರಹ ನೀಡಿದ್ದಾರೆ ಎಂದು ತಿಳಿಸಿದ್ದಾರೆ.











