September 6, 2026
ವರದಿ

ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ ರೂ.3.03 ಕೋಟಿ ವ್ಯವಹಾರ;ರೂ.13.04 ಲಕ್ಷ ಲಾಭ ; ಶೇಕಡಾ 25 ಡಿವಿಡೆಂಟ್

ಮದ್ದಡ್ಕ: ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ 40ನೇ ವಾರ್ಷಿಕ ಸಾಮಾನ್ಯ ಸಭೆ ಗುರುವಾ ಯನ ಕೆರೆ ಕುಲಾಲ ಮಂದಿರ ದಲ್ಲಿ ಸೆ.3ರಂದು ಸಂಘದ ಅಧ್ಯಕ್ಷ ಕೆ. ಗೋಪಾಲ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಲ್ಲಿ ರೂ. 3.03ಕೋಟಿ ವ್ಯವಹಾರಗಳ ಗಳಿಸಿದ್ದು ರೂ. 13.04ಲಕ್ಷ ಲಾಭ ಗಳಿಸಿ ಸದಸ್ಯರಿಗೆ ಶೇ.65 ಬೋನಸ್, ಶೇ.25 ಡಿವಿಡೆಂಡ್‌ ಘೋಷಿಸಿದರು.ಸಭೆಯಲ್ಲಿ ನಿರ್ದೇಶಕರಾದ ಅಣಿ ಶೆಟ್ಟಿ, ರಮೇಶ್ ಪೂಜಾರಿ, ವಿನೋದ ಶೆಟ್ಟಿ, ಮೋಹನ್ ನಾಯ್ಕ, ಶಿವಪ್ಪ ಗೌಡ, ಶಶಿಕಲಾ, ಕಾಂತಪ್ಪ ಮೂಲ್ಯ, ರುದೇಶ್ ಕುಮಾರ್, ನಾರಾಯಣ ಮೂಲ್ಯ, ವಸಂತಿ, ಉಪಸ್ಥಿರಿದ್ದರು.

ಕೆ.ಎಂ.ಎಫ್. ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಮತ್ತು ವಿಸ್ತರಣಾಧಿಕಾರಿ ಸುಚಿತ್ರ ರೈತರಿಗೆ ಮಾಹಿತಿ ನೀಡಿದರು. ಸಂಘದ ಸದಸ್ಯರ ಮಕ್ಕಳಾದ ಎಸ್ಎಸ್‌ಎಲ್‌ಸಿ ಹಾಗೂ ಪಿ.ಯುಸಿ ಯವರಿಗೆ ತಲಾ 2000ರಂತೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಉಪಾಧ್ಯಕ್ಷ ವಿವೇಕಾನಂದ ಸಾಲಿಯನ್ ಸ್ವಾಗತಿಸಿ, ಕಾರ್ಯದರ್ಶಿ ಪವಿತ್ರ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ, ನಿರ್ದೇಶಕ ಚಿದಾನಂದ ಧನ್ಯವಾದವಿತ್ತರು

Related posts

ಕಕ್ಕೆನೇಜಿ ವಾಸುದೇವ ರಾವ್ ಅವರ ಅಂಗಡಿಯಲ್ಲಿ ಎಲ್ಲರ ಗಮನ ಸೆಳೆದ ತೆಂಗಿನ ಕಾಯಿ

Suddi Udaya

ಮಾ.3: ಬೆಳ್ತಂಗಡಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

Suddi Udaya

ಉಜಿರೆ ಎಸ್.ಡಿ.ಎಂ ಎಜುಕೇಶನಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Suddi Udaya

ವೇಣೂರು ಶ್ರೀ ಧ. ಮಂ. ಐಟಿಐಯ ತರಬೇತಿ ಉದ್ಘಾಟನೆ

Suddi Udaya

ಉಜಿರೆಯಲ್ಲಿ ಐಶ್ವರ್ಯ ಬ್ಯಾಂಗಲ್ ಸ್ಟೋರ್ ಶುಭಾರಂಭ

Suddi Udaya

ಆರೋಗ್ಯ ಇಲಾಖೆ ವತಿಯಿಂದ ನಡೆದ ಪಲ್ಸ್ ಪೊಲೀಯೋ ಅಭಿಯಾನಕ್ಕೆ ಮನ್ ಷ್ಯರ್ ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳ ಸಾಥ್

Suddi Udaya
error: Content is protected !!