23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಮಹಾಸಭೆ

ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಅಜಿತ್ ಜಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸೆ.5ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಿತು.

ಸಂಘವು ವರದಿ ಸಾಲಿನಲ್ಲಿ ರೂ.1100 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ.3.00ಕೋಟಿ ನಿವ್ವಳ ಲಾಭ ಗಳಿಸಿದ್ದು ಸಂಘದ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಸದಸ್ಯರಿಗೆ ಶೇ.18 ಡಿವಿಡೆಂಟ್ ಘೋಷಿಸಿದರು.


ಬೆಳ್ತಂಗಡಿಯಲ್ಲಿ ಸೊಸೈಟಿಗೆ 11 1/2 ಸೆಂಟ್ಸ್ ಜಾಗ ಖರೀದಿ ಮಾಡಲಾಗಿದೆ. 2030 ಕ್ಕೆ ಸೊಸೈಟಿಗೆ ಬೆಳ್ಳಿ ಹಬ್ಬ ಸಂದರ್ಭದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಈ ವರ್ಷದಲ್ಲಿ ಧರ್ಮಸ್ಥಳದಲ್ಲಿ ಒಂದು ಶಾಖೆ ಹಾಗೂ ಮಂಗಳೂರಿನಲ್ಲಿ ಮೂರು ಶಾಖೆ ಒಟ್ಟು 4 ಶಾಖೆ ಪ್ರಾರಂಭಗೊಳ್ಳಲಿದೆ ಎಂದರು.

ಮುಖ್ಯ ಕಾರ್ಯನಿರ್ವಣಧಿಕಾರಿ ಸುಜಯ್ ಶೆಟ್ಟಿ ವರದಿ ಮಂಡಿಸಿದರು

ವೇದಿಕೆಯಲ್ಲಿ ನಿರ್ದೇಶಕರಾದ ಎಂ. ಜಿ. ಶೆಟ್ಟಿ.ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜಾ, ಪುಷ್ಪರಾಜ್ ಶೆಟ್ಟಿ, ರಘುರಾಮ ಶೆಟ್ಟಿ, ಕೃಷ್ಣ ರೈ, ಜಯರಾಮ ಭಂಡಾರಿ, ಪುರಂದರ ಶೆಟ್ಟಿ, ಮಂಜುನಾಥ ರೈ, ರಾಜು ಶೆಟ್ಟಿ, ಜಯರಾಮ ಶೆಟ್ಟಿ ಮುಂಡಾಡಿ ಗುತ್ತು, ಸಾರಿಕಾ ಶೆಟ್ಟಿ, ವಿಜಯ ಬಿ. ಶೆಟ್ಟಿ ಖಾಯಂ ಆಹ್ವಾನಿತರು, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

ಸಂಸ್ಥೆಯ ಮಾರ್ಗದರ್ಶಕರಾದ ಉದ್ಯಮಿ ಶಶಿಧರ ಶೆಟ್ಟಿ, ಜಯರಾಮ್ ಶೆಟ್ಟಿ ಅವರ ಸಾಧನೆಯನ್ನು ಸಭೆಗೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷ ಜಯರಾಮ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ದೇರಳಕಟ್ಟೆ ಶಾಖೆಯಲ್ಲಿ ಕೆಲಸ ಮಾಡಿದ ನವೀನ್ ರೈರವನ್ನು ಗೌರವಿಸಿ ಬೀಳ್ಕೊಡಲಾಯಿತು.
ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮವನ್ನು ನಿರೂಪಿಸಿ, ಉಪಾಧ್ಯಕ್ಷ ಜಯಂತ ಶೆಟ್ಟಿ ಸ್ವಾಗತಿಸಿ, ನಿರ್ದೇಶಕರಾದ ಸೀತಾರಾಮ್ ಶೆಟ್ಟಿ ಧನ್ಯವಾದವಿತ್ತರು.

Related posts

ಡಾ ರವೀಶ್ ಪಡುಮಲೆಗೆ ಅಕ್ಷಯ ಗುರು ಪುರಸ್ಕಾರ

Suddi Udaya

ಸಿಯೋನ್ ಆಶ್ರಮ: ರಾಷ್ಟ್ರೀಯ ಸೇವಾ ಯೋಜನಾ ಶಿಬಿರ

Suddi Udaya

ಕೊಕ್ಕಡ ಪ್ರಾ.ಕೃ.ಪ.ಸ. ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಕಕ್ಕಿಂಜೆ ಸರಕಾರಿ ಪ್ರೌಢಶಾಲೆಯಲ್ಲಿ ವಿಜ್ರಂಭಣೆಯ ಸ್ವಾತಂತ್ರ್ಯ ದಿನಾಚರಣೆ

Suddi Udaya

ಅದೂರುಪೇರಾಲ್ ಸ.ಹಿ.ಪ್ರಾ. ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ವಿನಯ ಕೆ.

Suddi Udaya

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಭಟ್ ಗೆ ಸನ್ಮಾನ

Suddi Udaya
error: Content is protected !!