ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಿಂದ 1500ನೇ ಈದ್ ಮಿಲಾದ್ ರ್‍ಯಾಲಿಗೆ ಖತೀಬ್ ಜನಾಬ್ ಕಲಂದರ್ ಶಾಫಿ ಬಾಖವಿ ದುವಾ ಪ್ರಾರ್ಥನೆ ಮಾಡಿ ಚಾಲನೆ ನೀಡಿದರು. ನಂತರ ಮೌಲೂದ್ ಪಾರಾಯಣ ನಡೆಯಿತು.
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ರಫೀಕ್ ಪಡ್ಡ, ಕೋಶಾಧಿಕಾರಿ ಪಿಜೆ ಮಹಮೂದ್, ಜತೆ ಕಾರ್ಯದರ್ಶಿ ಅಬ್ದು ಸಲಾಂ ಕೇಶವನಗರ, ಲೆಕ್ಕ ಪರಿಶೋಧಕ ಇದ್ರಿಸ್ ಪುಲಾಬೆ, ಸದಸ್ಯರುಗಳಾದ ಇರ್ಪಾನ್ ಯು.ಕೆ., ಅಶ್ರಫ್ ಕಿರೋಡಿ, ಅಶ್ರಫ್ ಗಾಂಧಿನಗರ ಹಾಗೂ ಜಮಾತಿನ ಗಣ್ಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.











