September 6, 2026
ರಾಜಕೀಯ

ಕಳಿಯ, ನ್ಯಾಯತರ್ಪು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ

ಕಳಿಯ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಸೆ 06 ರಂದು ನಡೆದ ಕಳಿಯ, ನ್ಯಾಯತರ್ಪು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ ಗೇರುಕಟ್ಟೆ ಸಿ ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪಕ್ಷದ ಹಿರಿಯ ಕಾರ್ಯಕರ್ತರಾದ ಪೂವಪ್ಪ ಶೆಟ್ಟಿ ಬಿಳಿಬೈಲು ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಗುರುವಾಯನಕೆರೆ ಉದ್ಘಾಟನಾ ಭಾಷಣ ಮಾಡಿದರು. ರವಿ ಇಲಂತಿಲ, ಪ್ರಮುಖರಾದ ಗೋಪಾಲಕೃಷ್ಣ ಕುಕ್ಕಳ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸೀತಾರಾಮ ಬೆಳಾಲು,ಕುವೆಟ್ಟು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಗುರುವಾಯನಕೆರೆ ಯವರು ಬೈಠಕ್ ನೀಡಿದರು. ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ರವರು ಸಮಾರೋಪ ಭಾಷಣ ಮಾಡಿ, ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಕಳಿಯ ಪಂಚಾಯತ್ ಅಧ್ಯಕ್ಷರಾದ ದಿವಾಕರ ಮೆದಿನ, ಕಳಿಯ ಸಿ. ಎ ಬ್ಯಾಂಕ್ ಅಧ್ಯಕ್ಷರಾದ ವಸಂತ ಮಜಲು,
ಕುವೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಚಂದ್ರಕಾಂತ ಗೌಡ ನಿಡ್ಡಾಜೆ,ಕಳಿಯ ಶಕ್ತಿ ಕೇಂದ್ರ ಪ್ರಮುಖ್ ಕರುಣಾಕರ ಶೆಟ್ಟಿ, ನ್ಯಾಯತರ್ಪು ಶಕ್ತಿ ಕೇಂದ್ರ ಪ್ರಮುಖ್ ವಿಜಯ ಗೌಡ ಕಲಾಯಿದೊಟ್ಟು, ಕಳಿಯ ಪಂಚಾಯತ್ ಸದಸ್ಯರುಗಳು, ಬೂತ್ ಅಧ್ಯಕ್ಷರುಗಳು, ಪದಾಧಿಕಾರಿಗಳು, ಹಾಗು ಅನನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಕರುಣಾಕರ ಶೆಟ್ಟಿ ಸ್ವಾಗತಿಸಿ, ರಾಜೇಶ್ ಪೆರ್ಮುಡ ಬಿಜೆಪಿ ಗೀತೆ ಹಾಡಿ, ಕಾರ್ಯಕ್ರಮ ನಿರೂಪಿಸಿ, ವಿಜಯ ಗೌಡ ಕಲಾಯಿದೊಟ್ಟು ಧನ್ಯವಾದವಿತ್ತರು.

Related posts

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರ ಚುನಾವಣಾ ಕಚೇರಿ ಉದ್ಘಾಟನೆ

Suddi Udaya

ಪಾರೆಂಕಿ: ಹಾರಬೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ

Suddi Udaya

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಫೆರ್ನಾಂಡಿಸ್ ನೇಮಕ

Suddi Udaya

ಸಮಾಜ ಸೇವಕ ಅಜೇಯ್ ಜೇಕಬ್ ಮಟ್ಲರವರ ನೇತೃತ್ವದಲ್ಲಿ ಹಲವು ಮಂದಿ ಬಿಜೆಪಿಗೆ ಸೇರ್ಪಡೆ

Suddi Udaya

ಭಾರತದ ಉಪ ರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್‌ರವರಿಂದ ಸಿರಿ ಸಂಸ್ಥೆಯ ‘ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ

Suddi Udaya

ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅಂತರಿಕ ಕಚ್ಚಾಟ ಬಹಿರಂಗ: ಬೂತುಗಳಲ್ಲಿ ಹಣ ಸಮರ್ಪಕವಾಗಿ ನಿರ್ವಹಣೆಯಾಗಿಲ್ಲ ಎಂದು ಹೇಳಿದ ಕಾರ್ಯಕರ್ತನನ್ನು ತಡೆದ ಬಂಗೇರ: ಬಂಗೇರ ಮಾತನ್ನು ವಿರೋಧಿಸಿ, ಸಭೆಯಿಂದ ಹೊರ ನಡೆದ ಪತ್ರಕರ್ತರು

Suddi Udaya
error: Content is protected !!