37.9 C
ಪುತ್ತೂರು, ಬೆಳ್ತಂಗಡಿ
March 6, 2026
ರಾಜಕೀಯ

ನಡ -ಕನ್ಯಾಡಿ ಶಕ್ತಿ ಕೇಂದ್ರದ ಅಭ್ಯಾಸ ವರ್ಗ

ನಡ :ಲಾಯಿಲ ಮಹಾಶಕ್ತಿ ಕೇಂದ್ರದ ನಡ -ಕನ್ಯಾಡಿ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದ ಅಂಗಣದಲ್ಲಿ ನೆರವೇರಿತು. ಅಭ್ಯಾಸ ವರ್ಗದ ಉದ್ಘಾಟನೆಯನ್ನು ಹಿರಿಯರಾದ ರಾಘವ ಆಚಾರ್ಯ ಇವರು ನೆರವೇರಿಸಿದರು ಜೊತೆಗೆ ಲಾಯಿಲ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ್ ಲಾಯಿಲ, ವರ್ಗದ ಲಾಯಿಲ ಮಹಾಶಕ್ತಿ ಕೇಂದ್ರದ ಪ್ರಭಾರಿ ಜಯಂತ್ ಗೌಡ ಗುರಿಪಳ್ಳ ಹಾಗೂ ಉದ್ಘಾಟನಾ ಭಾಷಣವನ್ನು ಪ್ರಮುಖರಾದ ಅಜಿತ್ ಅರಿಗ ಇವರು ನಡೆಸಿ ಕೊಟ್ಟರು.
ಪ್ರಥಮ ಅವಧಿಯನ್ನು ರವಿ ಇಳಂತಿಲ, ಎರಡನೆಯ ಅವಧಿಯನ್ನು ಜಿಲ್ಲೆಯ ಕಾರ್ಯದರ್ಶಿ ಸೀತಾರಾಮ ಬೆಲಾಳ್, ಮೂರನೇ ಅವಧಿಯನ್ನು ಸುಧೀರ್ ಸುವರ್ಣ ಇವರು ನೆರವೇರಿಸಿದರು.


ಸಮಾರೋಪ ಸಮಾರಂಭದ ಮುಖ್ಯ ಭಾಷಣಕಾರರಾಗಿ ವಿಧಾನಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಇವರು ಸಮಾರೋಪದ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರಂಕಿ, ಜಿಲ್ಲೆಯ ರೈತ ಮೋರ್ಚಾ ಅಧ್ಯಕ್ಷರಾದ ಗಣೇಶ್ ನಾವೂರು, ನಡ ಪಂಚಾಯತ್ ಅಧ್ಯಕ್ಷರಾದ ಮಂಜುಳಾ,ನಡ ಶಕ್ತಿ ಕೇಂದ್ರ ಅಧ್ಯಕ್ಷರಾದ ವಿಜಯ ಗೌಡ ಹಾಗೂ ಕನ್ಯಾಡಿ ಶಕ್ತಿ ಕೇಂದ್ರ ಅಧ್ಯಕ್ಷ ಅಶೋಕ್ ಶೆಟ್ಟಿ ಇವರು ಉಪಸ್ಥಿತರಿದ್ದರು.
ಅಭ್ಯಾಸ ವರ್ಗದಲ್ಲಿ ನಡ ಪಂಚಾಯತ್ ಸದಸ್ಯರುಗಳು, ಹಾಲಿನ ಸೊಸೈಟಿಯ ನಿರ್ದೇಶಕರುಗಳು, ಬೂತ್ ಅಧ್ಯಕ್ಷ ಕಾರ್ಯದರ್ಶಿಗಳು, ಹಾಗೂ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು..

Related posts

ಶಾಸಕ ಹರೀಶ್ ಪೂಂಜಾ ವಿರುದ್ಧದ ಕೇಸ್ ಗೆ ಹೈಕೋರ್ಟ್ ತಡೆ

Suddi Udaya

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರ ಚುನಾವಣಾ ಕಚೇರಿ ಉದ್ಘಾಟನೆ

Suddi Udaya

ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿ ಅಬ್ದುಲ್ ರಹಿಮಾನ್ ಪಡ್ಪು

Suddi Udaya

ಸೆ.1: ಬಿಜೆಪಿಯಿಂದ ಧರ್ಮಸ್ಥಳ ಚಲೋ-ಬೃಹತ್ ಸಮಾವೇಶ ಕೇಂದ್ರ, ರಾಜ್ಯ ಪ್ರಮುಖರು ಭಾಗಿ-ಲಕ್ಷಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆ ಪತ್ರಿಕಾಗೋಷ್ಠಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾಹಿತಿ

Suddi Udaya

ಶಾಸಕ ಹರೀಶ್ ಪೂಂಜರಿಂದ ಮ್ಯಾರಥನ್ ಜನಸ್ಪಂದನ ಸಭೆ

Suddi Udaya

ಡಾ. ಮನಮೋಹನ್ ಸಿಂಗ್ ಅವರ ಸಾಧನೆ, ಕೊಡುಗೆಗಳು ದೇಶಕ್ಕೆ ಎಂದಿಗೂ ಅಜರಾಮರ: ರಕ್ಷಿತ್ ಶಿವರಾಂ

Suddi Udaya
error: Content is protected !!