September 6, 2026
ರಾಜಕೀಯ

ಕೊಯ್ಯೂರು ಬಿಜೆಪಿಶಕ್ತಿ ಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮ

ಕೊಯ್ಯೂರು :ಭಾರತೀಯ ಜನತಾ ಪಾರ್ಟಿ ಕೊಯ್ಯೂರು ಶಕ್ತಿ ಮಂಡಲ ಇದರ ಅಭ್ಯಾಸ ವರ್ಗ ಕಾರ್ಯಕ್ರಮ ಸೆ 08 ರಂದು ಕೊಯ್ಯೂರಿನ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆಯಿತು.ದಾಮೋದರ ಗೌಡ ಬೆರ್ಕೆ ಇವರು ಸ್ವಾಗತಿಸಿ,ಪಕ್ಷದ ಹಿರಿಯ ಕಾರ್ಯಕರ್ತರಾದ ಪ್ರಚಂಢಭಾನು ಭಟ್ ಪಾಂಬೇಲು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.. ಈ ವೇಳೆ ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯವರಾದ ಉಮೇಶ್ ಕುಲಾಲ್, ಕುವೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ ಹಾಗೂ ಶಕ್ತಿ ಕೇಂದ್ರ ಪ್ರಮುಖರಾದ ತಾರಾನಾಥ ಗೌಡ ಮೇಗಿನಬಜಿಲ ಇವರುಗಳು ಉಪಸ್ಥಿತರಿದ್ದರು.. ಮೂರು ಅವಧಿಗಳಲ್ಲಿ ನಡೆದ ಈ ಅಭ್ಯಾಸ ವರ್ಗವನ್ನ ಕ್ರಮವಾಗಿ ಯತೀಶ್ ಪಣೆಕ್ಕರ, ಮಹಾಬಲ ಗೌಡ ಬಂದಾರು ಹಾಗು ಸುಧಾಕರ್ ಲಾಯಿಲ ಇವರುಗಳು ನಡೆಸಿಕೊಟ್ಟರು..

ಅಭ್ಯಾಸ ವರ್ಗದ ಸಮಾರೂಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರು ಪಕ್ಷ ಬೆಳೆದು ಬಂದ ಹಾದಿಯ ಬಗ್ಗೆ ಸ್ಪೂರ್ತಿದಾಯಕ ಮಾತುಗಳೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಾದ ವಸಂತಿ ಮಚ್ಚಿನ, ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾದ ಗೀತಾ ರಾಮಣ್ಣ ಗೌಡ, ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ದಯಾಮಣಿ ಮಲೆಬೆಟ್ಟು, ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿಯವರಾದ ಪ್ರಶಾಂತ್ ಪಾರೆಂಕಿ ಇವರುಗಳು ಉಪಸ್ಥಿತರಿದ್ದರು..

ಅಭ್ಯಾಸ ವರ್ಗದಲ್ಲಿ ಗ್ರಾ.ಪಂಚಾಯತ್ ಸದಸ್ಯರುಗಳು, ಕೊಯ್ಯೂರು ಸಹಕಾರಿ ಸಂಘದ ಬ್ಯಾಂಕ್ ನ ನಿರ್ದೇಶಕರುಗಳು, ಕೊಯ್ಯೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕರುಗಳು, ಹಾಗೂ ನೂರಾರು ಕಾರ್ಯಕರ್ತರುಗಳು ಭಾಗಿಯಾಗಿದ್ದರು.. ಕಾರ್ಯಕ್ರಮವನ್ನು ಭರತ್ ಡೆಂಬುಗ ನಿರೂಪಿಸಿದರು..

Related posts

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಫೆರ್ನಾಂಡಿಸ್ ನೇಮಕ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎ.17 ರಂದು ಹರೀಶ್‌ ಪೂಂಜ ನಾಮಪತ್ರ ಸಲ್ಲಿಕೆ

Suddi Udaya

18 ಬಿಜೆಪಿ ಶಾಸಕರ ಅಮಾನತು ವಾಪಸ್ ಪಡೆಯುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ: ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಕಡಿರುದ್ಯಾವರ ಗ್ರಾ.ಪಂ. ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ರುದ್ರಭೂಮಿ ಲೋಕಾರ್ಪಣೆ

Suddi Udaya

ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಭಿನ್ನಮತ ಸ್ಫೋಟ: ಎರಡು ಬಣಗಳ ನಡುವೆ ಮಾತಿನ ಚಕಮಕಿ: ಬೆಳ್ತಂಗಡಿ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಬುಗಿಲೆದ್ದ ಭಿನ್ನಮತ

Suddi Udaya

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ: ಎಸ್ಡಿಪಿಐ ಮುಖಂಡರಿಂದ ಸಮಸ್ಯೆ ಬಗೆಹರಿಸಲು ಮನವಿ

Suddi Udaya
error: Content is protected !!