23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ (ತೆನೆ ) ಹಬ್ಬ

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಇಂದು ಕನ್ಯಾ ಮರಿಯಮ್ಮರವರ ಹುಟ್ಟು ಹಬ್ಬವಾದ ಮೊಂತಿ ಹಬ್ಬ ( ತೆನೆ ಹಬ್ಬ) ವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.


ಬೆಳ್ತಂಗಡಿ ಚರ್ಚ್ ಬಸ್ ಸ್ಟಾಂಡ್ ಸರ್ವಿಸ್ ರೋಡ್ ನಲ್ಲಿ ಹಿಮಾಲಯ ಚಿಕನ್ ಫಾರ್ಮ್ ಬಳಿ ಹಾಕಲಾದ ಭವ್ಯ ಮಂಟಪದಲ್ಲಿ ಕನ್ಯಾ ಮರಿಯಮ್ಮರವರ ಪ್ರಾರ್ಥನೆ ಹಾಗೂ ತೆನೆಯ ಆಶೀರ್ವಚನ ನಡೆಯಿತು.


ಚರ್ಚಿನ ಪ್ರದಾನ ಧರ್ಮ ಗುರುಗಳಾದ ಅತಿ ವಂದನೀಯ ಫಾ. ವಾಲ್ಟರ್ ಡಿಮೆಲ್ಲೋ, ವಂದನೀಯ ಫಾ. ಕ್ಲಿಫರ್ಡ್ ಪಿಂಟೊ, ಅತಿಥಿ ಗುರುಗಳಾದ ವo. ಫಾ. ಕಿರಣ್ ಲೋಬೊ ಹಾಗು ವo. ಫಾ. ಆಲ್ವಿನ್ ಮಾಡ್ತಾರವರು ಹಾಜರಿದ್ದರು. ಫಾ. ಕ್ಲಿಫರ್ಡ್ ಪಿಂಟೊರವರು ಮೊಂತಿ ಹಬ್ಬದ ದಿನದ ಮಹತ್ವವನ್ನು ತಿಳಿಸಿದರು.


ಫಾ. ಕಿರಣ್ ಲೋಬೊರವರು ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿ ಪ್ರಧಾನ ಗುರುಗಳಾದ ಫಾ. ವಾಲ್ಟರ್ ಡಿ’ಮೆಲ್ಲೊ ಪ್ರಾರ್ಥನೆ ನಡೆಸಿಕೊಟ್ಟರು.
ನಂತರ ಭವ್ಯ ಮೆರವಣಿಗೆ ಚರ್ಚ್ ತನಕ ನಡೆಯಿತು. ಚರ್ಚ್ ನಲ್ಲಿ ಸಂಭ್ರಮದ ದಿವ್ಯ ಬಲಿ ಪೂಜೆ, ಹೊಸ ತೆನೆ ಚರ್ಚಿನ ಪ್ರತಿ ಕುಟುಂಬಕ್ಕೆ ವಾಳೆಯ ಗುರಿಕಾರರು ವಿತರಿಸಿದರು. ಕನ್ಯಾ ಮರಿಯಮ್ಮರಿಗೆ ಹೂಗಳನ್ನು ತಂದು ಅರ್ಪಿಸಿದ ಮಕ್ಕಳಿಗೆ ಕಬ್ಬು ಹಾಗೂ ಬಂದಂತಹ ಎಲ್ಲರಿಗೆ ಸಿಹಿಯನ್ನು ವಿತರಿಸಲಾಯಿತು.
ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ, ಪಾಲನ ಮಂಡಳಿಯ ಸದಸ್ಯರು ಹಾಗೂ 18 ವಾಳೆಯ ಗುರಿಕಾರರು ಸಹಕರಿಸಿದರು.

Related posts

ಪಾಂಗಾಳ ಕು. ಸೌಜನ್ಯ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ: ಆ.27 ರಂದು ಹೋರಾಟದಲ್ಲಿ ಭಾಗಿಯಾಗುವಂತೆ ಸೌಜನ್ಯ ತಾಯಿ ಕುಸುಮಾವತಿಯವರಿಗೆ ಆಹ್ವಾನ

Suddi Udaya

ಕಣಿಯೂರು: ವಿದ್ಯುತ್ ತಂತಿ ಸ್ಪರ್ಶಿಸಿ ನವಿಲು ಸಾವು

Suddi Udaya

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

Suddi Udaya

ಸಮಾಜಸೇವಕ ಚಾಂಡಿ ರವರಿಗೆ ವಿನ್ಸೆಂಟ್ ಡಿ’ಪೌಲ್ ದಿನದಲ್ಲಿ ಸನ್ಮಾನ

Suddi Udaya

ತಾಲೂಕು ಪ್ರೌಢಶಾಲಾ ಕಬಡ್ಡಿ ಬೆಳಾಲು ಎಸ್ ಡಿ ಎಂ ಶಾಲಾ ತಂಡ ಪ್ರಥಮ

Suddi Udaya

ಅರಸಿನಮಕ್ಕಿ: ವಾತ್ಸಲ್ಯ ಮನೆಗೆ ಅಡಿಗಲ್ಲು ಕಾರ್ಯಕ್ರಮ

Suddi Udaya
error: Content is protected !!