July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಭಾರತೀಯ ಮಜ್ದೂರು ಸಂಘ ದ.ಕ.: ರಾಜ್ಯಘಟಕದ ತೀರ್ಮಾನಗಳ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಭೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಮಜ್ದೂರು ಸಂಘವು ಸದಾ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಬೃಹತ್ ರಾಷ್ಟ್ರೀಯ ಸಂಘಟನೆ. ಇತ್ತೀಚೆಗೆ ನಡೆದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳನ್ನು, ಜಿಲ್ಲಾ ಘಟಕವು ತಕ್ಷಣ ಅನುಷ್ಠಾನಗೊಳಿಸಿ ಜಿಲ್ಲೆಯ ಎಲ್ಲಾ ಯೂನಿಯನ್ ಮತ್ತು ತಾಲೂಕು ಮಟ್ಟದ ಪ್ರಮುಖರಿಗೆ ತಲುಪಿಸುವ ಮಹತ್ತರ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಿದೆ.


ಆಗಸ್ಟ್ 14 ರಿಂದ ಸೆಪ್ಟೆಂಬರ್ 6 ರವರೆಗೆ ಸುಳ್ಯ, ಪುತ್ತೂರು, ಬಂಟ್ವಾಳ, ಕಡಬ, ಬೆಳ್ತಂಗಡಿ, ಮೂಡಬಿದ್ರೆ ಮತ್ತು ಮಂಗಳೂರು ತಾಲೂಕುಗಳಲ್ಲಿ ಸಮನ್ವಯ ಸಭೆಗಳು ಯಶಸ್ವಿಯಾಗಿ ನಡೆದವು.
ಈ ಸಭೆಗಳಲ್ಲಿ ನೂರಾರು ಕಾರ್ಮಿಕ ಪ್ರತಿನಿಧಿಗಳು ಭಾಗವಹಿಸಿ ರಾಜ್ಯ ಮಟ್ಟದ ನಿರ್ಧಾರಗಳನ್ನು ಚರ್ಚಿಸಿ, ತಮ್ಮ ಸ್ಥಳೀಯ ಸಮಸ್ಯೆಗಳನ್ನೂ ಹಂಚಿಕೊಂಡರು.


ಪ್ರತಿ ಸಭೆಯಲ್ಲಿ ಕಾರ್ಯಕರ್ತರಿಗೆ ಸಂಘಟನೆಯ ಸಿದ್ಧಾಂತ, ಹೋರಾಟದ ಇತಿಹಾಸ ಹಾಗೂ ಮುಂದಿನ ಹಾದಿಯ ಬಗ್ಗೆ ಪ್ರೇರಣಾದಾಯಕ ಚರ್ಚೆಗಳು ನಡೆಯಿತು. ಕಾರ್ಮಿಕರ ಏಕತೆ, ಶಕ್ತಿ, ಸ್ವಾಭಿಮಾನ ಇವುಗಳೇ ಸಮಾಜ ಪರಿವರ್ತನೆಗೆ ದಾರಿ ಎಂದು ಒತ್ತಿಹೇಳಲಾಯಿತು.


ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು, ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಸಂಘಟನಾ ಕಾರ್ಯದರ್ಶಿಗಳಾದ ವಸಂತ್ ಕುಮಾರ್ ಮನಿಹಳ್ಳ ಮತ್ತು ಕುಮಾರ್ ನಾಥ್ ಉಜಿರೆ ಅವರ ನೇತೃತ್ವದಲ್ಲಿ ಹಾಗೂ ರಾಜ್ಯ ಪದಾಧಿಕಾರಿಗಳಾದ ಸತೀಶ್ ಶೆಟ್ಟಿ ಮತ್ತು ಜಯರಾಜ್ ಸಾಲ್ಯಾನ್ ಇವರ ಮಾರ್ಗದರ್ಶನದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಶಿಸ್ತಿನಿಂದ ಮತ್ತು ಶ್ರದ್ಧೆಯಿಂದ ನೆರವೇರಿಸಲ್ಪಟ್ಟವು.

Related posts

ಡಿ.4-5: ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ನೂತನ ಶಿಲಾಮಯ ಧ್ವಜಸ್ತಂಭ ಸ್ಥಾಪನೆ ಮತ್ತು ಶೋಭಾಯಾತ್ರೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗಣಪತಿ ಗುಡಿಯ ಸಮರ್ಪಣಾ ಕಾರ್ಯಕ್ರಮ

Suddi Udaya

ಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನ ದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಏ.24-26: ಕುಂಡದಬೆಟ್ಟು ಮಖಾಂ ಶರೀಫ್ ಉರೂಸ್

Suddi Udaya

ಪ್ರೋ| ಎ. ಕೃಷ್ಣಪ್ಪ ಪೂಜಾರಿಯವರಿಗೆ ಪೇಜಾವರ ಶ್ರೀ ವಿಶ್ವೇಶತೀರ್ಥ “ಜೀವಮಾನ ಸಾಧನಾ ಪ್ರಶಸ್ತಿ”

Suddi Udaya
error: Content is protected !!